Xiaomi Mix Flip 2: ಅತ್ಯದ್ಭುತ ವೈಶಿಷ್ಟ್ಯಗಳೊಂದಿಗೆ ಫ್ಲಿಪ್ ಫೋನ್ ಬಿಡುಗಡೆ!
ಶಿಯೋಮಿ ತನ್ನ ಇತ್ತೀಚಿನ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್ Xiaomi Mix Flip 2 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಬಾಳಿಕೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಒಳಗೊಂಡಂತೆ, ಹಲವಾರು ಅಪ್‌ಗ್ರೇಡ್‌ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. Mix Flip 2 5,165mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು ಹಿಂದಿನ Xiaomi Mix Flip ನ 4,780mAh ಬ್ಯಾಟರಿಯ ಹೋಲಿಸಿದರೆ ಉತ್ತಮವಾಗಿದೆ. ಈ ಹೊಸ ಫೋಲ್ಡಬಲ್ ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ವಿವರಗಳು ಕೆಳಕಂಡಂತಿವೆ.
Xiaomi Mix Flip 2: ಸಂಪೂರ್ಣ ವೈಶಿಷ್ಟ್ಯಗಳು,
ಹೊಸ Xiaomi Mix Flip 2 ಫೋನ್ ಇದು 4.01-ಇಂಚಿನ AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಈ ಹೊರಗಿನ ಡಿಸ್ಪ್ಲೇ 120Hz ರಿಫ್ರೆಶ್ ದರ, 120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1.5K ರೆಸಲ್ಯೂಶನ್‌ನೊಂದಿಗೆ 3,200 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಇದನ್ನು ಶಿಯೋಮಿಯ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 2.0 ರಕ್ಷಣೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಫೋನ್‌ನ ಒಳಭಾಗದಲ್ಲಿ, 6.86-ಇಂಚಿನ AMOLED ಮುಖ್ಯ ಡಿಸ್ಪ್ಲೇ ಇದ್ದು, ಇದು 1.5K ರೆಸಲ್ಯೂಶನ್, 3,200 ನಿಟ್ಸ್ ಗರಿಷ್ಠ ಹೊಳಪು, 300Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ.
ಕಾರ್ಯಕ್ಷಮತೆಗಾಗಿ, Xiaomi Mix Flip 2 ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 16GB RAM ಮತ್ತು 1TB ವರೆಗಿನ ಆಂತರಿಕ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಉಷ್ಣ ನಿರ್ವಹಣೆಗಾಗಿ, ಡ್ಯುಯಲ್ ವೇಪರ್ ಚೇಂಬರ್ ತ್ರಿ-ಆಯಾಮದ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದು ಹೆಚ್ಚಿನ ಬಳಕೆಯ ಸಮಯದಲ್ಲಿಯೂ ಕಾರ್ಯಕ್ಷಮತೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಶಿಯೋಮಿಯ ಹೈಪರ್‌ಓಎಸ್ 2 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, Xiaomi Mix Flip 2 ಲೈಕಾ-ಬ್ರಾಂಡೆಡ್ ಡ್ಯುಯಲ್ ಔಟ್‌ವರ್ಡ್-ಫೇಸಿಂಗ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಲೈಟ್ ಹಂಟರ್ 800 ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಇದು ಲೈಕಾ ಸಮ್ಮಿಲಕ್ಸ್ ಲೆನ್ಸ್ ಆಗಿದ್ದು, 24mm ಫೋಕಲ್ ಲೆಂತ್ ನೀಡುತ್ತದೆ. ಇದರ ಜೊತೆಗೆ, 14mm ಫೋಕಲ್ ಲೆಂತ್ ಮತ್ತು ಆಟೋಫೋಕಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಇದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಒಳಗಿನ ಡಿಸ್ಪ್ಲೇಯಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಹೊಸ Mix Flip 2 ಫೋನ್ 5,165mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಹಿಂದಿನ Xiaomi Mix Flip ನ 4,780mAh ಬ್ಯಾಟರಿಗಿಂತ ಗಮನಾರ್ಹ ಸುಧಾರಣೆಯಾಗಿದೆ. ಇದು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.ಸಂಪರ್ಕ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್ 5.4, NavIC, NFC, GPS, ಗೆಲಿಲಿಯೋ, GLONASS, Beidou ಮತ್ತು USB ಟೈಪ್-C ಪೋರ್ಟ್ ಸೇರಿವೆ. ಜೊತೆಗೆ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟೀರಿಯೊ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ.

Xiaomi Mix Flip 2 ಫೋನ್ ಸೆನ್ಸರ್‌ಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ದೂರ ಸೆನ್ಸರ್, ಇ-ದಿಕ್ಸೂಚಿ, ಫ್ಲಿಕರ್ ಸೆನ್ಸರ್, ಹಾಲ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಲೀನಿಯರ್ ಮೋಟಾರ್, IR ಕಂಟ್ರೋಲ್ ಮತ್ತು X-ಆಕ್ಸಿಸ್ ಲೀನಿಯರ್ ಮೋಟಾರ್ ಸೇರಿವೆ. ಇನ್ನು ಈ ಫೋನನ್ನು ತೆರೆದಾಗ 166.89x73.8x7.57mm ಮತ್ತು ಮಡಿಸಿದಾಗ 86.13x73.8x15.87mm ಅಳತೆಗಳನ್ನು ಹೊಂದಿರುವ ಈ ಕ್ಲಾಮ್‌ಶೆಲ್ ಫೋಲ್ಡಬಲ್ ಸಾಧನವು ಕೇವಲ 199 ಗ್ರಾಂ ತೂಗುತ್ತದೆ.
Xiaomi Mix Flip 2: ಬೆಲೆ ಮತ್ತು ಲಭ್ಯತೆ,
Xiaomi Mix Flip 2 ನ ಮೂಲ ಮಾದರಿ 12GB RAM ಮತ್ತು 256GB ಸಂಗ್ರಹಣೆಯೊಂದಿಗೆ CNY 5,999 (ಸುಮಾರು ರೂ. 71,500) ಬೆಲೆ ಹೊಂದಿದೆ. 12GB RAM + 512GB ಸಂಗ್ರಹಣೆಯ ಮಾದರಿಯು CNY 6,499 (ಸುಮಾರು ರೂ. 77,000) ಮತ್ತು 16GB RAM + 1TB ಸಂಗ್ರಹಣೆಯ ಟಾಪ್-ಎಂಡ್ ಮಾದರಿಯು CNY 7,299 (ಸುಮಾರು ರೂ. 81,000) ಬೆಲೆಯನ್ನು ಹೊಂದಿದೆ. ಈ ಫೋನ್ ನೆಬ್ಯುಲಾ ಪರ್ಪಲ್, ಲ್ಯಾಟಿಸ್ ಗೋಲ್ಡ್, ಪ್ಲಮ್ ಗ್ರೀನ್ ಮತ್ತು ಶೆಲ್ ವೈಟ್ ಬಣ್ಣಗಳಲ್ಲಿ ಚೀನಾದಲ್ಲಿ ಲಭ್ಯವಿದೆ. ಆದರೆ, ಭಾರತದಲ್ಲಿ ಇದರ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ Xiaomi Mix Flip 2 ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








