ಸ್ಯಾಮ್‌ಸಂಗ್‌ ಅನ್ನು ದೇಶದಿಂದ ಕಳುಹಿಸಲಿದೆ ಶಿಯೋಮಿ: ಈ ಪಟ್ಟಿ ನೋಡಿದ್ರೆ ಗೊತ್ತಾಗುತ್ತೆ..?

|

ಇಷ್ಟು ದಿನ ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸಿದ್ದ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ದಿಗ್ಗಜ, ಸೌಥ್ ಕೋರಿಯಾ ಮೂಲದ ಸ್ಯಾಮ್‌ಸಂಗ್​, ದಿನದಿಂದ ದಿನಕ್ಕೆ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ. ಚೀನಾ ಮೂಲದ ಸ್ಮಾರ್ಟ್‌ಪೋನ್ ಕಂಪನಿಗಳು ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸುತ್ತಿದೆ. ಶಿಯೋಮಿ ಮೊದಲ ಸ್ಥಾನವನ್ನು ಅಲಂಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸ್ಯಾಮ್‌ಸಂಗ್‌ ಅನ್ನು ದೇಶದಿಂದ ಕಳುಹಿಸಲಿದೆ ಶಿಯೋಮಿ:

ಈ ಹಿಂದೆಯೇ ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಕಳೆದುಕೊಂಡಿದ್ದು, ಅಂಕಿ ಅಂಶಗಳಿಂದ ತಿಳಿದುಬಂದಿತ್ತು. ಆದರೆ ಈಗ ಎರಡನೇ ವಾರ್ಷಿಕ ತ್ರೈಮಾಸಿಕದ ಅವಧಿಯಲ್ಲಿ ಶಿಯೋಮಿ ಮತ್ತೆ ಸ್ಯಾಮ್ ಸಂಗ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಕ್ಯಾನಲೀಸ್ ಎಂಬ ಸಂಸ್ಥೆಯೂ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಈ ಮಾಹಿತಿಯೂ ಹೊರಬಂದಿದೆ.

ಮೊದಲ ಎರಡು ಸ್ಥಾನ:

ಮೊದಲ ಎರಡು ಸ್ಥಾನ:

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಿರುವುದು ಶಿಯೋಮಿ ಇದನ್ನು ಬಿಟ್ಟರೆ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಎರಡು ಕಂಪನಿಗಳು ತಮ್ಮ ದೇಶದಿಂದ ಅತೀ ಹೆಚ್ಚು ಪ್ರಮಾಣದ ಮೊಬೈಲ್‌ಗಳನ್ನು ಈ ಎರಡು ಕಂಪನಿಗಳು ಆಮದು ಮಾಡಿಕೊಂಡಿವೆ ಎನ್ನಲಾಗಿದೆ.

ಮಿಕ್ಕಿದೆಲ್ಲವು ಚೀನಾ ಕಂಪನಿಗಳೇ:

ಮಿಕ್ಕಿದೆಲ್ಲವು ಚೀನಾ ಕಂಪನಿಗಳೇ:

ಮೊದಲ ಸ್ಥಾನ ಶಿಯೋಮಿ ನಂತರದ ಎರಡನೇ ಸ್ಥಾನದಲ್ಲಿ ಸ್ಯಾಮ್ ಸಂಗ್ ಕಾಣಿಸಿಕೊಂಡಿದೆ. ಇದಾದ ನಂತರದಲ್ಲಿ ಚೀನಾದ ಪ್ರಮುಖ ಮೊಬೈಲ್​ ಸಂಸ್ಥೆಗಳಾದ ಓಪ್ಪೋ, ಹಾಗೂ ವಿವೊ ಮೊಬೈಲ್​ಗಳು ಕಾಣಿಸಿಕೊಂಡಿದೆ. ಇದರಿಂದಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಮೂರು ಚೀನಾ ಕಂಪನಿಗಳೇ ಕಾಣಿಸಿಕೊಂಡಿದೆ.

99 ಲಕ್ಷ ಮೊಬೈಲ್:

99 ಲಕ್ಷ ಮೊಬೈಲ್:

ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 99 ಲಕ್ಷ ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯವನ್ನು ಮೆರೆಯುತ್ತಿದ್ದಾರೆ ಎನ್ನುವುದನ್ನು ಕಾಣಬಹುದಾಗಿದೆ.

ಒಪ್ಪೋ-ವಿವೋ:

ಒಪ್ಪೋ-ವಿವೋ:

ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಳವಣಿಗೆಯನ್ನು ಸಾಧಿಸುತ್ತಿವೆ. ಒಪ್ಪೋ 3.6 ಮಿಲಿಯನ್​ ಫೋನ್​ಗಳನ್ನು ಆಮದು ಮಾಡಿಕೊಂಡಿದ್ದು, ಇದೇ ಮಾದರಿಯಲ್ಲಿ ವಿವೊ ಸಂಸ್ಥೆ 3.1 ಮಿಲಿಯನ್​ ಮೊಬೈಲ್​ನ್ನು ಭಾರತಕ್ಕೆ ತರಿಸಿಕೊಂಡಿದೆ.

Best Mobiles in India

English summary
xiaomi number 1 in indian market. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X