ವಿಶ್ವದ ಮೊದಲ 5G, 10GB RAM ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್..!
ಶಿಯೋಮಿಯ ಮುಂದಿನ ಸ್ಮಾರ್ಟ್ ಫೋನ್ ಬೀಜಿಂಗ್ ನಲ್ಲಿ ಅಕ್ಟೋಬರ್ 25 ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಈ ವಾರ ಶಿಯೋಮಿ ಸಂಸ್ಥೆ ಪ್ರಕಟಿಸಿದೆ. ಹೊಸ ಸ್ಮಾರ್ಟ್ ಫೋನ್ ಹೇಗಿರಲಿದೆ ಎಂಬ ಬಗ್ಗೆ ಶಿಯೋಮಿ ಟೀಸರ್ ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ ಹೊಸದಾಗಿ ಬಿಡುಗಡೆಗೊಳ್ಳುವ ಶಿಯೋಮಿ ಎಂಐ ಮಿಕ್ಸ್ 3 ಫೋನ್ ವಿಶ್ವದ ಮೊದಲ 5ಜಿ ಬೆಂಬಲಿತ ಸ್ಮಾರ್ಟ್ ಫೋನ್ ಎಂದು ಕಂಪೆನಿ ತಿಳಿಸಿದೆ. ಇದಿಷ್ಟೇ ಅಲ್ಲ ಇನ್ನೊಂದು ಪ್ರಮುಖ ವೈಶಿಷ್ಟ್ಯತೆಯೆಂದರೆ 10ಜಿಬಿ ಮೆಮೊರಿಯನ್ನು ಈ ಫೋನ್ ಒಳಗೊಂಡಿರುತ್ತದೆ.

5 ಜಿ ಸ್ಪೀಡ್ ನ ವಿಶ್ವದ ಮೊದಲ ಸ್ಮಾರ್ಟ್ ಫೋನ್:
5ಜಿ ಬೆಂಬಲಿತವಾಗಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಇದಾಗಲಿದ್ದು ಎಂಐ ಮಿಕ್ಸ್ 3 ಈ ನಿಟ್ಟಿನಲ್ಲಿ ಕ್ರಾಂತಿ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ. ಮುಂದಿನ ಜನರೇಷನ್ನಿನ ಫೋನ್ ಗಳು ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕರುಣಿಸುವ ಭರವಸೆಯನ್ನು ಈ ಮೂಲಕ ನೀಡುತ್ತಿದೆ. ಆದರೆ 5ಜಿ ಇಂಟರ್ನೆಟ್ ಸೌಲಭ್ಯವು ಇನ್ನೂ ಕಮರ್ಷಿಯಲ್ ಆಗಿ ಬಿಡುಗಡೆಗೊಂಡಿಲ್ಲ. ಇದಕ್ಕೆ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಈ ನಿಟ್ಟಿನಲ್ಲಿ ಫೋನ್ ಗಳು ಭವಿಷ್ಯದ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಳ್ಳಲು ಈಗಾಗಲೇ ಸನ್ನದ್ಧವಾಗುತ್ತಿದೆ ಎಂಬುದು ಮಾತ್ರ ಸುಳ್ಳಲ್ಲ.
10ಜಿಬಿ ಮೆಮೊರಿ ಇರುವ ವಿಶ್ವದ ಮೊದಲ ಫೋನ್:

ಈ ಫೋನಿನ ಮೊದಲ ಹೈಲೆಟ್ ಎಂದರೆ 10 ಜಿಬಿ ಮೆಮೊರಿಯನ್ನು ಈ ಸ್ಮಾರ್ಟ್ ಫೋನ್ ಒಳಗೊಂಡಿರುತ್ತದೆ. ಇದುವರೆಗೂ ನಾವು ಕೇವಲ 8ಜಿಬಿ ಮೆಮೊರಿ ಫೋನ್ ಗಲನ್ನು ನೋಡಿದ್ದೇವೆ. ಇತ್ತೀಚೆಗಷ್ಟೇ ಒಪ್ಪೋ ಫೋನ್ 10 ಜಿಬಿ ಮೆಮೊರಿಯ ಫೈಂಡ್ ಎಕ್ಸ್ ಫೋನಿನ ಬಗ್ಗೆ ಪ್ರಕಟಣೆ ನೀಡಿದೆ. ಆದರೆ ಎಂಐ ಮಿಕ್ಸ್ 3 ಅದಕ್ಕಿಂತ ಮೊದಲೇ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದು ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನೊಂದಿಗೆ ಪೇರ್ ಆಗಿರಲಿದೆ. ಹಾಗಾಗಿ ಎಂಐ ಮಿಕ್ಸ್ 3 ಉತ್ತಮ ಪ್ರದರ್ಶನದ ಕುತೂಹಲಕಾರಿ ಕಾನ್ಫಿಗರೇಷನ್ ನ್ನು ಹೊಂದಿರುತ್ತದೆ ಎಂಬುದು ಖಾತ್ರಿಯಾಗಿದೆ.
ಕೆಲವು ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಹೊರತು ಪಡಿಸಿ ಇನ್ನೂ ಅನೇಕ ವಿಶಿಷ್ಟ ವೈಶಿಷ್ಟ್ಯತೆಯನ್ನು ಎಂಐ ಮಿಕ್ಸ್ 3 ಒಳಗೊಂಡಿದೆ. ಬೇಝಲ್ ಲೆಸ್ ಡಿಸ್ಪ್ಲೇ ಜೊತೆಗೆ 100 ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ.ಸ್ಲೈಡ್ ಔಟ್ ಮೆಕಾನಿಸಂನ್ನು ಹೊಂದಿದೆ. ಅದು ಕ್ಯಾಮರಾ ಮತ್ತು ಸೆನ್ಸರ್ ನ್ನು ಹೊಂದಿದೆ. ಇದೇ ರೀತಿಯ ತಂತ್ರಜ್ಞಾನವನ್ನು ನಾವು ಓಪ್ಪೋ ಫೈಂಡ್ ಎಕ್ಸ್ ನಲ್ಲೂ ಕೂಡ ಗಮನಿಸಬಹುದು. ಎಂಐ ಮಿಕ್ಸ್ 3 ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು 3ಡಿ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications








