Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ 39 ನಿಮಿಷದಲ್ಲಿ ಶಯೋಮಿ Mi 3 ಮಾರಾಟ

Written By:

ಶಯೋಮಿ ತನ್ನ Mi 3 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಸ್ಮಾರ್ಟ್‌ಫೋನ್ ರೂ 13,999 ಕ್ಕೆ ಲಭ್ಯವಾಗುತ್ತಿದ್ದು ಕಂಪೆನಿಯ ರೀಟೈಲ್ ಪಾಲುದಾರನಾದ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಸಂಚಲವನ್ನುಂಟು ಮಾಡಿದೆ.

ಜುಲೈ 22 ರಂದು ಬಿಡುಡೆಯಾಗಿರುವ ಈ ಫೋನ್, Mi 3 ಯ ಸ್ಟಾಕ್ 38 ನಿಮಿಷಗಳಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 50 ಸೆಕೆಂಡ್‌ಗಳಲ್ಲಿ ಮಾರಾಟವಾಗಿದೆ. ಶಯೋಮಿ ಫೋನ್ ಜುಲೈ 15 ಕ್ಕೆ ಭಾರತೀಯ ಮಾರುಕಟ್ಟೆಗೆ ಬಂದಿದ್ದು Mi 3 ಒಂದು ಅತ್ಯದ್ಭುತ ಫೋನ್ ಎನ್ನುವುದರಲ್ಲಿ ಸಂಶಯವಿಲ್ಲ. ಕೆಲವೊಂದು ಭರ್ಜರಿ ದರವುಳ್ಳ ಫೋನ್‌ಗಳಲ್ಲಿ ಕಂಡು ಬರುವ ವೈಶಿಷ್ಟ್ಯವನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವುದು ಇದರ ಗರಿಮೆಗೆ ಸಾಕ್ಷಿಯಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಶಯೋಮಿ Mi 3 ಕಮಾಲ್

ಶಯೋಮಿಯ ಭಾರತದ ಕಾರ್ಯಾಚರಣೆ ಮುಖ್ಯಸ್ಥ ಮನು ಜೈನ್ ಹೇಳುವಂತೆ, ನಮ್ಮ ಭಾರತೀಯ ಫೋನ್ ಪ್ರಿಯರು ಈ ಮಟ್ಟದಲ್ಲಿ ನಮ್ಮ ಫೋನ್‌ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಹುದೆಂದು ನಾವು ಅಂದುಕೊಂಡಿರಲಿಲ್ಲ. ಇಂದು ಯಾರು Mi 3 ಅನ್ನು ಖರೀದಿಸಿಲ್ಲವೋ ಅವರಲ್ಲಿ ನಾವು ಕ್ಷಮೆ ಕೇಳುತ್ತಿದ್ದೇವೆ. ನಾವು ಫ್ಲಿಪ್‌ಕಾರ್ಟ್‌ ಜತೆಗೆ ಕಾರ್ಯ ನಿರ್ವಹಿಸುತ್ತಿದ್ದು ಹೆಚ್ಚುವರಿ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ನಾವು ಶ್ರಮಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ವಿಶೇಷವಾಗಿ ಲಭ್ಯವಾಗುತ್ತಿರುವ ಈ ಫೋನ್ ಭಾರತದಲ್ಲಿ Mi 3 ಖಂಡಿತ ಯಶಸ್ಸನ್ನು ಸಾಧಿಸುವ ನಿರೀಕ್ಷೆಯಲ್ಲಿದೆ.

Read more about:
English summary
This article tells about that xiaomi Mi3 sold out In 39 minutes on Flipcart.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot