ಶಿಯೋಮಿ 'ಮಿ ಮಿಕ್ಸ್ 4' ಫೋನಿನಲ್ಲಿರಲಿದೆ '100 ಎಂಪಿ' ಕ್ಯಾಮೆರಾ!

|

ಶಿಯೋಮಿಯ ಮುಂಬರುವ ಸ್ಮಾರ್ಟ್‌ಫೋನ್ 'ಶಿಯೋಮಿ ಮಿ ಮಿಕ್ಸ್ 4' ಬಗೆಗಿನ ವದಂತಿಗಳು ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ. 100 ಎಂಪಿ ಕ್ಯಾಮೆರಾ ಸೆಟಪ್, 40W ಫಾಸ್ಟ್ ಚಾರ್ಜಿಂಗ್ ಮತ್ತು 'ಆಂಡ್ರಾಯ್ಡ್ 10' ಕಸ್ಟಮ್ RAMನಲ್ಲಿ ಕಾರ್ಯನಿರ್ವಹಿಸುವ ಮೊದಲ ಸ್ಮಾರ್ಟ್‌ಫೋನ್ ಆಗಿ 'ಶಿಯೋಮಿ ಮಿ ಮಿಕ್ಸ್ ಹೊರಬರಬಹುದು ಎಂಬ ಸುದ್ದಿ ಹೊರಬಿದ್ದಿದ್ದು, ಅತ್ಯಂತ ಕಡಿಮೆ ಅಂಚುಗಳ ವಿನ್ಯಾಸವನ್ನು ನೀಡಲು ಸ್ಮಾರ್ಟ್‌ಫೋನಿನಲ್ಲಿ ಎರಡೂ ಬದಿಗಳಲ್ಲಿ ಬಾಗಿದ ಅಂಚುಗಳೊಂದಿಗೆ 90Hz ಪ್ರದರ್ಶನವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

40W ಫಾಸ್ಟ್ ಚಾರ್ಜಿಂಗ್

40W ಫಾಸ್ಟ್ ಚಾರ್ಜಿಂಗ್

ಹೌದು, ಶಿಯೋಮಿ ಮಿ ಮಿಕ್ಸ್ 4 ನ ವಿಶೇಷತೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೂ, ಇತ್ತೀಚಿನ ಸೋರಿಕೆಗಳು ಮತ್ತು ವದಂತಿಗಳಂತೆ ಮಿ ಮಿಕ್ಸ್ ಸ್ಮಾರ್ಟ್‌ಪೋನಿನಲ್ಲಿ ಫ್ಲ್ಯಾಗ್‌ಶಿಪ್ ಫೀಚರ್ಸ್ ಇರುವ ಬಗ್ಗೆ ಹೇಳಿವೆ. ಅದರಲ್ಲಿ, 40W ಫಾಸ್ಟ್ ಚಾರ್ಜಿಂಗ್ ಮತ್ತು 100 ಎಂಪಿ ಕ್ಯಾಮೆರಾ ಸೆಟಪ್ ಸ್ಮಾರ್ಟ್‌ಫೋನನ್ನು ಅಲಂಕರಿಸಿವೆ ಎಂಬ ಸುದ್ದಿ ಮೊಬೈಲ್ ಪ್ರಿಯರ ಕಣ್ಣರಳಿಸುವಂತೆ ಮಾಡಿದೆ. ಇವುಗಳ ಜೊತೆಗೆ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಸಹ ಸ್ಮಾರ್ಟ್‌ಪೋನ್ ಹೊಂದಿರುತ್ತದೆ ಎಂದು ವರದಿಗಳು ತಿಳಿಸಿವೆ.

ಸ್ಯಾಮ್ಸಂಗ್ ನಿರ್ಮಿತ ಸಂವೇದಕ

ಸ್ಯಾಮ್ಸಂಗ್ ನಿರ್ಮಿತ ಸಂವೇದಕ

ಶಿಯೋಮಿ ಮಿ ಮಿಕ್ಸ್ 4 ಸ್ಮಾರ್ಟ್‌ಪೋನಿನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ 100 ಎಂಪಿ ಕ್ಯಾಮೆರಾ ಸೆಟಪ್ ನೀಡಲಾಗಿರುತ್ತದೆ ಮತ್ತು ಇದು ಸ್ಯಾಮ್ಸಂಗ್ ನಿರ್ಮಿತ ಸಂವೇದಕವನ್ನು ಆಧರಿಸಿದೆ ಎಂದು ನಾವು ನಿರೀಕ್ಷಿಸಬಹುದು. ಇನ್ನು ಇದೇ ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ 10 ಅನ್ನು ಆಧರಿಸಿ ವೇಗವಾಗಿ ಮತ್ತು ಜಾಹೀರಾತು ಮುಕ್ತ ಬಳಕೆದಾರ ಅನುಭವವನ್ನು ನೀಡಲು ಕಂಪೆನಿ ಮುಂದಾಗಿದ್ದು, ನೂತನ ಅಪ್‌ಡೇಟ್ MIUI 11 ಮೂಲಕ ಉತ್ತಮ ಆಪ್ಟಿಮೈಸೇಶನ್‌ಗಳೊಂದಿಗೆ ಹೊರತರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿವೆ.

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC

ಇನ್ನು ಮಿ ಮಿಕ್ಸ್ 4 ಅನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ಬೆಂಬಲಿಸುತ್ತದೆ ಎಂದು ಹಿಂದಿನ ಕೆಲವು ವರದಿಗಳು ಸ್ಪಷ್ಟಪಡಿಸಿವೆ. ಆಕ್ಟಾ-ಕೋರ್ ಸಿಪಿಯು 12 ಜಿಬಿ RAM ಮತ್ತು 1 ಟಿಬಿ ಆಂತರಿಕ ಮೆಮೊರಿಯಿಂದ ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ ಎಂದು ಆ ವರದಿಗಳು ಹೇಳಿವೆ. ಇದೀಗ ಕೆಲವು ಹೊಸ ವರದಿಗಳು ಈ ಸ್ಮಾರ್ಟ್‌ಫೋನ್ 40W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ ಎಂದು ಹೇಳಿವೆ. ಚಾರ್ಜಿಂಗ್‌ಗೆ ಸಂಬಂಧಿಸಿದಂತೆ, ಮಿ ಮಿಕ್ಸ್ 4 30W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆಯಂತೆ.

ಮಿ ಮಿಕ್ಸ್ 4 ಈ ಪಟ್ಟಿಯಲ್ಲಿಲ್ಲ

ಮಿ ಮಿಕ್ಸ್ 4 ಈ ಪಟ್ಟಿಯಲ್ಲಿಲ್ಲ

ಶಿಯೋಮಿ ಸೆಪ್ಟೆಂಬರ್ 17, 2019 ರಂದು ಭಾರತದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಸಹ ಆಯೋಜಿಸುತ್ತಿದೆ. ಅಂದು ತನ್ನ 'ಸ್ಮಾರ್ಟರ್ ಲಿವಿಂಗ್ 2020' ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ, ಅಲ್ಲಿ ಬ್ರಾಂಡ್ ಹೊಸ ಐಒಟಿ-ಶಕ್ತಗೊಂಡ ಉತ್ಪನ್ನಗಳನ್ನು ಕಂಪೆನಿಯು ಅನಾವರಣಗೊಳಿಸಲಿದೆ. (ಮಿ ಮಿಕ್ಸ್ 4 ಈ ಪಟ್ಟಿಯಲ್ಲಿಲ್ಲ) ಈವೆಂಟ್‌ನ ಹೈಲೈಟ್ ಆಗಿ ಹೊಸ ಮಿ ಸ್ಮಾರ್ಟ್ ಎಲ್ಇಡಿ ಟಿವಿ ಬಿಡುಗಡೆಯಾಗಬಹುದು ಅಥವಾ ಇತರ ಅತ್ಯಾಕರ್ಷಕ ಸ್ಮಾರ್ಟ್ ಉತ್ಪನ್ನಗಳು ಸಹ ಆಗಿರಬಹುದು ಎಂದು ವರದಿಗಳು ಹೇಳಿವೆ.

Best Mobiles in India

English summary
Xiaomi Mi Mix 4 might be the first smartphone to run on the company's upcoming custom ROM- MIUI 10. Based on the Android 10.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X