ಶಯೋಮಿ Mi 3 ಸಾಧಕ ಬಾಧಕಗಳು ಏಕೆ ಮಹತ್ವಪೂರ್ಣ

Written By:

ಶಯೋಮಿ Mi 3 ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹೆಚ್ಚು ಸಮಯವಾಗದಿದ್ದರೂ ಇನ್ನೂ ಇದರ ಬಿಸಿ ತಣಿದಿಲ್ಲ ಎಂಬುದು ಅರಿವಾಗುತ್ತಿದೆ. ಹೊಸ ಫೋನ್‌ಗೆ ಇದ್ದಂತಹ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮಾರುಕಟ್ಟೆಯಲ್ಲಿ ತನ್ನದೇ ಇಮೇಜನ್ನು ಸ್ಥಾಪಿಸುವಲ್ಲಿ Mi 3 ಸಫಲವಾಗಿದೆ.

ಇನ್ನು ಇದರ ವೈಶಿಷ್ಟ್ಯಗಳೆಡೆಗೆ ಪುನಃ ನೋಟ ಹರಿಸಿದಾಗ ಫೋನ್ 5 ಇಂಚಿನ IPS ಡಿಸ್‌ಪ್ಲೇಯ ಜೊತೆಗೆ ಪೂರ್ಣ HD ರೆಸಲ್ಯೂಶನ್ (1920 x 1080 pixels) ಮತ್ತು 441ppi ಪಿಕ್ಸೆಲ್ ಡೆನ್ಸಿಟಿಯನ್ನು ಒದಗಿಸುತ್ತಿದೆ. ಫೋನ್ ಗೋರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬಂದಿದ್ದು 2.3 GHz ಕ್ವಾಡ್‌ ಕೋರ್ ಸ್ನ್ಯಾಪ್‌ಡ್ರಾಗನ್ ಫೋನ್‌ನಲ್ಲಿದೆ ಮತ್ತು 2GB DDR3 RAM ಅನ್ನು ನಾವು ಫೋನ್‌ನಲ್ಲಿ ವೀಕ್ಷಿಸಬಹುದು.

ಇದು ಅತ್ಯುತ್ತಮ ಕ್ಯಾಮೆರಾ ವಿಶೇಷತೆಗಳನ್ನು ನೀಡುತ್ತಿದ್ದು 13MP ರಿಯರ್ ಕ್ಯಾಮೆರಾವನ್ನು ನಾವು ಫೋನ್‌ನಲ್ಲಿ ನೋಡಬಹುದು. ಇದರ ಮುಂಭಾಹ ಕ್ಯಾಮೆರಾ 2MP ಆಗಿದ್ದು ಇದು 1080p ಪೂರ್ಣ HD ವೀಡಿಯೊ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಅಳತೆ 114mm×72mm×8.1mm ಆಗಿದ್ದು ತೂಕ 145g ಆಗಿದೆ ಮತ್ತು 16 GB ಆಂತರಿಕ ಮೆಮೊರಿಯನ್ನು ಡಿವೈಸ್ ಹೊಂದಿದೆ.

ಇಂದಿನ ಲೇಖನದಲ್ಲಿ ಫೋನ್ ಕುರಿತ ಸಾಧಕ ಬಾಧಕ ಅಂಶಗಳನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಯೋಮಿ Mi 3 ಸಾಧಕಗಳು

ಶಯೋಮಿ Mi 3 ಸಾಧಕಗಳು

#1

ಶಕ್ತಿಯುತ ಕಾರ್ಯನಿರ್ವಹಣೆ
ಇದು ಕ್ವಾಡ್ - ಕೋರ್ 2.3 GHz Krait 400 CPU ಜೊತೆಗೆ Qualcomm MSM8274AB Snapdragon 800 ಚಿಪ್‌ಸೆಟ್ ಜೊತೆಗೆ ಅದ್ಧೂರಿಯಾಗಿದೆ. ಇದರ ಪ್ರೊಸೆಸಿಂಗ್ ಸಾಮರ್ಥ್ಯವೇ ಫೋನ್‌ನ ಮಹತ್ವತೆಯನ್ನು ನಮಗೆ ತಿಳಿಸಿಕೊಡಲಿದೆ. ಬಳಕೆದಾರರಿಗೆ ಇದೊಂದು ಅತ್ಯುತ್ತಮ ಅನುಭವವಾಗಲಿದೆ.

ಶಯೋಮಿ Mi 3 ಬಾಧಕಗಳು

ಶಯೋಮಿ Mi 3 ಬಾಧಕಗಳು

#2

LTE ಇಲ್ಲ
4G LTE ಹೆಚ್ಚಿನ ಎಲ್ಲಾ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವಂತಹ ಒಂದು ಅಂಶವಾಗಿದ್ದು ಈ ಫೋನ್‌ನಲ್ಲಿ ಈ ಅಂಶದ ಕೊರೆತೆಯು ಕೊಂಚ ನಿರಾಸೆಯನ್ನುಂಟು ಮಾಡಿದೆ ಎಂದೇ ಹೇಳಬಹುದು. 4G LTE ಬೆಂಬಲವು ಅತ್ಯುತ್ತಮ ಅಂತರ್ಜಾಲ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ ಆದರೆ ಇದರ ಕೊರತೆಯನ್ನು ಫೋನ್ ಗ್ರಾಹಕರು ಎದುರಿಸಬೇಕಾಗುತ್ತದೆ.

ಶಯೋಮಿ Mi 3 ಸಾಧಕಗಳು

ಶಯೋಮಿ Mi 3 ಸಾಧಕಗಳು

#3

ಅತ್ಯುನ್ನತ MIUI ಬೆಂಬಲ
Mi3 ಆಕರ್ಷಕ MIUI ಇಂಟರ್ಫೇಸ್‌ ಜೊತೆಗೆ ಬಂದಿದ್ದು ಇದು ಸಂಪೂರ್ಣ ಅನುಭವವನ್ನು ಮೋಜಿನಂತೆ ಮಾಡುತ್ತದೆ. UI ಅಂಶವು ಈ ದಿನಗಳಲ್ಲಿ ಸಂಪೂರ್ಣ UI ಇಂಟರ್ಫೇಸ್‌ಗಳನ್ನು ತಾಜಾಗೊಳಿಸುತ್ತದೆ ಮತ್ತು ಇದನ್ನು ನೀವು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಶಯೋಮಿ Mi 3 ಬಾಧಕಗಳು

ಶಯೋಮಿ Mi 3 ಬಾಧಕಗಳು

#4

ಬ್ಯಾಟರಿ ಕೊರತೆ
3050mAh ಬ್ಯಾಟರಿಯನ್ನು ಒಳಗೊಂಡಿರುವ ಶಯೋಮಿ Mi 3 ಬ್ಯಾಟರಿ ಕೊರೆತಯನ್ನು ಎದುರಿಸುವುದು ನಿಚ್ಚಳವಾಗಿ ಕಂಡುಬಂದಿದೆ. ಸಾಮಾನ್ಯ ಬಳಕೆಗೆ ಮಾತ್ರವೇ ಬಳಸಬಹುದಾದ ಬ್ಯಾಟರಿಯನ್ನು ಫೋನ್ ಹೊಂದಿದ್ದು ಅಧಿಕ ಬಳಕೆಯಲ್ಲಿ ಇದು ವಿಫಲತೆಯನ್ನು ಪ್ರದರ್ಶಿಸುವುದು ನೂರು ಪ್ರತಿಶತ ಅಧಿಕವಾಗಿದೆ. ಬಳಕೆದಾರರು ಆಗಾಗ್ಗೆ ಚಾರ್ಜ್‌ ಮಾಡುವುದನ್ನು ನಿರ್ವಹಿಸಲೇಬೇಕು.

ಶಯೋಮಿ Mi 3 ಸಾಧಕಗಳು

ಶಯೋಮಿ Mi 3 ಸಾಧಕಗಳು

#5

ಸುಂದರ ನಿರ್ಮಾಣ
ಶಯೋಮಿ Mi 3 ನಿರ್ಮಾಣ ಕಣ್ಣಿಗೆ ಹಬ್ಬವನ್ನು ನೀಡಿದ್ದು ಇದೇ ಬೆಲೆಗೆ ಬರುವಂತಹ ಇತರ ಫೋನ್‌ಗಳಿಗಿಂತ ಇದು ಹೆಚ್ಚು ಆಕರ್ಷಕವಾಗಿ ಕಂಡುಬರುತ್ತಿದೆ. 5 ಇಂಚಿನ ಫಾರ್ಮ್ ಫ್ಯಾಕ್ಟರ್ ಮತ್ತು ಮೆಟಲ್ ರಚನೆಯೊಂದಿಗೆ, ಹೆಚ್ಚಿನವರ ಕಣ್ಣನ್ನು ಈ ಫೋನ್ ತಣಿಸುವುದು ನಿಜವಾಗಿದೆ.

ಶಯೋಮಿ Mi 3 ಬಾಧಕಗಳು

ಶಯೋಮಿ Mi 3 ಬಾಧಕಗಳು

#6

ಮೈಕ್ರೋಎಸ್‌ಡಿ ಸ್ಲಾಟ್ ಇಲ್ಲ
ಬಿಡುಗಡೆಯಾಗಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಎಸ್‌ಡಿ ಬೆಂಬಲದೊಂದಿಗೆ ಬಂದಿದ್ದು ಶಯೋಮಿ Mi 3 ಈ ಅಂಶವನ್ನು ಒಳಗೊಂಡಿಲ್ಲ. ಡಿವೈಸ್‌ನ ಮೆಮೊರಿಯನ್ನು ವಿಸ್ತರಿಸುವ ಸಾಮರ್ಥ್ಯ ಇದರಲ್ಲಿಲ್ಲ. ಆದ್ದರಿಂದ ಮೆಮೊರಿಯನ್ನು ಜಾಗರೂಕತೆಯಿಂದ ಬಳಸಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಇದೆ.

