ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗ್ತಿದೆ ಶಿಯೋಮಿ ಎಂಐ ಮಿಕ್ಸ್3..!
2018 ಆರಂಭದಲ್ಲಿ ಶಿಯೋಮಿ ಎಂಐ ಮಿಕ್ಸ್ 2ಎಸ್ ನ್ನು ಬಿಡುಗಡೆಗೊಳಿಸಿದ್ದು ಮತ್ತು ಮಿಕ್ಸ್ 2ಎಸ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ-ಕೋರ್ ಚಿಪ್ ಸೆಟ್ ಹೊಂದಿದ್ದ ಮೊದಲ ಸ್ಮಾರ್ಟ್ ಫೋನ್ ಆಗಿತ್ತು ಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ಕ್ಯಾಮರಾ ಸೆಟ್ ಅಪ್ ಕೂಡ ಬಹಳ ಅಭಿವೃದ್ಧಿಯಾಗಿತ್ತು. ಆದರೆ ಡಿಸೈನ್ ವಿಚಾರದಲ್ಲಿ ಇದು ಅಷ್ಟು ಉತ್ತಮವಾಗಿರಲಿಲ್ಲ.

ಈಗ ಶಿಯೋಮಿ ಸಂಸ್ಥೆ ಸೆಪ್ಟೆಂಬರ್ 15 ಕ್ಕೆ ಶಿಯೋಮಿ ಎಂಐ ಮಿಕ್ಸ್ 3 ಸ್ಮಾರ್ಟ್ ಫೋನ್ ಬಿಡುಗಡೆಗೆ ಸಿದ್ಧಗೊಂಡಿದೆ ಮತ್ತು ಇದರ ರಿಡಿಸೈನ್ ಕೂಡ ಮಾಡಲಾಗಿದೆ.ಹೌದು ನಾಚ್ ಇರುವುದಿಲ್ಲ ಮತ್ತುbezel ಕೂಡ ಇರುವುದಿಲ್ಲ. ಸದ್ಯ ಹಬ್ಬಿರುವ ಬಿಡುಗಡೆಯ ಮಾಹಿತಿಯ ಪ್ರಕಾರ ಶಿಯೋಮಿ ಎಂಐ ಮಿಕ್ಸ್ 3 95 ಶೇಕಡಾ ಪ್ಲಸ್ ಸ್ಕ್ರೀನ್ ಟು ಬಾಡಿ ರೇಷ್ಯೂ ಇರುವ ಮೊದಲ ಸ್ಮಾರ್ಟ್ ಫೋನ್ ಆಗಿರಲಿದೆ.

ಪಾಪ್ ಅಪ್ ಕ್ಯಾಮರಾ
ವಿವೋ ನೆಕ್ಸ್ ರೀತಿಯಲ್ಲೇ ಶಿಯೋಮಿ ಎಂಐ ಮಿಕ್ಸ್ 3 ಯಲ್ಲಿ ಪಾಪ್ ಅಪ್ ಮಾಡ್ಯೂಲ್ ಕ್ಯಾಮರಾದ ಮೇಲ್ಬಾಗದಲ್ಲಿ ಇರುವ ಸಾಧ್ಯತೆ ಇದೆ. ಇದು ಮುಂಭಾಗದ ಸೆಲ್ಫೀ ಕ್ಯಾಮರಾ ಜೊತೆಗೆ ಎಲ್ ಇಡಿ ಯುನಿಟ್ ಹೊಂದಿರಲಿದೆ.

ಇನ್- ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನ
ಶಿಯೋಮಿ ಎಂಐ ಎಕ್ಸ್ ಪ್ಲೋರ್ ಎಡಿಷನ್ ನಲ್ಲಿ ಮೊದಲ ಬಾರಿಗೆ ಶಿಯೋಮಿ ಸಂಸ್ಥೆ ಇನ್ ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನವನ್ನು ಸೇರಿಸಿತ್ತು. ಅದು ಈ ಮೊಬೈಲ್ ನಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಶಿಯೋಮಿ ಎಂಐ ಮಿಕ್ಸ್ 2ಎಸ್ ನಲ್ಲಿ ಮಿಕ್ಸ್ 3 ನಂತೆ ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್ ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ ಇರಬಹುದು.

