ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಲಾಂಚ್: ಟಾಪ್‌ಎಂಡ್ ಫೋನ್‌ಗಳಿಗೆ ಪೈಫೋಟಿ..!
ಮಾರುಕಟ್ಟೆಯಲ್ಲಿ ತೀವ್ರ ಕುತೂಹಲವನ್ನು ಹುಟ್ಟಿಹಾಕಿದ್ದ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ಶಿಯೋಮಿಯ ಈ ಟಾಪ್‌ಎಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ ಎನ್ನಲಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಮಾಹಿತಿಯಲ್ಲಿ ಆಯ್ಕೆಗಳನ್ನು ಹೊಂದಿದೆ.

ಸೆರಾಮಿಕ್ಸ್ ಬಾಡಿಯನ್ನು ಹೊಂದಿರುವ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ನಲ್ಲಿ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಈ ಹಿಂದಿನ ಫೋನ್‌ಗಿಂತಲೂ ಉತ್ತಮವಾದ ಕ್ಯಾಮೆರಾ ಮತ್ತು ಇಂಟರ್ನಲ್ ಹಾರ್ಡ್‌ವೇರ್ ಅನ್ನು ಹೊಂದಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬುದ್ದಿ ಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಡ್ಯುಯಲ್ ಕ್ಯಾಮೆರಾ:
ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಹೈಲೈಟ್‌ಗಳಲ್ಲಿ ಒಂದಾಗಿರುವುದು ಡ್ಯುಯಲ್ ಕ್ಯಾಮೆರಾ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12MP + 12MP ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಒಂದು ಟೆಲಿ ಲೈನ್ಸ್ ಆಗಿದ್ದು, ಮತ್ತೊಂದು ವೈಡ್ ಆಂಗಲ್ ಲೈನ್ಸ್ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಪ್ಟಿಕಲ್ ಇಮೇಜ್ ಸ್ಟಬಲೈಜೆಷನ್ ಆಯ್ಕೆಯನ್ನು ಹೊಂದಿದೆ. ಇದರಿಂದ ಚಿತ್ರಗಳು ಉತ್ತಮವಾಗಿ ಮೂಡಿರಲಿದೆ.

ಡಿಸ್‌ಪ್ಲೇ:
ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ನಲ್ಲಿ 6 ಇಂಚಿನ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಫುಲ್ ಸ್ಕ್ರಿನ್ 2.೦ ವನ್ನು ಸಹ ನೀಡಲಾಗಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್, MIUI 9 ನೊಂದಿಗೆ ಕಾಣಿಸಿಕೊಳ್ಳಲಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ಕೃತಕ ಬುದ್ದಿಮತ್ತೆಯನ್ನು ಸಹ ಅಳವಡಿಸಲಾಗಿದ್ದು, ಇದು ಸ್ಮಾರ್ಟ್ ಫೋನ್ ವೇಗ ಮತ್ತು ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಶಕ್ತವಾಗಿದೆ.

ವೇಗದ ಪ್ರೋಸೆಸರ್:
ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆವೃತ್ತಿಯಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಪ್ರೋಸೆಸರ್ ಕ್ವಾಲ್ಕಮ್ 845 ಅನ್ನು ಹೊಂದಿದ್ದು, ಇದು ಸ್ಮಾರ್ಟ್‌ಫೋನ್ ವೇಗವನ್ನು ಸಾಕಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ. ಅಲ್ಲದೇ ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ನಷ್ಟೆ ವೇಗವಾಗಿ ಕಾರ್ಯನಿರ್ವಹಿಸಲಿದೆ.


ಮೂರು ಆವೃತ್ತಿಯಲ್ಲಿ ಲಭ್ಯ:
ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು, 6GB RAM/64GB ಇಂಟರ್ನಲ್ ಮೆಮೊರಿಯ ಸ್ಮಾರ್ಟ್‌ಫೋನ್ ಅಂದಾಜು ಬೆಲೆ ರೂ.34,200ಗಳಾಗಲಿದ್ದು, ಇದೇ ಮಾದರಿಯಲ್ಲಿ 6GB RAM/128GB ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಅಂದಾಜು ಬೆಲೆ ರೂ.37,300 ಆಗಲಿದೆ. ಇದೇ ಮಾದರಿಯಲ್ಲಿ ಟಾಪ್ ಎಂಡ್ ಆವೃತ್ತಿಯು 8GB RAM/256GB ಇಂಟರ್ನಲ್ ಮೆಮೊರಿ ಹೊಂದಿದ್ದು, ಬೆಲೆಯೂ ರೂ. 41,400ಗಳಾಗಲಿದೆ. ಇದರೊಂದಿಗೆ ವೈರ್‌ಲೈಸ್ ಚಾರ್ಜರ್ ಅನ್ನು ನೀಡಲಾಗಿದ್ದು, ರೂ.1000ಕ್ಕೆ ದೊರೆಯುವ ಸಾಧ್ಯತೆ ಇದೆ.


Click it and Unblock the Notifications