ಶಯೋಮಿ Mi 3 ಸಾಧಕಗಳು

ಶಯೋಮಿ Mi 3 ಸಾಧಕಗಳು

#7

ಅಲ್ಯುಮಿನಿಯಮ್ ಮೆಗ್ನೇಶಿಯಮ್ ಚೇಸಿಸ್
ಇದೇ ಬೆಲೆಯಲ್ಲಿ ಬರುವ ಇತರ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದಾಗ ಶಯೋಮಿಯ ರಚನೆ ಕಣ್ಣಿಗೆ ಕಟ್ಟಿದಂತಿರುವುದು ನಿಚ್ಚಳವಾಗಿ ತೋರುತ್ತದೆ.

ಶಯೋಮಿ Mi 3 ಬಾಧಕಗಳು

ಶಯೋಮಿ Mi 3 ಬಾಧಕಗಳು

#8

16GB ಆಂತರಿಕ ಮೆಮೊರಿ
ಇದು ಹೆಚ್ಚುವರಿ ಎಸ್‌ಡಿ ಕಾರ್ಡ್ ಅನ್ನು ಹೊಂದಿಲ್ಲವಾದ್ದರಿಂದ, 16GB ಆಂತರಿಕ ಮೆಮೊರಿಯನ್ನು ಮಾತ್ರ ನೀಡುತ್ತದೆ. ಇದು ಹೆಚ್ಚುವರಿ ಡೌನ್‌ಲೋಡಿಂಗ್ ಮತ್ತು ಶೇಖರಣೆ ವಿಷಯದಲ್ಲಿ ಹಿಂದೆ ಬೀಳುವುದು ನಿಚ್ಚಳವಾಗಿ ಕಂಡುಬರುತ್ತಿದೆ. ಸಂಗೀತ, ವೀಡಿಯೋಗಳಿಗೆ ಬೇಕಾದಷ್ಟು ಸ್ಥಳವನ್ನು ಈ ಫೋನ್ ಹೊಂದಿಲ್ಲದಿರುವುದಿಲ್ಲ.

ಶಯೋಮಿ Mi 3 ಸಾಧಕಗಳು

ಶಯೋಮಿ Mi 3 ಸಾಧಕಗಳು

#9

ಕಡಿಮೆ ಬೆಲೆ
ಇದು ಕಡಿಮೆ ಬೆಲೆಯಲ್ಲಿ ಬಂದಿದ್ದು ಹೆಚ್ಚುಕಡಿಮೆ ಗ್ರಾಹಕರಿಗೆ ಅತ್ಯುತ್ತಮ ಲಾಭವನ್ನು ಒದಗಿಸುವ ನಿಟ್ಟಿನಲ್ಲಿ ಕಂಡುಬರುತ್ತಿದೆ. ನೀವು ಕೊಡುವ ದುಡ್ಡಿಗೆ ಇದು ಅತ್ಯುತ್ತಮ ಪ್ರತಿಫಲವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಶಯೋಮಿ Mi 3 ಬಾಧಕಗಳು

ಶಯೋಮಿ Mi 3 ಬಾಧಕಗಳು

#10

ವಿವಾದಗಳು
ಶಯೋಮಿ Mi 3 ಬಿಡುಗಡೆಯಾಗಿ ಹೆಚ್ಚು ಸಮಯವೇನೂ ಆಗಿಲ್ಲ. ಅದಾಗ್ಯೂ, ಶಯೋಮಿ ಬಳಕೆದಾರ ಡೇಟಾವನ್ನು ಚೀನಾಕ್ಕೆ ರವಾನಿಸುತ್ತಿದೆ ಎಂಬ ವದಂತಿ ಹಬ್ಬುತ್ತಿದೆ. ಇದರ ಬಗ್ಗೆ ಮಾಹಿತಿಗಳನ್ನು ಕಲೆಹಾಕುವ ಕೆಲಸವನ್ನು ಫೋನ್ ಗ್ರಾಹಕರು ಇದೀಗ ಮಾಡುತ್ತಿದ್ದು ಫೋನ್‌ಗೆ ಒಂದು ರೀತಿಯಲ್ಲಿ ನಷ್ಟವನ್ನು ಉಂಟುಮಾಡುತ್ತಿದೆ ಎಂಬುದೇ ಭೀತಿಯ ವಿಷಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about xiaomi mi3 smartphone pros and cons take note.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot