ಕ್ಸಯೋಮಿ Mi4 ಸ್ಮಾರ್ಟ್‌ಫೋನ್ ಜುಲೈ 22 ಕ್ಕೆ ಲಾಂಚ್

Written By:

ಚೈನಾದ ಆಪಲ್ ಎಂದೇ ಕರೆಸಿಕೊಳ್ಳುತ್ತಿರುವ ಕ್ಸಯೋಮಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ತಲೆನೋವಾಗಿ ಪರಿಣಮಿಸಲಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೋನ್ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಮಾರುಕಟ್ಟೆಗೆ ವಿತರಣೆ ಮಾಡುತ್ತಿರುವುದೇ ಈಗ ಪ್ರಖ್ಯಾತ ಕಂಪೆನಿಗಳಿಗೆ ತಲೆನೋವಾಗಿ ಬಿಟ್ಟಿದೆ.

ಕ್ಸಯೋಮಿ Mi3 ಮತ್ತು ಕ್ಸಯೋಮಿ ರೆಡ್ಮೀ ನೋಟ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಇದರ ಬೆನ್ನಿಗೆ ಭಾರತದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು Mi4 ಅನ್ನು ಲಾಂಚ್ ಮಾಡುತ್ತಿದೆ. ಇದು 805 ಕ್ವಾಡ್ ಕೋರ್ CPU ಜೊತೆಗೆ ಬಂದಿದ್ದು 2.5GHz ಸಂಯೋಜನೆ ಇದರಲ್ಲಿದೆ. RAM 3 ಜಿಬಿ ಫೋನ್‌ನಲ್ಲಿದೆ. ಇದು MIUI V5 ಆಧಾರಿತವಾಗಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಆವೃತ್ತಿಯಲ್ಲಿ ಫೋನ್ ಚಾಲನೆಯಾಗುತ್ತಿದೆ.

ಇಂದಿನ ಲೇಖನದಲ್ಲಿ ನಾವು ಈ ಫೋನ್‌ನ ಐದು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಂದಿದ್ದು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಸಯೋಮಿ Mi4 ವೈಶಿಷ್ಟ್ಯಗಳು

ಕ್ಸಯೋಮಿ Mi4 ವೈಶಿಷ್ಟ್ಯಗಳು

#1

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
ಈ ಡಿವೈಸ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆ 2.5GHz ಕ್ವಾಡ್ ಕೋರ್ CPU ನೊಂದಿಗೆ ಬಂದಿದ್ದು ಇದು ವೇಗವಾಗಿರುವ ಸ್ನ್ಯಾಪಿ ಪ್ರೊಸೆಸಿಂಗ್ ಅನ್ನು ನೀಡುತ್ತಿದೆ. 3 ಡಿ ಇಂಟರ್ಫೆಸ್ ಅನ್ನು ಬೆಂಬಲಿಸುವ ಈ ಡಿವೈಸ್ ಅತ್ಯದ್ಭುತ ಬಣ್ಣದಿಂದ ಕೂಡಿದೆ.

ಕ್ಸಯೋಮಿ Mi4 ವೈಶಿಷ್ಟ್ಯಗಳು

ಕ್ಸಯೋಮಿ Mi4 ವೈಶಿಷ್ಟ್ಯಗಳು

#2

MIUI V6 ನ ಶಕ್ತಿ
ನೀವು ತುಂಬಾ ಇಷ್ಟಪಡುವ ವೈಶಿಷ್ಟ್ಯವನ್ನು MIUI V6 ಹೊಂದಿದ್ದು ವರ್ಧಿತ ಮುಖ್ಯ ಪರದೆ, ಕಾನ್ಫಿಗರ್ ಮಾಡಬಹುದಾದ ತ್ವರಿತ ಸೆಟ್ಟಿಂಗ್‌ಗಳು ಹೀಗೆ ವೈಶಿಷ್ಟ್ಯಪೂರ್ಣವಾಗಿದೆ.

ಕ್ಸಯೋಮಿ Mi4 ವೈಶಿಷ್ಟ್ಯಗಳು

ಕ್ಸಯೋಮಿ Mi4 ವೈಶಿಷ್ಟ್ಯಗಳು

#3

ಗ್ಲೋಬಲ್ 4G LTE ಬೆಂಬಲ
ನೀವೆಲ್ಲಿದ್ದರೂ ನಿಮಗೆ ಆಕರ್ಷಕವಾದ ಸಂಪರ್ಕವನ್ನು ಈ ಫೋನ್ ನೀಡಲಿದೆ. ಇದು ಅತ್ಯಂತ ವೇಗವಾಗಿದ್ದು ಇದರ ಸಂಪರ್ಕ ವೈಶಿಷ್ಟ್ಯಗಳು ಅಷ್ಟೇ ಆಕರ್ಷಕವಾಗಿದೆ.

ಕ್ಸಯೋಮಿ Mi4 ವೈಶಿಷ್ಟ್ಯಗಳು

ಕ್ಸಯೋಮಿ Mi4 ವೈಶಿಷ್ಟ್ಯಗಳು

#4

EMMC 5.0 ಗೆ ಬೆಂಬಲ
ಹೊಸ ಪ್ರಮಾಣಿತ 5.0 ಬಳಸಿಕೊಂಡು ಕಣ್ಮುಚ್ಚಿ ತೆರೆಯುವುದರೊಳಗೆ ನಮ್ಮ 32 ಜಿಬಿ ಇಂಟರ್ನಲ್ ಫ್ಲ್ಯಾಲ್ ಮೆಮೊರಿಯಲ್ಲಿ ನಿಮಗೆ ಪ್ರವೇಶಿಸಬಹುದಾಗಿದೆ.

ಕ್ಸಯೋಮಿ Mi4 ವೈಶಿಷ್ಟ್ಯಗಳು

ಕ್ಸಯೋಮಿ Mi4 ವೈಶಿಷ್ಟ್ಯಗಳು

#5

ಸೋನಿ ನಿರ್ಮಿತ ರಿಯರ್ ಕ್ಯಾಮೆರಾ
Mi4 ಸೋನಿಯ ರಿಯರ್ ಕ್ಯಾಮೆರಾ 16 ಮೆಗಾಪಿಕ್ಸೆಲ್‌ ಜೊತೆ ಬಂದಿದೆ. ಇದು ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್, ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about that Xiaomi Mi4 Smartphone Set for July 22 Launch and its top 5 features.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot