ಆಪಲ್ X ವಿನ್ಯಾಸದಲ್ಲಿ ಬರುತ್ತಿದೆ ಶಿಯೋಮಿಯ "ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್!!
ಚೀನಾದ ಜಾಲತಾಣ ವಿಬೋದಲ್ಲಿ ಈ "ಶಿಯೋಮಿ ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್ ಚಿತ್ರ ಹರಿದಾಡಿ ಎಲ್ಲರಿಗೂ ಕುತೋಹಲ ಮೂಡಿಸಿದೆ.!!
ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ಪೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಶಿಯೋಮಿ ಕಂಪೆನಿ ಇದೀಗ ಆಪಲ್ 1೦ ವಿನ್ಯಾಸ ಹೊಂದಿರುವ ಸ್ಮಾರ್ಟ್‌ಫೋನ್ ತರಲು ಪ್ರಯತ್ನಿಸುತ್ತಿದೆ.!! ಹೌದು, ಚೀನಾದ ಜಾಲತಾಣ ವಿಬೋದಲ್ಲಿ ಈ "ಶಿಯೋಮಿ ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್ ಚಿತ್ರ ಹರಿದಾಡಿ ಎಲ್ಲರಿಗೂ ಕುತೋಹಲ ಮೂಡಿಸಿದೆ.!!

ಭಾರತ ಸೇರಿದಂತೆ ಹಲವೆಡೆ ಭಾರಿ ಯಶ್ಸ್ಸನ್ನು ಗಳಿಸಿರುವ ಮೂರನೇ ತಲೆಮಾರಿನ ಸ್ಮಾರ್ಟ್‌ಫೋನ್ ಉತ್ಪಾದನೆಗೆ ಶಿಯೋಮಿ ಒಲವು ತೋರಿದ್ದು, ಹಾಗಾಗಿ, ಬೆಜೆಲ್ ಲೆಸ್ ಡಿಸ್‌ಪ್ಲೇ ಮತ್ತು ಆಪಲ್ 1೦ ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಶಿಯೋಮಿ ಮೈ ಮಿಕ್ಸ್2 ಎಸ್ ಸ್ಮಾರ್ಟ್‌ಫೋನ್ ಹೊರತಡುತ್ತಿದೆ ಎಂದು ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

ಶೀಯೋಮಿ ಕಂಪೆನಿಯ ಪ್ರಸ್ತುತ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಾದ ಶಿಯೋಮಿ ಮೈ ಮಿಕ್ಸ್ 2 ಸೀರೀಸ್‌ಲ್ಲಿಯೇ ನೂತನ ಸ್ಮಾರ್ಟ್‌ಫೋನ್ ಇರುವುದು ಎಂದು ಹೇಳಲಾಗಿದ್ದು, ಹಾಗಾದರೆ, ಈಗಾಗಲೇ ಹೆಚ್ಚು ಜನಪ್ರಿವಾಗಿರುವ ಶಿಯೋಮಿ ಮಿಕ್ಸ್ 2 ಫೀಚರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

403PPi ಡೆನ್‌ಸಿಟಿ ಡಿಸ್‌ಪ್ಲೇ !!
5.99-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ಹೊರಬಂದಿದ್ದು, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿದೆ.!! 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2 ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ನೇರ ಸೆಡ್ಡು ಹೊಡೆದಿದೆ.!!


ಕ್ಯಾಮೆರಾ ಹೇಗಿದೆ?
ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ರಿಯರ್ ಕ್ಯಾಮೆರಾ ಹೊರಬಂದಿದೆ.! ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಫೋನ್‌ನಲ್ಲಿದೆ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!
ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಎಲ್ಲವಕ್ಕೂ ಕನೆಕ್ಟಿವಿಟಿ ಹೊಂದಿದೆ.!!

ಬೇರೆ ಏನೆಲ್ಲಾ ಪೀಚರ್ಸ್!!
ವಿಶ್ವದ ಟಾಪ್ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ.ಮತ್ತು 3400mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

ಶಿಯೋಮಿ ಮಿಕ್ಸ್ 2 ಬೆಲೆ.!!
ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಶಿಯೋಮಿ ಕಂಪೆನಿ ಈ ಹೈ ಎಂಡ್ ಫೋನ್ ಶಿಯೋಮಿ ಮಿಕ್ಸ್ 2 6GB RAM ಹಾಗೂ 128GB ವೆರಿಯಂಟ್ ಸ್ಮಾರ್ಟ್‌ಫೊನ್ ಬೆಲೆ ಭಾರತದಲ್ಲಿ 35,999 ರೂಪಾಯಿಗಳಾಗಿವೆ.!! ಫೀಚರ್ಸ್‌ಗೆ ತಕ್ಕಂತೆ ಬೆಲೆ ಕೂಡ ಇದೆ ಎಂದರೆ ತಪ್ಪಾಗಲಾರದು.!!


Click it and Unblock the Notifications








