Home
ಮೊಬೈಲ್

ಇದು ವಿಶ್ವದ ಮೊದಲ 5G ಮತ್ತು 10GB RAM ಸ್ಮಾರ್ಟ್‌ಫೋನ್!..ಬೆಲೆ ಎಷ್ಟು?

ಭಾರತದ ನಂ 1 ಮೊಬೈಲ್ ಕಂಪೆನಿಯಾಗಿ ಹೊರಹೊಮ್ಮಿರುವ ಚೀನಾದ ಮೊಬೈಲ್ ಸಂಸ್ಥೆ ಶಿಯೋಮಿ ಈಗ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ಬಹುಬೇಗ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿರುವ ಶಿಯೋಮಿ ಇದೀಗ ವಿಶ್ವದಲ್ಲೇ ಗರಿಷ್ಠ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲಿರುವ ಬಗ್ಗೆ ತಿಳಿಸಿದೆ.

 ಇದು ವಿಶ್ವದ ಮೊದಲ 5G ಮತ್ತು 10GB RAM ಸ್ಮಾರ್ಟ್‌ಫೋನ್!..ಬೆಲೆ ಎಷ್ಟು?

ಹೌದು, ವಿಶ್ವದ ಮೊದಲ 5G ತಂತ್ರಜ್ಞಾನ ಹಾಗೂ 10GB RAM ಹೊಂದಿರುವ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುವ ಬಗ್ಗೆ ಶಿಯೋಮಿ ಪ್ರಕಟಿಸಿದ್ದು, 2019ರ ಮಾರ್ಚ್‌ನಲ್ಲಿ ಇಂತಹದೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹಾಗಾದರೆ, ಯಾವುದು ಆ ಸ್ಮಾರ್ಟ್‌ಪೋನ್? ಏನೆಲ್ಲಾ ತಂತ್ರಜ್ಞಾನಗಳನ್ನು ಹೊತ್ತು ಬರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಶಿಯೋಮಿ ಮಿ ಮಿಕ್ಸ್ 3!

ಶಿಯೋಮಿ ಮಿ ಮಿಕ್ಸ್ 3!

ವಿಶ್ವದ ಮೊದಲ 5G ತಂತ್ರಜ್ಞಾನ ಹಾಗೂ 10GB RAM ಹೊಂದಿರುವ ಸ್ಮಾರ್ಟ್‌ಪೋನ್ ಆಗಿ ಶಿಯೋಮಿ ಕಂಪೆನಿ ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ ಹೊರಹೊಮ್ಮಲಿದೆ. ಶಿಯೋಮಿ ಕಂಪೆನಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿರುವುದಲ್ಲದೇ, ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬ ವಿಡಿಯೋವನ್ನು ಸಹ ಬಿಡುಗಡೆ ಮಾಡಿ ಕುತೋಹಲ ಮೂಡಿಸಿದೆ.

 ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ 19.5:9ರ ಆಕಾರ ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಗಿಜ್‌ಚೈನಾ ರಿಪೋರ್ಟ್ ಹೇಳಿದೆ. ನೋಚ್ ಡಿಸ್‌ಪ್ಲೇ, ಬೆಜೆಲ್ ಲೆಸ್‌ ಡಿಸೈನ್ ಹೊಂದಿರಲಿರುವ ಸ್ಮಾರ್ಟ್‌ಫೋನ್ 6 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

5G ತಂತ್ರಜ್ಞಾನ ಹಾಗೂ 10GB RAM ಹೊತ್ತು ಮಾರುಕಟ್ಟೆಗೆ ಕಾಲಿಡುತ್ತಿರುವ ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಆದರೆ, 5G ತಂತ್ರಜ್ಞಾನ ಹಾಗೂ 10GB RAMಗೆ ಸ್ನ್ಯಾಪ್‌ಡ್ರಾಗನ್ 845 Soc ಹೇಗೆ ಸಪೋರ್ಟ್ ಆಗಲಿದೆ ಎಂಬುದರ ಮಾಹಿತಿ ಈವರೆಗೂ ಸಿಕ್ಕಿಲ್ಲ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

5G ತಂತ್ರಜ್ಞಾನ ಹಾಗೂ 10GB RAM ಸ್ಮಾರ್ಟ್‌ಪೊನಿನಲ್ಲಿ ಇರುವ ವಿಶೇಷ ಫೀಚರ್ಸ್‌ಗಳಾದರೆ, ಫಿಂಗರ್‌ಪ್ರಿಂಟ್ ಬದಲಿಗೆ ಅತ್ಯುನ್ನತ ಫೇಸ್‌ಲಾಕ್ ತಂತ್ರಜ್ಞಾನ, 19.5:9ರ ಆಕಾರ ಅನುಪಾತದ ಡಿಸ್‌ಪ್ಲೇ ಹಾಗೂ ಸ್ಮಾರ್ಟ್‌ಪೋನಿನ ಕ್ಯಾಮೆರಾಗಳ ಬಗ್ಗೆ ಕೂಡ ಶಿಯೋಮಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿಯನ್ನು ಸಹ ಬಿಡದೆ ಕಾಪಾಡಿಕೊಂಡಿದೆ.

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಸ್ಮಾರ್ಟ್‌ಪೋನ್ ಬೆಲೆ ಎಷ್ಟು?

ಗಿಜ್‌ಚೈನಾ ವೆಬ್‌ಸೈಟ್ ವರದಿ ಮಾಡಿರುವಂತೆ, 6 ಜಿಬಿ RAM + 128 ಜಿಬಿ ರೂಪಾಂತರ ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ ಬೆಲೆ $ 510 (ರೂ .37,500 ಅಂದಾಜು) ಪ್ರಾರಂಭವಾಗಲಿದೆ ಎಂದು ಹೇಳಿದೆ. 8GB RAM + 128GB ರೂಪಾಂತರಕ್ಕಾಗಿ $ 600 (ರೂ. 44,200 ಅಂದಾಜು.) ಎಂದು ಹೇಳಿದ್ದು, 10 ಜಿಬಿ RAM ರೂಪಾಂತರದ ಬೆಲೆ ಬಗ್ಗೆ ಈ ವರೆಗೂ ಏನೂ ತಿಳಿದುಬಂದಿಲ್ಲ.

Best Mobiles in India

English summary
Xiaomi Mi Mix 3: Launch event, Release dates, Price, Preorder, Pop-up seflie camera, Fully bezel-less design. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+