Home
ಮೊಬೈಲ್

ಕ್ಸಯೋಮಿಯ ಹೊಸ Mi3 ಸ್ಮಾರ್ಟ್‌ಫೋನ್ ಇನ್ನು ಭಾರತದಲ್ಲೂ

By Shwetha

ತನ್ನ ತಾಯ್ನಾಡಾದ ಚೀನಾದಲ್ಲಿ ಕ್ಸಯೋಮಿಗೆ ಹೆಚ್ಚು ಆದ್ಯತೆಯಿದೆ. ಇದು ತಯಾರಿಸುವ ಸ್ಮಾರ್ಟ್‌ಫೋನ್‌ಗೆ ಅಲ್ಲಿ ಉತ್ತಮ ಬೇಡಿಕೆ ಇದೆ. ಈಗಾಗಲೇ ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಚೀನಾ ಫೋನ್‌ಗಳು ಕಾಲಿಟ್ಟಿದ್ದು ಕ್ಸಯೋಮಿ ಇಲ್ಲೂ ತನ್ನ ಅದೃಷ್ಟವನ್ನು ಪರೀಕ್ಷಿಶಿಸಿಕೊಳ್ಳಲಿದೆ.

ಮಾರುಕಟ್ಟೆಯಲ್ಲಿ ಕ್ಸಯೋಮಿ ಫೋನ್ ಆಕರ್ಷಕ ಮತ್ತು ಭಾರೀ ನಿರೀಕ್ಷೆಯನ್ನು ಹುಟ್ಟಿಸುವಂತೆ ಕಂಡುಬರುತ್ತಿದೆ. ಆದ್ದರಿಂದಲೇ ಕಂಪೆನಿಯು ತನ್ನ Mi3 ಹ್ಯಾಂಡ್‌ಸೆಟ್‌ ಅನ್ನು ಭಾರತೀಯ ವೆಬ್‌ಸೈಟ್‌ಗಳಲ್ಲಿ ಬಳಕೆದಾರರಿಗೆ ಖರೀದಿಸಲಿಕ್ಕಾಗಿ ಕಂಪೆನಿ ಪಟ್ಟಿ ಮಾಡಿದೆ. ಇದರ ಬೆಲೆ ರೂ 14,999 ಆಗಿದ್ದು ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಡಿವೈಸ್ ಅನ್ನು ಇನ್ನೂ ವಿಸ್ತಾರವಾಗಿ ನೋಡ ಹೊರಟಾಗ, ಕ್ಸಯೋಮಿ Mi3 5 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ ಇದು ಪೂರ್ಣ ಎಚ್‌ಡಿ ರೆಸಲ್ಯೂಶನ್ (1920 x 1080 ಪಿಕ್ಸೆಲ್‌ಗಳು) ಅನ್ನು ನೀಡುತ್ತಿದ್ದು ಕೊರ್ನಿಂಗ್ ಗ್ಲಾಸ್ ಸುರಕ್ಷತೆಯೊಂದಿಗೆ ಬರುತ್ತಿದೆ.

ಈ ಡಿವೈಸ್ ಕುರಿತಾದ ಇನ್ನಷ್ಟು ವಿವರವಾದ ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೀಡುತ್ತಿದ್ದು ಗಮನಿಸಿ

#1

#1

ಹೊಸ ಕ್ಸಯೋಮಿ Mi3 ನಿಮಗೆ 1080ಪಿ ಎಚ್‌ಡಿ ವೀಡಿಯೋವನ್ನು 3ಡಿ ಗೇಮ್ ವಾತಾವರಣದಲ್ಲಿ ನೀಡುತ್ತಿದೆ. ಇದರ ಡಿಸ್‌ಪ್ಲೇಯೊಂದಿಗೆ, ಫೋಟೋಗಳು ಇನ್ನಷ್ಟು ಆಕರ್ಷಕವಾಗಿ ನಿಮಗೆ ಕಾಣುತ್ತವೆ. ಫೋನ್‌ನ ಪೂರ್ಣ ಪರದೆ, ಆಂಟಿ - ಗ್ಲೇರ್ ಕೋಟಿಂಗ್ ನಿಮಗೆ ಹೆಚ್ಚು ಸ್ಕ್ರೀನ್ ಗುಣಮಟ್ಟವನ್ನು ನೀಡುತ್ತದೆ.

#2

#2

ಒಳಗೆ - ಹೊರಗೆ ವಿಶೇಷತೆ
ಹೊಸ ಕ್ಸಯೋಮಿ, 8.1 ಎಮ್‌ಎಮ್ ದಪ್ಪವನ್ನೂ, 145 ಗ್ರಾಮ್ ತೂಕವನ್ನು ಹೊಂದಿದೆ. ಇದು ಅಲ್ಯುಮಿನಿಯಮ್ ಮೆಗ್ನೇಶಿಯಮ್ ಅಲೋಯ್ ಫ್ರೇಮ್ ಅನ್ನು ಹೊಂದಿದ್ದು, ಥರ್ಮಲ್ ಗ್ರಾಫಿಟ್‌ನ ಮೂರು ಪದರಗಳನ್ನು ಹೊಂದಿದೆ.

#3

#3

ವೇಗ
ಇದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 8274AB 2.3GHz ಅನ್ನು ಹೊಂದಿದ್ದು, Adreno 330 450MHz GPU ಇದರಲ್ಲಿದೆ. 2ಜಿಬಿ LPDDR3 RAM ಅನ್ನು ಡಿವೈಸ್ ಹೊಂದಿದ್ದು ಇದು ಫ್ಲ್ಯಾಶ್ ಮೆಮೊರಿಯನ್ನು ಒಳಗೊಂಡಿದೆ.

#4

#4

ಕ್ಯಾಮೆರಾ
ಕಡಿಮೆ ಬೆಳಕಿನಲ್ಲಿ ಸೂಪರ್ ಲಾರ್ಜ್ ಎಕ್ಸೋಮರ್ ಸೆನ್ಸಾರ್ ಜೊತೆಗೆ ಆಕರ್ಷಕ ಫೋಟೋಗಳನ್ನು ತೆಗೆಯಲು ಇದು ನಿಮ್ಮನ್ನು ಅನುಮತಿಸುತ್ತದೆ. ಇದರಲ್ಲಿ ನಿರ್ಮಿತವಾಗಿರುವ ಫಿಲಿಪ್ಸ್ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್ ನಿಮ್ಮ ಫೋಟೋ ವಿಷಯವನ್ನು ಇನ್ನಷ್ಟು ಸುಂದರಗೊಳಿಸಲು ಸೂಕ್ತವಾದ ಬೆಳಕನ್ನು ಒದಗಿಸುತ್ತದೆ.

#5

#5

ಎಮ್‌ಐ ಕ್ಲೌಡ್ ಬೆಂಬಲ
ಕ್ಸಯೋಮಿಯ ಸ್ವಂತ ಕ್ಲೌಡ್ ಬೆಂಬಲದೊಂದಿಗೆ ನಿಮ್ಮ ಫೋನ್‌ನ ಸಂಪರ್ಕಗಳು, ಫೋಟೋಗಳು ಮತ್ತು ಟಿಪ್ಪಣಿಗಳನ್ನು ಯಾವುದೇ ಬ್ರೌಸರ್‌ನಲ್ಲಿ ಪ್ರವೇಶಿಸಬಹುದಾಗಿದೆ. ನಿಮ್ಮ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳನ್ನು ಕೂಡ ಇದರಲ್ಲಿ ವೇಗವಾಗಿ ನೋಡಬಹುದಾಗಿದ್ದು ಪ್ರತ್ಯುತ್ತರ ಎಸ್‌ಎಮ್‌ಎಸ್ ಸಂದೇಶಗಳನ್ನು ಕೂಡ ಕಳುಹಿಸಬಹುದಾಗಿದೆ.

Best Mobiles in India

English summary
This article tells that xiaomi china based company lauched its Mi3 smartphone at 14,999. and here it highlighting the top five features of phones also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+