ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಪೋನಿನಲ್ಲಿ ಇರಲಿದೆ ಫೇಸ್ ಅನ್‌ಲಾಕ್ ಫೀಚರ್!!
ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ಟ್ವಿಟ್ ಮಾಡಿ ತಿಳಿಸಿದ್ದ ಶಿಯೋಮಿ ಇದೀಗ ಮತ್ತೊಂದು ವಿಡಿಯೋ ಮೂಲಕ ವಿಶ್ವದ ದಿಗ್ಗಜ ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಬೆಚ್ಚಿಬೀಳಿಸಿದೆ.!
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 2018ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿಯೇ ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ಟ್ವಿಟ್ ಮಾಡಿ ತಿಳಿಸಿದ್ದ ಶಿಯೋಮಿ ಇದೀಗ ಮತ್ತೊಂದು ವಿಡಿಯೋ ಮೂಲಕ ವಿಶ್ವದ ದಿಗ್ಗಜ ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಬೆಚ್ಚಿಬೀಳಿಸಿದೆ.!
ಆಪಲ್ ಎಕ್ಸ್ ಸ್ಮಾರ್ಟ್‌ಫೋನಿಗೆ ಟಾಂಗ್ ನೀಡಲು ಶಿಯೋಮಿ ಇದೇ ತಿಂಗಳು ಮಾರ್ಚ್ 27 ನೇ ತಾರೀಖು 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಆ ಸಲುವಾಗಿಯೇ ಶಿಯೋಮಿ ಬಿಡುಗಡೆ ಮಾಡಿರುವ ನೂತನ ವಿಡಿಯೋದಲ್ಲಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.!!

ಈಗಾಗಲೇ ಭಾರೀ ಕುತೋಹಲ ಹುಟ್ಟಿಸಿರುವ 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ದಿನಾಂಕ ಪ್ರಕಟವಾದ ನಂತರ ಇತರೆ ಕಂಪೆನಿಗಳಿಗೆ ಭಯ ಶುರುವಾಗಿದ್ದು, ಹಾಗಾದರೆ, ಆಪಲ್ ಎಕ್ಸ್ ವಿನ್ಯಾಸ, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಯ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

403PPi ಡೆನ್‌ಸಿಟಿ ಡಿಸ್‌ಪ್ಲೇ !!
5.99-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ಹೊರಬಂದಿದ್ದು, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿದೆ.!! 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2 ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ನೇರ ಸೆಡ್ಡು ಹೊಡೆದಿದೆ.!!

ಕ್ಯಾಮೆರಾ ಹೇಗಿದೆ?
ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ರಿಯರ್ ಕ್ಯಾಮೆರಾ ಹೊರಬಂದಿದೆ.! ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಫೋನ್‌ನಲ್ಲಿದೆ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!
ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಕನೆಕ್ಟಿವಿಟಿ ಹೊಂದಿದೆ.!!

ಇತರೆ ಏನೆಲ್ಲಾ ಫೀಚರ್ಸ್?
ವಿಶ್ವದ ಟಾಪ್ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳ ಜೊತೆಗೆ ಫೇಸ್ ಅನ್‌ಲಾಕ್ ಫೀಚರ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ತರಲಾಗಿದೆ.!!


ಶಿಯೋಮಿ ಮೈ ಮಿಕ್ಸ್ 2 ಬೆಲೆ.!
ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಶಿಯೋಮಿ ಕಂಪೆನಿ ಈ ಹೈ ಎಂಡ್ ಫೋನ್ ಶಿಯೋಮಿಮೈ ಮಿಕ್ಸ್ 2 6GB RAM ಹಾಗೂ 128GB ವೆರಿಯಂಟ್ ಸ್ಮಾರ್ಟ್‌ಫೊನ್ ಬೆಲೆ ಚೀನಾದಲ್ಲಿ 4000 CNYಗೆ ಬಿಡುಗಡೆಯಾಗಲಿದೆಎನ್ನಲಾಗಿದೆ. ಅಂದರೆ ಭಾರತದಲ್ಲಿ 39 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿರಲಿದೆ ಎನ್ನಬಹುದು.!!


Click it and Unblock the Notifications








