Home
ಮೊಬೈಲ್

ಆಪಲ್ ಐಪ್ಯಾಡ್ ಗೆ ಸೆಡ್ಡು ಹೊಡೆಯವ ಪ್ಯಾಡ್ ಮಾರುಕಟ್ಟೆಗೆ..! ಬೆಲೆ ಕೇಳಿದ್ರೆ ಶಾಕ್..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ನಂ 1 ಸ್ಮಾರ್ಟ್ ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಚೀನಾ ಮೂಲದ ಶಿಯೋಮಿ, ಚೀನಾ ಮಾರುಕಟ್ಟೆಗೆ ಹೊಸದೊಂದು ಟ್ಯಾಬ್ ಅನ್ನು ಲಾಂಚ್ ಮಾಡಿದೆ. ಆಪಲ್ ಐಪ್ಯಾಡ್ ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ Mi ಪ್ಯಾಡ್ 4, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸುವುದು ಗ್ಯಾರೆಂಟಿ.

ಆಪಲ್ ಐಪ್ಯಾಡ್ ಗೆ ಸೆಡ್ಡು ಹೊಡೆಯವ ಪ್ಯಾಡ್ ಮಾರುಕಟ್ಟೆಗೆ..! ಬೆಲೆ ಕೇಳಿದ್ರೆ ಶಾಕ್

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನಿನೊಂದಿಗೆ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿರುವ ಶಿಯೋಮಿ, ಸದ್ಯ ಶಿಯೋಮಿ Mi ಪ್ಯಾಡ್ ಗಳನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಮೂಲಗಳಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ ಶಿಯೋಮಿ Mi ಪ್ಯಾಡ್ 4 ಶೀಘ್ರವೇ ನಮ್ಮ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದ್ದು, ಟ್ಯಾಬ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.

ವಿಶೇಷತೆಗಳು

ವಿಶೇಷತೆಗಳು

ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi ಪ್ಯಾಡ್ 4ನಲ್ಲಿ MIUI 9 ಕಾಣಬಹುದಾಗಿದ್ದು, ಶೀಘ್ರವೇ ಆಪ್ ಡೇಟ್ ಸಹ ಪಡೆದುಕೊಳ್ಳಲಿದೆ. ಇದಲ್ಲದೇ ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಸಹ ಕಾಣಬಹುದಾಗಿದೆ. ಇದರಿಂದಾಗಿ ಈ ಟಾಪ್ ವೇಗವಾಗಿ ಕಾರ್ಯನಿರ್ವಹಿಸಲಿದೆ.

ಡಿಸ್ ಪ್ಲೇ

ಡಿಸ್ ಪ್ಲೇ

Mi ಪ್ಯಾಡ್ 4ನಲ್ಲಿ 8 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು FHD ಗುಣಮಟ್ಟದ ಡಿಸ್ ಪ್ಲೇಯಾಗಿದೆ. ಇದಲ್ಲಿ ಗೇಮ್ ಆಡುವ ಅನುಭವ ಮತ್ತು ವಿಡಿಯೋ ನೋಡುವ ಅನುಭವವು ಉತ್ತಮವಾಗಿಯೇ ಇದೆ ಎನ್ನಬಹುದು. 16:10 ಅನುಪಾತದಲ್ಲಿ ಇರುವ ಡಿಸ್ ಪ್ಲೇಯನ್ನು Mi ಪ್ಯಾಡ್ 4ನಲ್ಲಿನಲ್ಲಿ ಕಾಣಬಹುದು.

ಕ್ಯಾಮೆರಾ

ಕ್ಯಾಮೆರಾ

Mi ಪ್ಯಾಡ್ 4ನಲ್ಲಿ ಉತ್ತಮ ಗುಣಮಟ್ಟದ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದು HDR ಮೋಡ್ ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ಶಕ್ತವಾಗಿದೆ. ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಉತ್ತಮ ಗುಣಮಟ್ಟದ ಫೋಟೊಗಳನ್ನು ಸೆರೆಹಿಡಿಯಲು ಶಕ್ತವಾಗಿದೆ.

ಎರಡು ಆವೃತ್ತಿಯಲ್ಲಿ ಮಾರಾಟ

ಎರಡು ಆವೃತ್ತಿಯಲ್ಲಿ ಮಾರಾಟ

ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ Mi ಪ್ಯಾಡ್ 4 ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿ, ಮತ್ತೊಂದು ಆವೃತ್ತಿ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ. ಇದಲ್ಲದೇ ಇನ್ ಬಿಲ್ಟ್ WiFi ಮತ್ತು LTE ಆವೃತ್ತಿ ಸಹ ಲಭ್ಯವಿದೆ.

ಬೆಲೆಗಳು

ಬೆಲೆಗಳು

ಶಿಯೋಮಿ Mi ಪ್ಯಾಡ್ 4 ಮೂರು ಮಾದರಿಯಲ್ಲಿ ಮಾರಾಟವಾಗಲಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಇನ್ ಬಿಲ್ಟ್ WiFi ಆಯ್ಕೆಯ ಹೊಂದಿರುವ Mi ಪ್ಯಾಡ್ 4 ರೂ.11,500ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ. 14,600ಕ್ಕೆ ದೊರೆಯಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಇನ್ ಬಿಲ್ಟ್ WiFi ಮತ್ತು LTE ಆಯ್ಕೆಯೂ ರೂ.15,600ಕ್ಕೆ ಮಾರಾಟವಾಗುತ್ತಿದೆ.

Best Mobiles in India

English summary
Xiaomi Mi Pad 4 With 8-Inch Full-HD Display, Snapdragon 660 SoC Launched: Price, Specifications. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+