Subscribe to Gizbot

ಮಾರುಕಟ್ಟೆಯಲ್ಲಿ ಇನ್ನು ಕ್ಸಯೋಮಿ ಫೋನ್‌ಗಳ ಕಾರುಬಾರು

Written By:

ಈಗ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸುದ್ದಿಯೆಂದರೆ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕ್ಸಯೋಮಿ ಇದನ್ನು 'ಚೀನಾದ ಆಪಲ್' ಎಂದೂ ಕೂಡ ಕರೆಯಲಾಗುತ್ತದೆ. ಕಂಪೆನಿಯ ಪ್ರಪ್ರಥಮ ಸ್ಮಾರ್ಟ್‌ಫೋನ್ ಆಗಿರುವ ಭಾರತದ ಅಧಿಕೃತ ವೆಬ್‌ಸೈಟ್‌ನಲ್ಲಿ ವಾವ್ ಎಂಬ ಉದ್ಗಾರದೊಂದಿಗೆ ಬಂದಿರುವ ಫೋನ್ ಇದಾಗಿದೆ ಎಂದೂ ಕೂಡ ಹೇಳಬಹುದು.

ನಾವಿಲ್ಲಿ ಮಾತನಾಡುತ್ತಿರುವುದು Mi3 ಸ್ಮಾರ್ಟ್‌ಫೋನ್ ಕುರಿತಾಗಿದೆ. ಈ ಡಿವೈಸ್ ರೂ 15,000ದಲ್ಲಿ ಬರುತ್ತಿದ್ದು ಇದು ಅತ್ಯಾಕರ್ಷಕವಾಗಿದೆ ಮಾತ್ರವಲ್ಲ ಇದರ ವೈಶಿಷ್ಟ್ಯಗಳು ಮನಮುಟ್ಟುವಂತಿವೆ.

ಕ್ಸಯೋಮಿ Mi3 ಸ್ಮಾರ್ಟ್‌ಫೋನ್ ಮಾಡುವುದೇ ಧಮಾಲ್?

ಅದಾಗ್ಯೂ, ಕ್ಸಯೋಮಿ ಲಾಂಚ್ ಮಾಡುತ್ತಿರುವ ಫೋನ್ ಇದೊಂದೇ ಮಾತ್ರವಲ್ಲದೇ ಇನ್ನೂ ಬಹಳಷ್ಟು ಫೋನ್‌ಗಳನ್ನು ಕಂಪೆನಿ ಲಾಂಚ್ ಮಾಡುವ ನಿರೀಕ್ಷೆಯಲ್ಲಿದೆ. ಫೋನ್‌ನ ಕುರಿತಾದ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಭಾರತದಲ್ಲಿ ಇನ್ನೂ ಬಿತ್ತರವಾಗಬೇಕಾಗಿದ್ದು, ಕ್ಸಯೋಮಿ ರೆಡ್ಮೀ ಶ್ರೇಣಿಯ ಫೋನ್‌ಗಳನ್ನು ಕೂಡ ಲಾಂಚ್ ಮಾಡುವ ನಿಟ್ಟಿನಲ್ಲಿದೆ. ರೆಡ್ಮೀ ನೋಟ್ ಮತ್ತು ರೆಡ್ಮೀ 1S ಅನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿದೆ. ಭಾರತದಲ್ಲಿ ಈ ಡಿವೈಸ್‌ಗಳು ಲಾಂಚ್ ಆದ ಒಡನೆ ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಲಾವಾಗೆ ಹೆಚ್ಚಿನ ಪೈಪೋಟಿ ಎದುರಾಗಲಿದೆ.

ಈ ಡಿವೈಸ್‌ಗಳ ಲಭ್ಯತೆಗೆ ಜುಲೈ 15 ರವೆರೆಗೆ ನೀವು ನಿರೀಕ್ಷಿಸುವುದು ಅಗತ್ಯವಾಗಿದೆ.

Read more about:
English summary
This article tells that Xiaomi might launch redmi series in India on july 15
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot