Xiaomi; ಸದ್ದಿಲ್ಲದೆ ಹೊಸ ಫ್ಲಿಪ್ ಫೋನ್ ಲಾಂಚ್: ಅಚ್ಚರಿ ಫೀಚರ್ಸ್, ದುಬಾರಿ ಬೆಲೆ!
ಫ್ಲಿಪ್ ಫೋನ್ ಪ್ರಿಯರಿಗೆ ಡಬಲ್ ಗುಡ್ ನ್ಯೂಸ್. ಒಂದೆಡೆ ಇನ್ಫಿನಿಕ್ಸ್‌ನ ತನ್ನ ಮೊದಲ ಫ್ಲಿಪ್ ಮೊಬೈಲ್ ಬಿಡುಗಡೆ ಮಾಡಿದೆ. ಇತ್ತ, ಶಿಯೋಮಿ (Xiaomi) ಕೂಡ ಸದ್ದಿಲ್ಲದೆ ಹೊಸ ಫ್ಲಿಪ್ ಸ್ಮಾರ್ಟ್‌ಫೋನ್ ಅನಾವರಣಗೊಳಿಸಿದೆ. ಹೌದು, ಶಿಯೋಮಿ ಮಿಕ್ಸ್ ಫ್ಲಿಪ್ (Xiaomi MIX Flip) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ಕಂಪನಿಯ ಮೊದಲ ಕ್ಲಾಮ್‌ಶೆಲ್ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಆಗಿದೆ. ಈ ಹೊಸ ಫೋಲ್ಡಬಲ್ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ,
ಶಿಯೋಮಿ ಮಿಕ್ಸ್ ಫ್ಲಿಪ್ ಫೋನನ್ನು ಕಳೆದ ಜುಲೈನಲ್ಲಿ ಚೀನಾದಲ್ಲಿ ಪರಿಚಯಿಸಲಾಗಿತ್ತು. ಇದೀಗ, ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.86 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಮತ್ತು 4 ಇಂಚಿನ ಬಾಹ್ಯ (ಹೊರ) ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನಿನಲ್ಲಿ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಅಳವಡಿಸಲಾಗಿದೆ. 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 4780mAh ಬ್ಯಾಟರಿ, 67W ವೇಗದ ಚಾರ್ಜಿಂಗ್‌ನಂತಹ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.

ಶಿಯೋಮಿ ಮಿಕ್ಸ್ ಫ್ಲಿಪ್ ಫೋನಿನ ಬೆಲೆ ಎಷ್ಟು?
ಶಿಯೋಮಿ ಮಿಕ್ಸ್ ಫ್ಲಿಪ್ ಫೋನನ್ನು ಕೇವಲ 12GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ ಸುಮಾರು 1,21,000 ರೂ. (ಅಂದರೆ 1,299 ಯುರೋ). ಈ ಫೋಲ್ಡಬಲ್ ಫೋನ್ ಯುರೋಪ್‌ನಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ಇತರ ಮಾರುಕಟ್ಟೆಗಳಲ್ಲಿ ಇದರ ಲಭ್ಯತೆಯ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ. ಈ ಫ್ಲಿಪ್ ಫೋನ್ ಕಪ್ಪು ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
ಶಿಯೋಮಿ ಮಿಕ್ಸ್ ಫ್ಲಿಪ್ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಶಿಯೋಮಿ ಮಿಕ್ಸ್ ಫ್ಲಿಪ್ ಫೋನ್ 6.86 ಇಂಚಿನ ಆಂತರಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 2912 x1224, 120Hz ರಿಫ್ರೆಶ್ ದರ, 2160Hz PWM ಮಬ್ಬಾಗಿಸುವಿಕೆ, ಡಿಸಿ ಮಬ್ಬಾಗಿಸುವಿಕೆ, 3000 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್, HDR10 +, ಡಾಲ್ಬಿ ವಿಷನ್ ಬೆಂಬಲದ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರೊಂದಿಗೆ ಯುಟಿಜಿ ಗಾಜಿನ ರಕ್ಷಣೆಯೂ ಲಭ್ಯವಿದೆ.
ಹೊರ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ, ಈ ಫ್ಲಿಪ್ ಫೋನ್ ಹೊರಭಾಗದಲ್ಲಿ 4 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 1392×1280, 120Hz ರಿಫ್ರೆಶ್ ದರ, 2160Hz PWM ಮಬ್ಬಾಗಿಸುವಿಕೆ, ಡಿಸಿ ಮಬ್ಬಾಗಿಸುವಿಕೆ, 3000 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನಸ್, HDR10+, ಡಾಲ್ಬಿ ವಿಷನ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ, ಶಿಯೋಮಿ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ಸಹ ಹೊಂದಿದೆ. ಈ ಫ್ಲಿಪ್ ಆಂಡ್ರಾಯ್ಡ್ 14 ಆಧಾರಿತ HyperOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರೊಸೆಸರ್: ಕಂಪನಿಯು ಶಿಯೋಮಿ ಮಿಕ್ಸ್ ಫ್ಲಿಪ್ ಮೊಬೈಲ್‌ನಲ್ಲಿ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಅನ್ನು ಅಳವಡಿಸಿದೆ. ಇದರೊಂದಿಗೆ ಅಡ್ರಿನೋ 750 GPU ಇರುತ್ತದೆ. ಈ ಫೋಲ್ಡಬಲ್ ಶಿಯೋಮಿ ಫೋನ್ 12GB LPPDDR5X RAM +512GB UFS 4.0 ಆಂತರಿಕ ಸ್ಟೋರೇಜ್ ಅನ್ನು ಹೊಂದಿದೆ.

ಕ್ಯಾಮೆರಾ: ಶಿಯೋಮಿ ಮಿಕ್ಸ್ ಫ್ಲಿಪ್ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಲೈಟ್ ಫ್ಯೂಷನ್ 800 ಕ್ಯಾಮೆರಾ, OIS, LED ಫ್ಲ್ಯಾಷ್ ಮತ್ತು 50 ಮೆಗಾಪಿಕ್ಸೆಲ್ ಓಮ್ನಿವಿಷನ್ OV60A40 9cm 2x ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ OV32B ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಕಂಪನಿಯು ಈ ಫೋನನ್ನು 4780mAh ಸಾಮರ್ಥ್ಯದ ಸಿಲಿಕಾನ್-ಕಾರ್ಬನ್ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯವಿದೆ. ಈ ಫೋನ್ ಮಡಿಸಿದಾಗ 167.5×74.02×16.19 ಎಂಎಂ ಮತ್ತು ತೆರೆದಾಗ (ಬಿಚ್ಚಿದಾಗ) 7.8 ಎಂಎಂ ದಪ್ಪ ಇರುತ್ತದೆ. ಇದಲ್ಲದೆ, 192 ಗ್ರಾಂ ತೂಕ ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಶಿಯೋಮಿ ಮಿಕ್ಸ್ ಫ್ಲಿಪ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಯುಎಸ್‌ಬಿ ಟೈಪ್-ಸಿ ಆಡಿಯೊ, ಹೈ-ರೆಸ್ ಆಡಿಯೋ, ಡ್ಯುಯಲ್ ಸ್ಪೀಕರ್‌ಗಳು, 5G, 4G VoLTE, Wi-Fi 6E, ಬ್ಲೂಟೂತ್ 5.4 ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications







