5,000 mAh ಬ್ಯಾಟರಿ ಹೊತ್ತು ಶೀಘ್ರದಲ್ಲೇ ಬರಲಿದೆ ಶಿಯೋಮಿ 'ರೆಡ್‌ಮಿ 8'!

|

ಭಾರತದಲ್ಲಿ ಶಿಯೋಮಿಯ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಬಗ್ಗೆ ಶಿಯೋಮಿ ಇಂಡಿಯಾ ಮುಖ್ಯಸ್ಥ ಮನುಕುಮಾರ್ ಜೈನ್ ಅವರು ಖಚಿತ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ನೆನ್ನೆಯಷ್ಟೇ ರೆಡ್‌ಮಿ 8ಎ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ ನಂತರ, ಶಿಯೋಮಿ ಮತ್ತೊಂದು ನೂತನ 'ರೆಡ್‌ಮಿ 8' ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ ಮತ್ತು ಆನ್‌ಲೈನ್ ಈವೆಂಟ್‌ನಲ್ಲಿ ಕಂಪನಿಯು ರೆಡ್‌ಮಿ 8 ಬಿಡುಗಡೆಯನ್ನು ಈಗಾಗಲೇ ಖಚಿತಪಡಿಸಿದೆ.

ರೆಡ್‌ಮಿ 8ಎ

ಹೌದು, ರೆಡ್‌ಮಿ 8ಎ ಈವೆಂಟ್‌ನ ಕೊನೆಯಲ್ಲಿ ಮನುಕುಮಾರ್ ಜೈನ್ ಅವರು 'ರೆಡ್‌ಮಿ 8' ಬಗ್ಗೆ ಏನು, ನಾವು ಇದನ್ನು ಇಂದು ಬಿಡುಗಡೆ ಮಾಡಬೇಕಾಗಿಲ್ಲವೇ? ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕಂಪೆನಿಯ ಅಧಿಕಾರಿಯೋರ್ವರು "ಇಂದು ಅಲ್ಲ, ಅದು ಮುಂದಿನ ಉಡಾವಣೆಗೆ" ಎಂದು ಉತ್ತರಿಸಿದರು. ಆದ್ದರಿಂದ, ಕಂಪನಿಯು ಶೀಘ್ರದಲ್ಲೇ ರೆಡ್‌ಮಿ 8 ಅನ್ನು ಬಿಡುಗಡೆ ಮಾಡಲಿದೆ ಎಂಬುದು ಖಚಿತವಾಗಿದೆ. ಆದರೆ, ಉಡಾವಣೆಯ ಕಂಪನಿಯು ಈ ವರೆಗೂ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿಲ್ಲ.

 6.26-ಇಂಚಿನ ಎಚ್ಡಿ + ಡಿಸ್ಪ್

ಮತ್ತೊಂದೆಡೆ, ರೆಡ್‌ಮಿ 8 ಸ್ಮಾರ್ಟ್‌ಫೋನ್‌ನ ವಿವರಣೆಯನ್ನು ಈಗಾಗಲೇ TENAA ನಲ್ಲಿ ಪಟ್ಟಿ ಮಾಡಲಾಗಿದ್ದು, ಮಾದರಿ ಸಂಖ್ಯೆ M1908C3ICಯಲ್ಲಿ ನೀವು ರೆಡ್‌ಮಿ 8 ಸ್ಮಾರ್ಟ್‌ಫೋನಿನ ಬಗೆಗೆ ಹಲವು ಮಾಹಿತಿಗಳನ್ನು ಪಡೆಯಬಹುದಾಗಿದೆ. ಪಟ್ಟಿಯ ಪ್ರಕಾರ, ಸ್ಮಾರ್ಟ್ಫೋನ್ 1520 × 720 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿರುವ 6.26-ಇಂಚಿನ ಎಚ್ಡಿ + ಡಿಸ್ಪ್ಲೇಯನ್ನು ಹೊಂದುವ ಸಾಧ್ಯತೆಯಿದೆ. ಸಾಧನವು 5,000 mAh ಬ್ಯಾಟರಿಯೊಂದಿಗೆ 10W ಚಾರ್ಜರ್‌ನೊಂದಿಗೆ ಬರಲಿದೆ.

ಸ್ನಾಪ್‌ಡ್ರಾಗನ್ 439 ಚಿಪ್‌ಸೆಟ್‌

ಇದಲ್ಲದೆ, ರೆಡ್‌ಮಿ 8 ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 439 ಚಿಪ್‌ಸೆಟ್‌ ಅಳವಡಿಸಲಾಗಿದ್ದು, 2 ಜಿಬಿ / 3 ಜಿಬಿ / 4 ಜಿಬಿ RAM ಮತ್ತು 16 ಜಿಬಿ / 32 ಜಿಬಿ / 64 ಜಿಬಿ ಸಂಗ್ರಹ ಸಾಮರ್ಥ್ಯಗಳಲ್ಲಿ ಸ್ನಾಪ್‌ಡ್ರಾಗನ್ 439 ಚಿಪ್‌ಸೆಟ್‌ ಜೋಡಿಯಾಗಿರುತ್ತದೆ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512 ಜಿಬಿ ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಿರುವುದು ವಿಶೇಷ ಎಂದು ಹೇಳಬಹುದು. ಇದಲ್ಲದೆ, ರೆಡ್‌ಮಿ 8 ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿರುವುದು ಖಚಿತವಾಗಿದೆ.

8 ಎಂಪಿ ಕ್ಯಾಮೆರಾ

ಇನ್ನು ಕ್ಯಾಮೆರಾ ವಿಭಾಗದಲ್ಲಿ ನೋಡುವುದಾದರೆ, ರೆಡ್‌ಮಿ 812 ಎಂಪಿ ಮತ್ತು 8 ಎಂಪಿ ಸೆನ್ಸಾರ್ ಜೊತೆಗೆ ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಶ್ ಅನ್ನು ಹೊಂದಿರುತ್ತದೆ. ಸೆಲ್ಫಿಗಳಿಗಾಗಿ ಇದು 8 ಎಂಪಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯಿದೆ. ಆಂಡ್ರಾಯ್ಡ್ 9.0 ಪೈನಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ ಎಂದು ಸೋರಿಕೆಯು ಬಹಿರಂಗಪಡಿಸುತ್ತದೆ. ಕನೆಕ್ಟಿವಿಟಿ ಮುಂಭಾಗದಲ್ಲಿ, ಇದು ಡ್ಯುಯಲ್ ಸಿಮ್, ವೋಲ್ಟಿಇ, ಬ್ಲೂಟೂತ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ಅನ್ನು ಹೊಂದಿರುತ್ತದೆ.

Best Mobiles in India

English summary
Manu Jain asks at the end of the event that "What about the Redmi 8, weren't we supposed to launch it today?" then, someone replied. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X