Subscribe to Gizbot

ಫೆಬ್ರವರಿ 26ಕ್ಕೆ ಶಿಯೋಮಿ "ಮೈ ಮಿಕ್ಸ್ 2ಎಸ್" ರಿಲೀಸ್!..ವಿಶ್ವ ಮೊಬೈಲ್ ಮಾರುಕಟ್ಟೆಗೆ ಈಗಲೇ ನಡುಕ!!

Written By:

ಹೈ ಎಂಡ್ ಫೀಚರ್ಸ್ ಹೊತ್ತು ಬರುತ್ತಿರುವ "ಶೀಯೋಮಿ ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ಈ ವರ್ಷದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗುವುದು ನಿಶ್ಚಿತವಾಗಿದೆ.! ಇದೇ ತಿಂಗಳು 26 ನೇ (ಫೆಬ್ರವರಿ 26 2018) ತಾರೀಖಿನಂದು ಆಯೋಜನೆಯಾಗಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ.!!

ಶಿಯೋಮಿ ಕಂಪೆನಿ ಅತಿ ನೂತನ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಅನ್ನು "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನಿನಲ್ಲಿ ತರುತ್ತಿದೆ. ಹಾಗಾಗಿ, 845 SOC ಪ್ರೊಸೆಸರ್ ಅಳವಡಿಸಿಕೊಳ್ಳುತ್ತಿರುವ ಶಿಯೋಮಿಯ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೂ "ಶೀಯೋಮಿ "ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ಪಾತ್ರವಾಗಲಿದೆ.!!

ಫೆಬ್ರವರಿ 26ಕ್ಕೆ ಶಿಯೋಮಿ

ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಮಾತ್ರವಲ್ಲದೇ ಇನ್ನಿತನ ಫೀಚರ್ಸ್‌ಗಳಿಂದಲೂ ಶೀಯೋಮಿ ಮೈ ಮಿಕ್ಸ್ 2ಎಸ್'' ಸ್ಮಾರ್ಟ್‌ಫೋನ್ ವಿಶ್ವದ ಗಮನ ಸೆಳೆದಿದ್ದು, ಆಪಲ್ ಎಕ್ಸ್ ವಿನ್ಯಾಸದಲ್ಲಿ ಬರಲಿದೆ ಎನ್ನಲಾಗಿರುವ ಈ ಫೋನಿನ ಇತರೆ ಫೀಚರ್ಸ್‌ಗಳೆನು? ಮತ್ತು ಬೆಲೆ ಎಷ್ಟಿರಬಹುದು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
403PPi ಡೆನ್‌ಸಿಟಿ ಡಿಸ್‌ಪ್ಲೇ !!

403PPi ಡೆನ್‌ಸಿಟಿ ಡಿಸ್‌ಪ್ಲೇ !!

5.99-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್‌ ಮೂಲಕ ಶಿಯೋಮಿ ಮೈ ಮಿಕ್ಸ್ 2 ಹೊರಬಂದಿದ್ದು, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿದೆ.!! 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2 ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ನೇರ ಸೆಡ್ಡು ಹೊಡೆದಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ರಿಯರ್ ಕ್ಯಾಮೆರಾ ಹೊರಬಂದಿದೆ.! ರಿಯರ್ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಫೋನ್‌ನಲ್ಲಿದೆ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಶಿಯೋಮಿ ಮೈ ಮಿಕ್ಸ್ 2 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಎಲ್ಲವಕ್ಕೂ ಕನೆಕ್ಟಿವಿಟಿ ಹೊಂದಿದೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ವಿಶ್ವದ ಟಾಪ್‌ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ.ಮತ್ತು 3400mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

ಶಿಯೋಮಿ ಮೈ ಮಿಕ್ಸ್ 2 ಬೆಲೆ.!

ಶಿಯೋಮಿ ಮೈ ಮಿಕ್ಸ್ 2 ಬೆಲೆ.!

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಶಿಯೋಮಿ ಕಂಪೆನಿ ಈ ಹೈ ಎಂಡ್ ಫೋನ್ ಶಿಯೋಮಿಮೈ ಮಿಕ್ಸ್ 2 6GB RAM ಹಾಗೂ 128GB ವೆರಿಯಂಟ್ ಸ್ಮಾರ್ಟ್‌ಫೊನ್ ಬೆಲೆ ಚೀನಾದಲ್ಲಿ 4000 CNYಗೆ ಬಿಡುಗಡೆಯಾಗಲಿದೆಎನ್ನಲಾಗಿದೆ. ಅಂದರೆ ಭಾರತದಲ್ಲಿ 39 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿರಲಿದೆ ಎನ್ನಬಹುದು.!!

ಶಿಯೋಮಿ ಎಫೆಕ್ಟ್!!..ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆಯಲ್ಲಿ ಭಾರಿ ಇಳಿಕೆ!!

ಶಿಯೋಮಿ ಎಫೆಕ್ಟ್!!..ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆಯಲ್ಲಿ ಭಾರಿ ಇಳಿಕೆ!!

ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಕಿರೀಟ ಕಳೆದುಕೊಂಡಿರುವ ಸ್ಯಾಮ್‌ಸಂಗ್ ಇದೀಗ ಚೀನಾ ಮೊಬೈಲ್ ಕಂಪೆನಿಗಳೊಂದಿಗೆ ದರಸಮರಕ್ಕೆ ಇಳಿದಿದೆ.! ಸ್ಮಾರ್ಟ್‌ಪೋನ್ ಮಾರಾಟದಲ್ಲಿ ಕುಸಿತವಾದ ನಂತರ ತನ್ನ ಫೋನ್‌ಗಳ ಬೆಲೆಯನ್ನು ಭಾರಿ ಇಳಿಕೆ ಮಾಡಿ ಮಾರುಕಟ್ಟೆಯಲ್ಲಿ ಮತ್ತೆ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಮುಂದಾಗಿದೆ.!!

ಇಲ್ಲಿಯವರೆಗೂ ಹಲವು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವ ಸ್ಯಾಮ್‌ಸಂಗ್ ಇದೀಗ ಹೆಚ್ಚು ಸೇಲ್ ಆಗಿದ್ದ್ ಫೋನ್ ಬ್ರಾಂಡ್ "ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್" ಬೆಲೆಯನ್ನು ಇಳಿಕೆ ಮಾಡಿದೆ.! ಹಾಗಾಗಿ, ಗ್ಯಾಲಕ್ಸಿ ಜೆ7 ನೆಕ್ಸ್ಟ್ ಇದೀಗ ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.!!

ಹಾಗಾದರೆ, 5.5 ಇಂಚಿನ ಡಿಸ್‌ಪ್ಲೇ, 3000 mAh ಬ್ಯಾಟರಿ ಹಾಗೂ 4G ವೋಲ್ಟ್ ಸಪೋರ್ಟ್‌ನಂತಹ ಎಲ್ಲಾ ಫೀಚರ್ಸ್ ಹೊಂದಿರುವ "ಗ್ಯಾಲಕ್ಸಿ ಜೆ7 ನೆಕ್ಸ್ಟ್" ಫೋನ್ ಮೇಲ್ ಎಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ? ಮತ್ತು ಸ್ಮಾರ್ಟ್‌ಪೊನಿನ ಇತರೆ ಫೀಚರ್ಸ್ ಮತ್ತು ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಕ್ರಮವಾಗಿ 10,490 ಮತ್ತು 12,990 ರೂ. ಬೆಲೆಯನ್ನು ಹೊಂದಿದ್ದ 2GB RAM ಮತ್ತು 16 ಜಿಬಿ ಮೆಮೊರಿ ಹಾಗೂ 3 ಜಿಬಿ RAM ಮತ್ತು 32 ಜಿಬಿ ಮೆಮೊರಿ ಫೋನ್‌ಗಳು ಇದೀಗ ಕೇವಲ 9,990 ರೂ. ಮತ್ತು 11,990 ರೂ.ಗಳಿಗೆ ಲಭ್ಯವಿವೆ.!!

ಡಿಸ್‌ಪ್ಲೇ ಹೇಗಿದೆ!?

ಡಿಸ್‌ಪ್ಲೇ ಹೇಗಿದೆ!?

5.5 ಇಂಚಿನ (720×1280 pixels) ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಜೆ7 ನೆಕ್ಸ್ಟ್ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಹೊದಿಕೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

1.6 GHz ಆಕ್ಟಾ-ಕೋರ್ Exynos 8895 ಪ್ರೊಸೆಸರ್ (4x2.3 GHz & 4x1.7 GHz) ಹೊಂದಿರುವ ಈ ಫೋನ್ ಆಂಡ್ರಾಯ್ಡ್ ನ್ಯೂಗಾ ಮೂಲಕ ಕಾರ್ಯನಿರ್ವಹಣೆ ನೀಡಲಿದೆ.!!

ಕ್ಯಾಮೆರಾ!

ಕ್ಯಾಮೆರಾ!

13 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5 ಎಮ್‌ಪಿ ಫ್ರಂಟ್ ಕ್ಯಾಮೆರಾ ಹೊಂದಿರುವ ಫೋನ್ ಎರಡೂ ಬದಿಯಲ್ಲಿ ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಹೊಂದಿದೆ.!!

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

"ಗ್ಯಾಲಕ್ಸಿ ಜೆ7 ನೆಕ್ಸ್ಟ್" ಫೋನ್ 3000mAh ಲೀ ಐಯಾನ್ ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

ಇತರೆ ಫೀಚರ್ಸ್?

ಇತರೆ ಫೀಚರ್ಸ್?

4ಜಿ ವೋಲ್ಟ್, ವೈಬ್ 802.11, ಬ್ಲೂಟೂತ್, 4 ಜಿಪಿಎಸ್, ಯುಎಸ್ಬಿ ಟೈಪ್-ಸಿ, ಎನ್ಎಫ್ಸಿ, ಮೈಕ್ರೋ ಯುಎಸ್ಬಿ, ಡ್ಯುಯಲ್ ಸಿಮ್‌ನಂತಹ ಫೀಚರ್‌ಗಳು ಫೋನಿನಲ್ಲಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Xiaomi Mi MIX 2S is said to be the successor to the Mi MIX 2 smartphone that launched last year featuring a bezel-less design.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot