ಲಾಂಚ್ ಆಯ್ತು ಶಿಯೋಮಿ 'ಮೈ ನೋಟ್ 3'!!..ಬೆಚ್ಚಿಬಿತ್ತು ಮೊಬೈಲ್ ಜಗತ್ತು!!
ಡ್ಯುಯಲ್ ಕ್ಯಾಮೆರಾ ಮಾತ್ರವಲ್ಲದೆ, ಫೇಸ್‌ಲಾಕ್ ರೆಕಗ್ನೈನೇಷನ್ ಮತ್ತು ನಾಲ್ಕು ಕಡೆ ಕರ್ವಡ್ ಗ್ಲಾಸ್ ಹೊಂದಿರುವ ಶಿಯೋಮಿ ಮೈ ನೋಟ್ 3 ಫೋನ್ ಚೀನಾದಲ್ಲಿ ಕೇವಲ 1,999 CNY(19,500 ರೂ.)ಗಳಿಗೆ ಬಿಡುಗಡೆಯಾಗಿರುವುದು ಇದೀಗ ಟ್ರೆಂಡ್!!
ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ, ಡ್ಯುಯಲ್ ಕ್ಯಾಮೆರಾ ಹೈ ಸ್ಮಾರ್ಟ್‌ಫೋನ್ ಎಂಡ್ 'ಶಿಯೋಮಿ ಮೈ ನೋಟ್ 3' ಚೀನಾದಲ್ಲಿ ಲಾಂಚ್ ಆಗಿದೆ.! ನಿರೀಕ್ಷೆಯಂತೆಯೇ ಶಿಯೋಮಿ ಮತ್ತೆ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್ ಒಂದನ್ನು ರಿಲೀಸ್ ಮಾಡಿದ್ದು, ಈ ಫೋನ್ ಮತ್ತೆ ಮಾರುಕಟ್ಟೆಯನ್ನು ನಡುಗಿಸುವ ಫೀಚರ್‌ಗಳನ್ನು ಹೊಂದಿದೆ.!!
ಡ್ಯುಯಲ್ ಕ್ಯಾಮೆರಾ ಮಾತ್ರವಲ್ಲದೆ, ಫೇಸ್‌ಲಾಕ್ ರೆಕಗ್ನೈನೇಷನ್ ಮತ್ತು ನಾಲ್ಕು ಕಡೆ ಕರ್ವಡ್ ಗ್ಲಾಸ್ ಹೊಂದಿರುವ ಹೈ ಎಂಡ್ ಫೋನ್ ಶಿಯೋಮಿ ಮೈ ನೋಟ್ 3 (4GB, 64GB ವೆರರಿಯಂಟ್ ಫೋನ್) ಚೀನಾದಲ್ಲಿ ಕೇವಲ 1,999 CNY( 19,500 ರೂ.)ಗಳಿಗೆ ಬಿಡುಗಡೆಯಾಗಿರುವುದು ಇದೀಗ ಟ್ರೆಂಡ್ ಆಗಿದೆ.! ಹಾಗಾದರೆ, ಶಿಯೋಮಿ ಮೈ ನೋಟ್ 3 ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ.!!
ನಾಲ್ಕು ಕಡೆ ಕರ್ವಡ್ ಗ್ಲಾಸ್ ಅನ್ನು ಶಿಯೋಮಿ ಮೈ ನೋಟ್ 3 ಫೋನಿನಲ್ಲಿ ಅಳವಡಿಸಲಾಗಿದ್ದು, 5.5 ಇಂಚ್ ಫುಲ್ ಹೆಚ್‌ಡಿ (1080x1920ಪಿಕ್ಸೆಲ್) ಡಿಸ್‌ಪ್ಲೇಯನ್ನು ಮೈ ನೋಟ್ 3 ಹೊಂದಿದೆ. ಮುಂಬಾಗದಲ್ಲಿ ಹೋಮ್‌ಬಟನ್ ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಈ ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ ಎನ್ನಬಹುದು.!!

ಪ್ರೊಸೆಸರ್ ಮತ್ತು ಒಎಸ್!!
ಹೈ ಎಂಡ್ ಸ್ಮಾರ್ಟ್‌ಗಫೋನ್ ಶಿಯೋಮಿ ಮೈ ನೋಟ್ 3 ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ 2.2GHz ಕ್ಲಾಕ್ ಸ್ನ್ಯಾಪ್‌ಡ್ರಾಗನ್ 660 Soc ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಈ ಫೋನ್ ಆಮಡ್ರಾಯ್ಡ್ ನ್ಯೂಗಾ 7.1.1 ಮೂಲಕ ಕಾರ್ಯನಿರ್ವಹಣೆ ನೀಡಲಿದ್ದು, ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿದೆ.!!


RAM ಮತ್ತು ಮೆಮೊರಿ!!
ಶಿಯೋಮಿ ಮೈ ನೋಟ್ 3 ಫೋನ್ 4GB RAM ಮತ್ತು 64GB ಮೆಮೊರಿ, 6GB RAM ಮತ್ತು 64GB ಮೆಮೊರಿ ಹಾಗೂ 6GB RAM ಮತ್ತು 128BG ಮೆಮೊರಿ ಹೋದಿರುವ ಮೂರು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.!!

ಕ್ಯಾಮೆರಾ ಹೇಗಿದೆ?
ಶಿಯೋಮಿ ಕಂಪೆನಿ ಮೈ ನೋಟ್ 3 ಫೋನಿನಲ್ಲಿ ಕ್ಯಾಮೆರಾ ಕಡೆ ಹೆಚ್ಚು ಗಮನಹರಿಸಿದ್ದು, ಇದೇ ಮೊದಲ ಬಾರಿ 20 ಸಾವಿರ ರೂ. ಒಳಗಿನ ಫೋನ್ ಒಂದು ಅತ್ಯುತ್ತಮ ಡ್ಯುಯಲ್ ಕ್ಯಾಮೆರಾಗಳನ್ನು ಹೊತ್ತು ಬರುತ್ತಿದೆ.! 12 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾಗಳಿದ್ದರೆ, 16 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಫೋನ್ ಅನ್ನು ಅಲಂಕರಿಸಿದೆ.!!

ಬ್ಯಾಟರಿ ಮತ್ತು ಇತರ ಫೀಚರ್ಸ್!!
3500mAH ಬ್ಯಾಟರಿ, 4G ವೋಲ್ಟ್, 4K ವಿಡಿಯೋ ಕ್ಯಾಪ್ಚರ್, 2X ಆಪ್ಟಿಕಲ್ ಕ್ಯಾಮೆರಾ ಜೂಮ್, ಆಂಬಿಯಂಟ್ ಲೈಟ್ ಸೆನ್ಸಾರ್‌ನಂತಹ ಹಲವು ಅತ್ಯಾಧುನಿಕ ಫೀಚರ್ಸ್‌ಗಳನ್ನು ಮೈ ನೋಟ್ 3 ಫೋನಿನಲ್ಲಿ ತರಲಾಗಿದ್ದು, ಗ್ರಾಹಕರಿಗೆ ಬಂಪರ್ ಕೊಡುಗೆಯಂತೆ ಶಿಯೋಮಿ ಹೊಸ ಫೋನ್ ಅನ್ನು ನೀಡಿದೆ ಎನ್ನಬಹುದು.!!


Click it and Unblock the Notifications