ಶಿಯೋಮಿ ಎಂಐ ಮಿಕ್ಸ್ 3 ವೈಶಿಷ್ಟ್ಯತೆಗಳು
ನಿರೀಕ್ಷೆಯಂತೆ, ಶಿಯೋಮಿ ಎಂಐ ಮಿಕ್ಸ್ 3 ಪ್ರೀಮಿಯಂ ಸಿರಾಮಿಕ್ ವಿನ್ಯಾಸದೊಂದಿಗೆ ಲೈನ್ ಇಂಟರ್ನಲ್ಗಳ ಮೇಲೆ ಬರುತ್ತದೆ. ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಜೊತೆಗೆ 6.0 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಇದು ಹೊಂದಿರಲಿದೆ.
ಸ್ಮಾರ್ಟ್ ಫೋನ್ Qualcomm Snapdragon 845 SoC ಜೊತೆಗೆ 6 ಜಿಬಿ RAM ಮತ್ತು 64 GBಸ್ಟೋರೇಜ್ ಕೆಪಾಸಿಟಿಯನ್ನು ಹೊಂದಿರುತ್ತದೆ. ಕಂಪೆನಿಯು ಇನ್ನೊಂದು ವೇರಿಯಂಟ್ ನ್ನು ಕೂಡ ಬಿಡುಗೆಡೆಗೊಳಿಸುವ ಸಾಧ್ಯತೆ ಇದೆ ಅದುವೇ 8 GB RAM ಮತ್ತು 256 GB ಸ್ಟೋರೇಜ್ . ಇದು ಎಂಐ ಸಿರೀಸ್ ಸ್ಮಾರ್ಟ್ ಫೋನ್ ಆಗಿರುವುದರಿಂದಾಗಿ ಖಂಡಿತವಾಗಲೂ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಸ್ಟೋರೇಜ್ ನ್ನು ಮತ್ತಷ್ಟು ಹಿಗ್ಗಿಸಿಕೊಳ್ಳಲು ಅವಕಾಶವಿರುತ್ತದೆ.
ಡುಯಲ್ ಕ್ಯಾಮರಾ ಸೆಟ್ ಅಪ್ ಇರುವ ಸಾಧ್ಯತೆ ಇದ್ದು ಶಿಯೋಮಿ ಎಂಐ 8 ನಲ್ಲಿರುವಂತೆ ಸ್ಲೋ ಮೋಷನ್ ಗೆ ಇದು ಬೆಂಬಲ ನೀಡಬಹುದು ಅದರ ಕೆಪಾಸಿಟಿ 4K ವೀಡಿಯೋ ರೆಕಾರ್ಡಿಂಗ್ 60fps ಆಗಿರಲಿದೆ.
ಜೊತೆಗೆ ಬೊಕೆಷ್ ಎಫೆಕ್ಟ್ ಕೂಡ ಇರಲಿದೆ. ಆಪಲ್ ಐಫೋನ್ ಎಕ್ಸ್ ನಂತೆ ಫೇಸ್ ಅನ್ ಲಾಕ್ ವೈಶಿಷ್ಟತೆಯನ್ನು ಇದು ಒಳಗೊಂಡಿರುವ ನಿರೀಕ್ಷೆ ಇದೆ.

ಭಾರತದಲ್ಲಿ ಯಾವಾಗ ಬಿಡುಗಡೆ..?
ಇದುವರೆಗೂ ಭಾರತದಲ್ಲಿ ಶಿಯೋಮಿ ಎಂಐ ಮಿಕ್ಸ್ 3 ಬಿಡುಗಡೆಗೊಳ್ಳುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಕಂಪೆನಿ ಇತರೆಡೆಗಳಲ್ಲಿ ಬಿಡುಗಡೆಗೊಳಿಸಿರುವ ಶಿಯೋಮಿ ಎಂಐ8 ಮತ್ತು ಶಿಯೋಮಿ ಎಂಐ ಮಿಕ್ಸ್ 2ಎಸ್ ನ್ನು ಬಿಡುಗಡೆಗೊಳಿಸಿಲ್ಲ. ಕಂಪೆನಿಯು ಎಂಟ್ರಿ ಲೆವೆಲ್ ನಿಂದ ಮಿಡ್ ಟಯರ್ ಸ್ಮಾರ್ಟ್ ಫೋನ್ ಅಂದರೆ 20,000 ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನ್ನು ಮಾತ್ರ ಇಲ್ಲಿ ಬಿಡುಗಡೆಗೊಳಿಸುವಂತೆ ಕಾಣಿಸುತ್ತಿದೆ.


Click it and Unblock the Notifications




