'ಶಿಯೋಮಿ ಮಿ8' ಸ್ಮಾರ್ಟ್‌ಫೋನ್ ಬಿಡುಗಡೆ...ಇದು ಶಿಯೋಮಿ 'ಐಫೋನ್ ಎಕ್ಸ್'!!

|

ವಿಶ್ವ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಶಿಯೋಮಿ ಕಂಪೆನಿಯ 8ನೇ ವಾರ್ಷಿಕ ಸಮಾರಂಭದಲ್ಲಿ ಶಿಯೋಮಿಯ ಫ್ಲಾಶ್‌ಶಿಪ್ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗಿದೆ. ವಿಶ್ವದ ಕುತೋಹಲ ಮೂಡಿಸಿದ್ದ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಪ್ರೀಮಿಯಮ್ ಫೀಚರ್ಸ್ ಹೊತ್ತು ಚೀನಾ ಮೊಬೈಲ್ ಮಾರುಕಟ್ಟೆಗೆ ಇಂದು ಭರ್ಜರಿಯಾಗಿ ಎಂಟ್ರಿ ನೀಡಿದೆ.

'ಆಪಲ್ ಐಫೋನ್ ಎಕ್ಸ್' ನಾಚ್ ಡಿಸ್‌ಪ್ಲೇ ವಿನ್ಯಾಸದಲ್ಲಿ ಬಿಡುಗಡೆಯಾದ ಮೊದಲ ಶಿಯೋಮಿ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಶಿಯೋಮಿ ಕಂಪೆನಿ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಅನ್ನು ಹೊರತಂದಿದೆ.

'ಶಿಯೋಮಿ ಮಿ8' ಸ್ಮಾರ್ಟ್‌ಫೋನ್ ಬಿಡುಗಡೆ...ಇದು ಶಿಯೋಮಿ 'ಐಫೋನ್ ಎಕ್ಸ್'!!

ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್, 12 ಮೆಗಾಫಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನಂತಹ ಫೀಚರ್ಸ್ ಹೊತ್ತು 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಹಾಗಾದರೆ, ಶಿಯೋಮಿ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ?, ಬೆಲೆ ಎಷ್ಟು?,ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

ಶಿಯೋಮಿ ಮಿ8 ಡಿಸ್‌ಪ್ಲೇ ಮತ್ತು ವಿನ್ಯಾಸ!

18.7:9 ಆಕಾರ ಅನುಪಾತದ 6.21-ಇಂಚಿನ ಫುಲ್ ಹೆಚ್‌ಡಿ ಪ್ಲಸ್ (1080x2248 ಪಿಕ್ಸೆಲ್ಸ್) ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ಸ್ಯಾಮ್ಸಂಗ್ AMOLED ಡಿಸ್‌ಪ್ಲೇಯನ್ನು 'ಶಿಯೋಮಿ ಮಿ8' ಫೋನಿನಲ್ಲಿ ತರಲಾಗಿದೆ. ಶೇ. 88.5 ಪ್ರತಿಶತ ಸ್ಕ್ರೀನ್ ಸ್ಮಾರ್ಟ್‌ಫೋನ್ ಬೆಜೆಲ್‌ಲೆಸ್ ಆಗುವಲ್ಲಿ ಸಹಾಯಕವಾಗಿದೆ. 'ಐಫೋನ್ ಎಕ್ಸ್' ನಾಚ್ ವಿನ್ಯಾಸದ ಡಿಸ್‌ಪ್ಲೇ ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ವಿನ್ಯಾಸವನ್ನು ಫೋನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್ ಹೊಂದಿದೆ. ಅಂಟುಂಟು ಬೆಂಚ್ ಮಾರ್ಕ್‌ನಲ್ಲಿ 301,472 ಅಂಕ ಗಳಿಸಿದೆ. 6GB ಮತ್ತು 8GB LPDDR4X RAM ನೊಂದಿಗೆ 'ಶಿಯೋಮಿ ಮಿ8' ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದ್ದು, 8GB RAM ಎಕ್ಸ್‌ಪ್ಲೋರರ್ ಆವೃತ್ತಿಯಲ್ಲಿ ಮಾತ್ರ ಒಳಗೊಂಡಿದೆ. 6GB ಮತ್ತು 128GB ಹಾಗೂ 8GB ಮತ್ತು 256GBಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್!

ಡ್ಯುಯಲ್ ಕ್ಯಾಮೆರಾ ಸೆಟಪ್!

12 ಮೆಗಾಪಿಕ್ಸೆಲ್ಸ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಲಾಗಿದೆ. ಈ ಬಾರಿ ಸೆಲ್ಫೀ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ 1.8 ಮೈಕ್ರಾನ್ ಪಿಕ್ಸೆಲ್, 2.0 ಅಪಾರ್ಚರ್ ಹೊಂದಿರುವ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, ಎಐ ಭಾವಚಿತ್ರಗಳು, ಎಐ ದೃಶ್ಯ ಪತ್ತೆ ತಂತ್ರಜ್ಞಾನವನ್ನು ಹೊಂರುವ ಸ್ಮಾರ್ಟ್‌ಫೋನಿನ DxOMark ಫೋಟೋ ಸ್ಕೋರ್ 105 ಎಂದು ಶಿಯೋಮಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಶಿಯೋಮಿ ಮಿ8' ಸ್ಮಾರ್ಟ್‌ಪೋನಿನಲ್ಲಿ 3400mAh ಬ್ಯಾಟರಿಯನ್ನು ನೀಡಲಾಗಿದೆ. ಫಾಸ್ಟ್ ಚಾರ್ಜಿಂಗ್, ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್, 4 ಜಿ ವೋಲ್ಟ್, ಬ್ಲೂಟೂತ್ 5.0, ಎನ್ಎಫ್‌ಸಿ, ಡ್ಯುಯಲ್ ಫ್ರಿಕ್ವೆನ್ಸಿ ಜಿಪಿಎಸ್, ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್, ಮತ್ತು ಟೈಪ್-ಸಿ ಯುಎಸ್‌ಬಿಯಂತಹ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‌ಫೋನ್ ಅನ್ನು ಅಲಂಕರಿಸಿವೆ. ಆಪಲ್ ಐಫೋನ್ ಎಕ್ಸ್‌ನಲ್ಲಿ ತಂದಿರುವ ಗುಣಮಟ್ಟದ ಇನ್‌ಫ್ರಾರೆಡ್ ಫೇಸ್‌ಲಾಕ್‌ ಫೀಚರ್ ತಂದಿರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಯಾಗಿದೆ.

How to Sharing a Mobile Data Connection with Your PC (KANNADA)
ಶಿಯೋಮಿ ಮಿ8 ಬೆಲೆ ಮತ್ತು ಲಭ್ಯತೆ

ಶಿಯೋಮಿ ಮಿ8 ಬೆಲೆ ಮತ್ತು ಲಭ್ಯತೆ

ವೈಟ್, ಗೋಲ್ಡ್, ಲೈಟ್ ಬ್ಲೂ ಮತ್ತು ಬ್ಲಾಕ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಿರುವ ಶಿಯೋಮಿ ಮಿ8 6ಜಿಬಿ RAM / 128 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯನ್ನು 2,999 ಸಿಎನ್‌ವೈಗಳಿಗೆ (ಸುಮಾರು 31,600 ರೂ.) ಶಿಯೋಮಿ ಕಂಪೆನಿ ನಿಗದಿಪಡಿಸಿದೆ. ಇನ್ನು 6ಜಿಬಿ RAM / 64 ಜಿಬಿ ಶೇಖರಣಾ ವೆರಿಯಂಟ್ ಸ್ಮಾರ್ಟ್‌ಫೋನ್ 2,699 ಸಿಎನ್‌ವೈ (ಸರಿಸುಮಾರು ರೂ. 28,600)ಗಳಾಗಿದ್ದರೆ, 8GB RAM ಎಕ್ಸ್‌ಪ್ಲೋರರ್ ಆವೃತ್ತಿ ಬೆಲೆ ಈವರೆಗೂ ಹೊರಬಿದ್ದಿಲ್ಲ. ಚೀನಾದಲ್ಲಿ ಜೂನ್ 4 ರಿಂದ ಸ್ಮಾರ್ಟ್‌ಫೋನ್ ಮಾರಟಕ್ಕೆ ಬರುತ್ತಿದೆ.

Best Mobiles in India

English summary
Xiaomi Mi8 With Infrared Face Unlock, 20-Megapixel Selfie Camera Launched: Price, Specifications, Features . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X