Subscribe to Gizbot

ಶಯೋಮಿ Mi3 ಉಪಾಧ್ಯಕ್ಷ್ಯ ಹುಗೋ ಬಾರಾ ಸಂದರ್ಶನ

Written By:

ಪ್ರತಿಯೊಂದು ದಿನ ಕೂಡ ಹೊಸ ಹೊಸ ಅಂತರಾಷ್ಟ್ರೀಯ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನವನ್ನುಂಟು ಮಾಡುತ್ತಿವೆ. ಇದೇ ಸಮಯದಲ್ಲಿ ಭಾರತೀಯ ಮೂಲದ ಫೋನ್‌ಗಳಲ್ಲದೆ ಇದೀಗ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನುಂಟು ಮಾಡುತ್ತಿವೆ.

ಸ್ವಲ್ಲ ದಿನಗಳ ಹಿಂದೆಯಷ್ಟೇ ಚೀನಾದ ಆಪಲ್ ಎಂದೇ ಪ್ರಸಿದ್ಧವಾಗಿರುವ ಶಯೋಮಿ ಭಾರೀ ಗದ್ದಲದಲ್ಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ನಮ್ಮ ಮಾರುಕಟ್ಟೆಗೆ ಶಾಕಿಂಗ್ ಸುದ್ದಿಯಾಗಿದೆ ಎಂದೇ ಹೇಳಬಹುದು.

ಶಯೋಮಿ ಈಗಾಗಲೇ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು Mi3 ಅನ್ನು ಭಾರತದಲ್ಲಿ ಲಾಂಚ್ ಮಾಡುತ್ತಿದೆ. ಇದರ ಬೆಲೆ ರೂ 13,999 ಆಗಿದೆ. ಇದರೊಂದಿಗೆ ರೆಡ್ಮೀ 1S ಮತ್ತು ರೆಡ್ಮೀ ನೋಟ್ ಶಯೋಮಿಯ ಕೊಡುಗೆಗಳಾಗಿದ್ದು ಲಾಂಚ್ ಆಗುತ್ತಿವೆ. Mi3 ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ನೋಂದಾಯಿಸಬಹುದಾಗಿದೆ.

ಶಯೋಮಿ Mi3 ನ ಅಂತರಾಷ್ಟ್ರೀಯ ಉಪಾಧ್ಯಕ್ಷ್ಯ ಹುಗೋ ಬಾರಾ ಜತೆಗಿನ ವಿಶೇಷ ಸಂದರ್ಶನವನ್ನು ಕೆಳಗಿನ ವೀಡಿಯೋದಲ್ಲಿ ನಿಮಗೆ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಆಪರೇಟಿಂಗ್ ಸಿಸ್ಟಮ್

#1

ಶಯೋಮಿ Mi3 ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ ಆಗಿ ಕಾಣುತ್ತಿಲ್ಲ. ಇದರ ವಿನ್ಯಾಸವನ್ನು ನೋಡಿದಾಗ ಫೋನ್ ಗೂಗಲ್ ನೆಕ್ಸಸ್ 5 ನ ವಿನ್ಯಾಸವನ್ನು ಮೂಲೆಗುಂಪು ಮಾಡುವಂತೆ ಕಾಣುತ್ತಿದೆ. ಇದೊಂದು ಶುದ್ಧವಾದ ಮೆಟಲ್ ಫೋನ್ ಆಗಿದ್ದು ನಿಮಗಿದು ರೂ 13,999 ರಲ್ಲಿ ದೊರೆಯಲಿದೆ. 8.1mm ದಪ್ಪವಾಗಿದ್ದು ಅತ್ಯಂತ ಸ್ಲಿಮ್ ಫೋನ್ ಆಗಿ ಹೊರಹೊಮ್ಮಿದೆ. ಇದು 5 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದ್ದು 1080p ರೆಸಲ್ಯೂಶನ್‌ನಲ್ಲಿದೆ.

Mi3 ಸ್ಮಾರ್ಟ್‌ಫೋನ್ ವೈಶಿಷ್ಟ್ಯತೆ

#2

4.4.2 ಕಿಟ್‌ಕ್ಯಾಟ್ ಚಾಲನೆಯಲ್ಲಿದೆ ಎಂಬುದೇ ಫೋನ್‌ನ ವಿಶೇಷತೆಯಾಗಿದ್ದು ಭಾರತೀಯ ಬಳಕೆದಾರರು ತಮ್ಮ ಜೀವನದಲ್ಲಿ ಒಮ್ಮೆ ಪ್ರಯತ್ನಿಸಬೇಕೆಂದು ಕಾತರಿಸುವ ಹಲವಾರು ವೈಶಿಷ್ಟ್ಯಗಳನ್ನು ಫೋನ್ ಹೊಂದಿದೆ.

Mi3 ಸ್ಮಾರ್ಟ್‌ಫೋನ್ ಸಂಪರ್ಕ ವಿಶೇಷತೆ

#3

ಇದು ವೇಗವಾಗಿರುವ 3 ಜಿಗೆ ಬೆಂಬಲ ಒದಗಿಸುತ್ತಿದ್ದು 2 ಜಿ, ಬ್ಲ್ಯೂಟೂತ್ ಆವೃತ್ತಿ 4.0, ಎಫ್‌ಎಮ್ ರೇಡಿಯೋ ಮತ್ತು ಇನ್ನಷ್ಟು ವಿಶೇತೆ ಫೋನ್‌ಗಿದೆ.

ಶಯೋಮಿ Mi3 ಸ್ಮಾರ್ಟ್‌ಫೋನ್ ಕ್ಯಾಮೆರಾ

#4

ಶಯೋಮಿ Mi3 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್ ಡಿವೈಸ್‌ನಲ್ಲಿದೆ. ಈ ಎರಡೂ ಕ್ಯಾಮೆರಾಗಳು ವೀಡಿಯೋ ರೆಕಾರ್ಡಿಂಗ್ ಅನ್ನು ಪೂರ್ಣ HD 1080 ಪಿಕ್ಸೆಲ್‌ನಲ್ಲಿ ಮಾಡುತ್ತವೆ. ಡ್ಯುಯೆಲ್ LED ಫ್ಲ್ಯಾಶ್ f/2.2 APERTURE ಮತ್ತು 28mm ವೈಡ್ ಏಂಗಲ್ ಲೆನ್ಸ್ ಡಿವೈಸ್‌ನಲ್ಲಿದೆ.

Mi3 ಸ್ಮಾರ್ಟ್‌ಫೋನ್ ಪ್ರೊಸೆಸರ್

#5

ರೂ 13,999 ರಲ್ಲಿ ಬಂದಿರುವ ಈ ಸ್ಮಾರ್ಟ್‌ಫೋನ್ 2.5GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಅನ್ನು ಒಳಗೊಂಡಿದ್ದು 2 ಜಿಬಿ RAM ಡಿವೈಸ್‌ನಲ್ಲಿದೆ. ಫೋನ್‌ನ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದರ ಆಂತರಿಕ ಮೆಮೊರಿಯನ್ನು ನಿಮಗೆ ವಿಸ್ತರಿಸಲು ಸಾಧ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="390" src="//www.youtube.com/embed/Orpvx0vLvQw" frameborder="0" allowfullscreen></iframe></center>

Read more about:
English summary
This article tells about that xiaomi Mi3 first look and hands on review A Metal-Crafted Smartphone Thats Meant to Change Perceptions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot