ಶಯೋಮಿ Mi4 ಹ್ಯಾಂಡ್‌ಸೆಟ್ ಡಿಸೆಂಬರ್‌ನಲ್ಲಿ ತೆರೆಗೆ

By Shwetha
|

ಶಯೋಮಿ ದೇಶದಲ್ಲಿ ತನ್ನ ಉತ್ಪನ್ನವನ್ನು ಇನ್ನಷ್ಟು ಖ್ಯಾತಿಯುಕ್ತವಾಗಿ ಪ್ರಚಾರ ಪಡಿಸುವ ನಿಟ್ಟಿನಲ್ಲಿದೆ. ಚೀನಾದ ಆಪಲ್ ಎಂದೇ ತನ್ನ ಹೆಸರನ್ನು ಜನಪ್ರಿಯಗೊಳಿಸುತ್ತಿರುವ ಈ ಕಂಪೆನಿ ಮುಂಬರುವ ದಿನಗಳಲ್ಲಿ ನಂಬರ್ ಒನ್ ಪಟ್ಟಿಯನ್ನು ಭದ್ರ ಪಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

ಹೊಸ Mi3 ಯ ಜನಪ್ರಿಯ ಬಿಡುಗಡೆಯೊಂದಿಗೆ ಎಲ್ಲರ ಕಣ್ಣು ಇದೀಗ ಕಂಪೆನಿ ಬಿಡುಗಡೆ ಮಾಡುತ್ತಿರುವ Mi4 ಹ್ಯಾಂಡ್‌ಸೆಟ್ ಮೇಲಿದ್ದು ಇದು ಕೂಡ ಧಮಾಕಾವನ್ನು ಸೃಷ್ಟಿಸಲಿದೆ ಎಂಬುದು ನಿಜವಾಗುತ್ತಿದೆ.

ಇನ್ನು Mi4 ನ ವಿಶಿಷ್ಟತೆಯ ಕಡೆಗೆ ನೋಡುವುದಾದರೆ, 5.5 ಇಂಚಿನ Quad HD ಡಿಸ್‌ಪ್ಲೇ ಜೊತೆಗೆ ಇದು ಬಂದಿದ್ದು 2560x1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಇದು ನೀಡುತ್ತಿದೆ. ಎಲ್‌ಜಿ ಜಿ3 ಸಮನಾಗಿ ಈ ಸೆಟ್ ನಿಲ್ಲಲಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಮೊಬೈಲ್ ಪ್ರಿಯರ ಕಣ್ಮಣಿ ಎಂದೆನಿಸುವುದಲ್ಲಿ ಯಾವುದೇ ಸಂದೇಹವಿಲ್ಲ.

Mi4 ನ ಇನ್ನಷ್ಟು ಮೆರುಗಳ್ಳ ಅಂಶಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡುತ್ತಿದ್ದು ಇದರತ್ತ ಗಮನ ಹರಿಸಿ.

#1

#1

Mi3 ಗಾಗಿ MIUI V5 ಆವೃತ್ತಿಯೊಂದಿಗೆ ನೀವು ಈಗಾಗಲೇ ಇಷ್ಟ ಪಟ್ಟಂತಹ ಅದೇ ವೈಶಿಷ್ಟ್ಯವನ್ನು MIUI V6 ನೊಂದಿಗೆ Mi4 ನಿಮಗೆ ನೀಡಲಿದೆ. ಇದರಲ್ಲಿ ಆಯ್ಕೆಗಳಾದ ಕ್ವಿಟ್ ಅವರ್ಸ್, ವರ್ಧಿತ ಮುಖ್ಯ ಪರದೆ, ಕಾನ್ಫಿಗರ್ ಮಾಡಬಹುದಾದ ತ್ವರಿತ ಸೆಟ್ಟಿಂಗ್‌ಗಳು ಹೀಗೆ ನಿಮ್ಮ ಆಯ್ಕೆಯ ಕೆಲವೊಂದು ಆಯ್ಕೆಗಳು ನಿಮಗೆ ದೊರೆಯಲಿದೆ.

#2

#2

EMMC 5.0 ಬೆಂಬಲವನ್ನು ಹೊಸ ಪ್ರಮಾಣಿತ EMMC 5.0 ಬಲಕೆದಾರರು ಬಳಸುತ್ತಿದ್ದು ಕಂಪೆನಿಯು ಒದಗಿಸುತ್ತಿರುವ 32GB ಆಂತರಿಕ ಫ್ಲ್ಯಾಶ್ ಮೆಮೊರಿಯನ್ನು ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಬಳಕೆದಾರರು ಪ್ರವೇಶಿಸಬಹುದಾಗಿದೆ. LP-DDR3 RAM ನ 3GB ಇದರಲ್ಲಿದ್ದು 1866MHz ಪ್ರೊಸೆಸರ್ ನಿಮಗೆ ಹೆಚ್ಚುವರಿ ಅಪ್ಲಿಕೇಶನ್‌ಗಳ ಬಳಕೆಗೆ ಪೂರಕವಾಗಿದೆ.

#3

#3

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ 2.5GHz ಕ್ವಾಡ್ ಕೋರ್ ಸಿಪಿಯು ಇದು ವೇಗವಾಗಿರುವ ಸ್ನ್ಯಾಪಿ ಪ್ರೊಸೆಸಿಂಗ್ ಅನ್ನು ನಿಮಗೆ ಒದಗಿಸುತ್ತದೆ. ಇದರ ಚಿಪ್‌ಸೆಟ್ ನಿಮಗೆ ತ್ವರಿತ ವೇಗ, ಗೇಮಿಂಗ್ ಅನುಭವ, 3D ಇಂಟರ್ಫೆಸ್‌ಗಳ ವರ್ಧನೆ ಬಣ್ಣಗಳು ಹೀಗೆ ಪ್ರತಿಯೊಂದು ಅಂಶಗಳಲ್ಲೂ ವೇಗತೆಯನ್ನು ಒದಗಿಸುತ್ತದೆ.

#4

#4

Mi4 ನೊಂದಿಗೆ ಪ್ರಪಂಚದ ಯಾವ ಮೂಲೆಯಲ್ಲೂ ನೀವು ವೇಗವಾದ ಅಂತರ್ಜಾಲ ವ್ಯವಸ್ಥೆಯನ್ನು ಪ್ರವೇಶಿಸಬಹುದಾಗಿದೆ. ಈ ಫೋನ್ ಖಂಡಿತ ನಿಮಗೆ ಇಷ್ಟವಾಗಬಹುದೆಂಬುದು ನಮ್ಮ ನಂಬಿಕೆಯಾಗಿದೆ.

#5

#5

Mi4 ಸೋನಿಯ ಮಟ್ಟದಲ್ಲೇ 16MP ರಿಯರ್ ಕ್ಯಾಮೆರಾವನ್ನು ಒದಗಿಸುತ್ತಿದ್ದು ಇದರೊಂದಿಗೆ ಡ್ಯುಯಲ್ LED ಫ್ಲ್ಯಾಶ್ ಜೊತೆಸೇರಿದೆ. ಶಯೋಮಿ Mi4 ನಿಮಗೆ ಹಗಲು ರಾತ್ರಿಯೆನ್ನದೆ ನಿಮಗೆ ಫೋಟೋವನ್ನು ಒದಗಿಸುತ್ತದೆ.

Best Mobiles in India

Read more about:
English summary
This article tells about xiaomi Mi4 could be coming this december top 5 features consider to in mind.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X