Subscribe to Gizbot

ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್..!

Posted By: -

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಿಯೋಮಿ ಮಾರುಕಟ್ಟೆಗೆ ಲಾಂಚ್ ಮಾಡಲಿರುವ ಶಿಯೋಮಿ ಮಿ ಮಿಕ್ಸ್ 2S ಫೋಟೋಗಳು ಲೀಕ್ ಆಗಿದೆ. ಇದೇ ತಿಂಗಳ 27ರಂದು ಮಾರುಕಟ್ಟೆಗೆ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಬಿಡುಗಡೆಗೂ ಮುನ್ನವೇ ಫೋನಿನ ರಿಯಲ್ ಇಮೇಜ್ ಗಳು ಲೀಕ್ ಆಗಿದ್ದು, ಹೆಚ್ಚು ಸದ್ದು ಮಾಡುತ್ತಿವೆ.

ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್

ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ನಲ್ಲಿ ಇನ್ ಸ್ಕ್ರಿನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದು ಶಿಯೋಮಿ ಪೋನ್ ಗಳಲ್ಲೇ ಮೊದಲು ಎನ್ನಲಾಗಿದೆ. ಈ ಹೊಸ ಆಯ್ಕೆಯೂ ಸ್ಮಾರ್ಟ್ ಪೋನಿಗೆ ಯೂನಿಕ್ ವಿನ್ಯಾಸವನ್ನು ಕಾಣುವಂತೆ ಮಾಡಿದೆ.

ಶಿಯೋಮಿ ಮಿ ಮಿಕ್ಸ್ 2 ಮುಂದುವರೆದ ಭಾಗವಾಗಿರುವ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನಿನಲ್ಲಿ 6.01 ಇಂಚಿನ OLED ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಈ ಡಿಸ್ ಪ್ಲೇಯನ್ನು ಸ್ಯಾಮ್ ಸಂಗ್ ನಿಂದ ಶಿಯೋಮಿ ಖರೀದಿಸಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಜೊತೆಗ FHD ಗುಣಮಟ್ಟದ ಡಿಸ್ ಪ್ಲೇ ಇದಾಗಿದ್ದು, ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಇದಲ್ಲದೇ ವೇಗದ ಕಾರ್ಯಚರಣೆಗಾಗಿ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ನೀಡಲಾಗಿದೆ. ಅಲ್ಲದೇ ಇದು 256 GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಇದರೊಂದಿಗೆ 8GB RAM ಸಹ ಇರಲಿದ್ದು, ವೇಗದ ಕಾರ್ಯಚರಣೆಗೆ ಉತ್ತಮವಾದ ಫೋನ್ ಇದಾಗಿದೆ.
ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್

ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, ಇದು ಸೋನಿ ಲೆನ್ಸ್ ಆಗಲಿದ್ದು, ಜೊತೆಗೆ ಹೆಚ್ಚಿನ ಬ್ಯಾಕಪ್ ಗಾಗಿ 3400mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೊದಲ್ಲಿ ಕಾರ್ಯನಿರ್ವಹಿಸಲಿದೆ. ಮಾರುಕಟ್ಟೆಗೆ ಬರುವ ಮುನ್ನೇ ಸಾಕಷ್ಟು ಸದ್ದು ಮಾಡುತ್ತಿದ್ದು, ಬಿಡಗಡೆಯಾದ ಮೇಲೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ.

English summary
Xiaomi Mi MIX 2S real images spotted with Under-Display Fingerprint Scanner. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot