ಶಿಯೋಮಿ MIUI 10 ಭಾರತಕ್ಕೆ ಬಂತು...ಹೊಸ ಅಪ್ ಡೇಟ್ ಗೆ ಸಿದ್ಧರಾಗಿ..!

|

ಚೀನಾದಲ್ಲಿ ಬಿಡುಗಡೆಯ ವಿಚಾರ ಪ್ರಸ್ತಾಪವಾದ ಕೆಲವೇ ದಿನದಲ್ಲೇ ಶಿಯೋಮಿ MIUI 10 ಗ್ಲೋಬಲ್ ROM ನ (ಬೇಟಾ ವರ್ಷನ್)ನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ವಿಚಾರವನ್ನು ತಿಳಿಸಿದೆ. ಅರ್ಹತೆ ಇರುವ ಶಿಯೋಮಿ ಡಿಸೈವ್ ಗಳಿಗೆ MIUI 10 ಗ್ಲೋಬಲ್ ROM ಬಿಡುಗಡೆಯಾಗಿದ್ದು, ಅದರ ಬೇಟಾ ವರ್ಷನ್ ಭಾರತೀಯರಿಗೆ ಲಭ್ಯವಾಗಲಿದೆ. ಕಳೆದ ವರ್ಷ MIUI 9 ಫಾಸ್ಟ್ ಆಪ್ ಗಳನ್ನು ನಿರ್ವಹಿಸುವ ತಾಕತ್ತಿನ ಬಗ್ಗೆ ಚಿಂತನೆ ನಡೆಯಲಾಗಿತ್ತು ಮತ್ತು ಆ ನಿಟ್ಟಿನಲ್ಲಿ MIUI 10 ಕಾರ್ಯಪ್ರವೃತ್ತವಾಗಲಿದೆ.

MIUI 10 ನಲ್ಲಿ ಶಿಯೋಮಿ ಆಂಡ್ರಾಯ್ಡ್ ಬೇಸ್ಟ್ MIUI ಫೋನ್ ಗಳಿಗೆ ಎಐ ಸ್ಮಾರ್ಟ್ ಸೇರಿದಂತೆ ಹಲವು ಮೆಶಿನ್ ಲರ್ನಿಂಗ್ ಗಳಿದ್ದು, ಹೊಸ ಲುಕ್ ನೀಡಲಿದೆ. ಕಂಪೆನಿಯ ಭಾರತೀಯರಿಗೆ ಅನುಕೂಲವಾಗುವಂತ ಕೆಲವು ವೈಶಿಷ್ಟ್ಯಗಳಿಗಾಗಿ ಭಾರತೀಯ ಮೂಲದವರ ಜೊತೆ ಕೆಲಸ ಮಾಡಿದ್ದು ಆ ನಿಟ್ಟಿನಲ್ಲಿ ಅದನ್ನು MIUI 10 ನಲ್ಲಿ ಅಳವಡಿಸಲಾಗಿದೆಯಂತೆ.

ಶಿಯೋಮಿ MIUI 10 ಭಾರತಕ್ಕೆ ಬಂತು...ಹೊಸ ಅಪ್ ಡೇಟ್ ಗೆ ಸಿದ್ಧರಾಗಿ..!

MIUI 10 ಹೆಚ್ಚು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಗಮನ ಕೇಂದ್ರೀಕರಿಸಿದ್ದು ಆಂಡ್ರಾಯ್ಡ್ ಓರಿಯೋ ಬೇಸ್ಡ್ ಆಗಿದೆ( ಶಿಯೋಮಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಲ್ಲ). ಪ್ರಮುಖವಾಗಿ MIUI ಬೇಸ್ಡ್ ಶಿಯೋಮಿ ಪೋನ್ ಗಳಲ್ಲಿ ಕಾಣಬಹುದಾದ ಇನ್ ಹೌಸ್ ಕ್ಯಾಮರಾ ಸಾಫ್ಟ್ ವೇರ್ ಗಳ ಬಗ್ಗೆ ಹೆಚ್ಚು ಗಮನ ನೀಡಲಾಗಿದೆ. ಮುಂಭಾಗದ ಮತ್ತು ಹಿಂಭಾಗದ ಎರಡೂ ಕ್ಯಾಮರಾಗಳಲ್ಲಿ MIUI 10 ನಿಮಗೆ, AI ಪೊಟ್ರೇಟ್ ಜೊತೆಗೆ ಕಂಗೊಳಿಸುವಂತ ಬೊಕೆಷ್ ಎಫೆಕ್ಟ್ ನ ಫೋಟೋಗಳಿಗೆ ಅವಕಾಶ ನೀಡಲಿದೆ ಎಂದು ಶಿಯೋಮಿ ತಿಳಿಸಿದೆ.

ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!

ಶಿಯೋಮಿ ತಿಳಿಸಿರುವಂತೆ, ಡೀಪ್ ಲರ್ನಿಂಗ್ ಅಲ್ಗೋರಿತ್ತಮ್ ಸಹಾಯದಿಂದ MIUI 10, ಡುಯಲ್ ಕ್ಯಾಮರಾ ಬದಲಿಗೆ ಸಿಂಗಲ್ ಕ್ಯಾಮರಾ ಸಹಾಯದಿಂದ ಬೊಕೆಷ್ ಶಾಟ್ ತೆಗೆಯಲು ಸಹಾಯ ಮಾಡುತ್ತೆ. ಮುಂಭಾಗದ ಮತ್ತು ಹಿಂಭಾಗದ ಕ್ಯಾಮರಾಗಳಿಗೆ ಒಂದೇ ಲೆನ್ಸ್ ಸಹಾಯದಿಂದ ಪೊಟ್ರೈಟ್ ಮೋಡ್ ನಂತಹ ಅನುಭವ ನೀಡಲು ಕಂಪೆನಿ ಪ್ರಯತ್ನಿಸುತ್ತಿದೆಯಂತೆ.ಈ ಎಲ್ಲಾ ವೈಶಿಷ್ಟ್ಯತೆಗಳು ಮುಂಭಾಗದ ಕ್ಯಾಮರಾಕ್ಕೆ ಮೊದಲು ಬಿಡುಗಡೆಗೊಳ್ಳಲಿದ್ದು, ನಂತರದ ದಿನಗಳಲ್ಲಿ ಹಿಂಭಾಗದ ಕ್ಯಾಮರಾಕ್ಕೆ ಅಳವಡಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. MIUI 10 , MIUI 9 ಗಿಂತ ಶೇಕಡಾ 10 ರಷ್ಟು ವೇಗವಾಗಿರಲಿದೆಯೆಂದು ಶಿಯೋಮಿ ತಿಳಿಸಿದೆ. ಈ ಅಪ್ ಡೇಟ್ ಮುಖಾಂತರ ಶಿಯೋಮಿ ಹಲವು ಗೆಶ್ಚರ್ ಕಂಟ್ರೋಲ್ ಗಳನ್ನು ನೀಡಲಿದೆ.

ಶಿಯೋಮಿ MIUI 10 ಭಾರತಕ್ಕೆ ಬಂತು...ಹೊಸ ಅಪ್ ಡೇಟ್ ಗೆ ಸಿದ್ಧರಾಗಿ..!

ಈ ಹೊಸ ಅಪ್ ಡೇಟ್ ಕೇವಲ ಇನ್-ಹೌಸ್ ಲುಕ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಲಾಕ್ ಸ್ಕ್ರೀನ್ ಮತ್ತು ನೋಟಿಫಿಕೇಷನ್ ಇತ್ಯಾದಿಗಳಿಗೂ ಕೂಡ ಹಲವು ಬದಲಾವಣೆಗಳನ್ನು ತರಲಿದೆಯಂತೆ. MIUI ಅಪ್ ಡೇಟ್ ಆಗುವ ಮುಖಾಂತರ ಶಿಯೋಮಿಗೆ ಹೊಸ ಸೌಂಡ್ ಬರಲಿದೆ. ನೋಟಿಫಿಕೇಷನ್ ಗಳಲ್ಲಿ ಪ್ರಕೃತಿಗೆ ಹತ್ತಿರವಾಗಿರುವಂತಹ ಶಬ್ದ ಕೇಳಿಸಲಿದೆಯಂತೆ ಮತ್ತು ಎರಡು ನೋಟಿಫಿಕೇಷನ್ ಗಲು ಒಂದೇ ಶಬ್ದದಲ್ಲಿ ಕೇಳುವುದಿಲ್ಲವಂತೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?

ಇದರ ಟೈಮರ್ ಆಪ್ ಗಳಿಗೂ ಕೂಡ ಹೊಸ ರೀತಿಯ ಶಬ್ದಗಳು ಅಂದರೆ ಪ್ರಕೃತಿಗೆ ಹತ್ತಿರವಾಗುವಂತ ಶಬ್ದಗಳ ಅಳವಡಿಕೆಯನ್ನು ಮಾಡಲಾಗಿದೆಯಂತೆ.
ಭಾರತೀಯರಿಗೆ ಅನ್ವಯಿಸುವ ವೈಶಿಷ್ಟ್ಯತೆಗಳನ್ನು ಅಳವಡಿಸುತ್ತಿರುವ MIUI 10 ನಲ್ಲಿ ಬ್ರೌಸರ್ ಆಪ್ ನಲ್ಲಿ ಹಲವು ಪ್ರೊಗ್ರೆಸ್ಸಿವ್ ಆಪ್ ಶಾರ್ಟ್ ಕಟ್ ಗಳಿರಲಿವೆ. ಹೊಸ ಮೆಸೇಜ್ ಆಪ್, ಪೇಟಿಮ್ QR ಕೋಡ್ ಸ್ಕ್ಯಾನಿಂಗ್ ಶಾರ್ಟ್ ಕಟ್ ಗಳು ಕ್ಯಾಮರಾ ಆಪ್ ನ ಪಕ್ಕದಲ್ಲೇ ಬಿಲ್ಡ್ ಮಾಡಲಿದೆಯಂತೆ.

ಶಿಯೋಮಿ MIUI 10 ಭಾರತಕ್ಕೆ ಬಂತು...ಹೊಸ ಅಪ್ ಡೇಟ್ ಗೆ ಸಿದ್ಧರಾಗಿ..!

ಯಾವೆಲ್ಲ ಶಿಯೋಮಿ ಡಿವೈಸ್ ಗಳು ಭಾರತದಲ್ಲಿ MIUI 10 ಗೆ ಯೋಗ್ಯವಾಗಿದೆ ಅದರ ಪಟ್ಟಿ ಇಲ್ಲಿದೆ ನೋಡಿ..
Mi Mix 2, Mi 5, Mi 4, Mi 3, Mi Max 2, Mi Max, ರೆಡ್ಮಿ Note 5, ರೆಡ್ಮಿ ನೋಟ್ 5 ಪ್ರೋ, ರೆಡ್ಮಿ ನೋಟ್ 4, ರೆಡ್ಮಿ ನೋಟ್ 3, ರೆಡ್ಮಿ 5, ರೆಡ್ಮಿ 5A, ರೆಡ್ಮಿ 4, ರೆಡ್ಮಿ 4A, ರೆಡ್ಮಿ 3S, ರೆಡ್ಮಿ Y2, ರೆಡ್ಮಿ Y1, ರೆಡ್ಮಿ Y1ಲೈಟ್.

Best Mobiles in India

English summary
Xiaomi MIUI 10 global ROM announced in India, beta version set to roll out in mid-June. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X