ಭಾರತದಲ್ಲಿ 'ಫೋಕೊ ಎಫ್1' ಬಿಡುಗಡೆ ದಿನಾಂಕ ಫಿಕ್ಸ್!..ಬೆಚ್ಚಿಬಿತ್ತು ಮೊಬೈಲ್ ಮಾರುಕಟ್ಟೆ!!
ಮೊಬೈಲ್ ಮಾರುಕಟ್ಟೆಯಲ್ಲಿ ಹೈಪ್ ಸೃಷ್ಟಿಸಿರುವ ಶಿಯೋಮಿಯ ಸಹಬ್ರ್ಯಾಂಡ್ ಸ್ಮಾರ್ಟ್‌ಪೋನ್ 'ಫೋಕೊ ಎಫ್1' ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ. ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತಿರುವ 'ಫೋಕೊ ಎಫ್1' ಸ್ಮಾರ್ಟ್‌ಫೋನ್ ಇದೇ ಆಗಸ್ಟ್ 22ಕ್ಕೆ ಬಿಡುಗಡೆಯಾಗುತ್ತಿದೆ.
ಇಲ್ಲಿಯವರೆಗೂ ರೂಮರ್ಸ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಫೋಕೊಫೋನ್ ಬಿಡುಗಡೆಯ ಅಧಿಕೃತ ಮಾಹಿತಿಯನ್ನು ಶಿಯೋಮಿಯ ಸಹ ಬ್ರ್ಯಾಂಡ್ ಫೋಕೊ ಟ್ವಿಟ್ ಮೂಲಕ ಬಹಿರಂಗ ಪಡಿಸಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಹನಿಕೇಕ್‌ಗಳಂತೆ ಮಾರಾಟವಾಗುತ್ತಿರುವ ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಸಾಲಿಗೆ ಮತ್ತೊಂದು ಬತ್ತಳಿಕೆ ಫೋನ್ ಸೇರುವುದು ಖಚಿತವಾಗಿದೆ.

ಈಗಾಗಲೇ 'ಫೋಕೊಫೋನ್' ಎಂಬ ಹೊಸ ಬ್ರ್ಯಾಂಡ್ ಹೆಸರಿನಡಿಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿರುವುದು ಸೇರಿದಂತೆ ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದು ಕುತೋಹಲ ಮೂಡಿಸಿವೆ. ಹಾಗಾದರೆ, ಶಿಯೋಮಿಯ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನ್ ಹೇಗಿದೆ? ಶಿಯೋಮಿ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿರುವುದೇಕೆ? ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ನೂತನ ಬ್ರ್ಯಾಂಡ್ ಪರಿಚಯವೇಕೆ?
ಒನ್‌ಪ್ಲಸ್, ಸ್ಯಾಮ್‌ಸಂಗ್ ಕಂಪೆನಿಗಳ ಮಧ್ಯಮ ವರ್ಗದ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ಹೊಸ ಬ್ರ್ಯಾಂಡ್ ಹೆಸರಿನಡಿಯಲ್ಲಿ ಶಿಯೋಮಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.ಬಜೆಟ್ ಸ್ಮಾರ್ಟ್‌ಫೋನ್ ಕಂಪೆನಿ ಎಂನ ಹಣೆಪಟ್ಟಿ ಕಳೆದುಕೊಳ್ಳುವ ಯೋಚನೆಯಲ್ಲಿ 'ಫೋಕೊಫೋನ್' ಎಂಬ ಹೊಸ ಬ್ರ್ಯಾಂಡ್ ಹೆಸರಿನ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ.!

ಫೋಕೊಫೋನ್ ಎಫ್ 1 ವಿನ್ಯಾಸ!
18:9ರ ಆಕಾರ ಅನುಪಾತದಲ್ಲಿ 2160 × 1080 ಪಿಕ್ಸೆಲ್ ಸಾಮರ್ಥ್ಯದ 5.99-ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು 'ಫೋಕೊಫೋನ್ ಎಫ್1' ಸ್ಮಾರ್ಟ್‌ಫೋನ್ ಹೊಂದಿದೆ ಎನ್ನಲಾಗಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಂತಿದೆ.

ಪ್ರೊಸೆಸರ್ ಮತ್ತು RAM!
ಫೋಕೊಫೋನ್ ಎಫ್1 ಫೋನ್ ಶಿಯೋಮಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವುದರಿಂದ, ಕ್ವಾಲ್ಕಾಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 SOC ಪ್ರೊಸೆಸರ್ ಅನ್ನು ನೀಡಲಾಗಿದೆ. ಜೊತೆಗೆ 6GB RAM ಮತ್ತು 64GB ಹಾಗೂ 128GB ವೆರಿಯಂಟ್‌ಟ್‌ಗಳಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.

20MP ಸೆಲ್ಫಿ ಕ್ಯಾಮೆರಾ
ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನ ಚಿತ್ರಗಳ ಮೂಲಕ ಈ ಸ್ಮಾರ್ಟ್‌ಫೋನ್ 12MP ಮತ್ತು 5MP ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನಿನ ಸೆಲ್ಫಿ ಕ್ಯಾಮೆರಾಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು 20MP ಕ್ಯಾಮೆರಾ ಇದಾಗಿದೆ, ಈ ಫೋನಿನಲ್ಲಿ ಕ್ಯಾಮರಾ ತಂತ್ರಜ್ಞಾನವೆ ಹೆಚ್ಚು ವಿಶೇಷ ಎಂದು ಶಿಯೋಮಿ ಮೂಲಗಳು ತಿಳಿಸಿವೆ.

4000mAh ಬ್ಯಾಟರಿ!
ಮೊಬೈಲ್ ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಫೋಕೊಫೋನ್ ಎಫ್1 ಸ್ಮಾರ್ಟ್‌ಫೋನಿನಲ್ಲಿ 4000mAH ಶಕ್ತಿಯ ಬ್ಯಾಟರಿಯನ್ನು ನೀಡಲಾಗಿದೆ. ಬ್ಯಾಟರಿ ತಂತ್ರಜ್ಞಾನದಲ್ಲಿ ಸುಧಾರಣೆ ತಂದಿರುವ ಶಿಯೋಮಿ ಕಂಪೆನಿ ಫಾಸ್ಟ್‌ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ ಬ್ಯಾಟರಿ ಉಳಿಸುವ ತಂತ್ರಜ್ಞಾನವನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಿದೆ ಎನ್ನಲಾಗಿದೆ.

ಇತರೆ ಫೀಚರ್ಸ್ ಮತ್ತು ಬೆಲೆ
ಆಂಡ್ರಾಯ್ಡ್ 8.1 ಓರಿಯೊ ಆಧಾರಿತ MIUI 9ನ, ಫೇಸ್‌ಅನ್‌ಲಾಕ್, ಬ್ಯಾಂಡ್ 40 LTE ಬೆಂಬಲವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಇತರೆ ಎಲ್ಲಾ ಸಾಮಾನ್ಯ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರಬಹುದಾದ ಈ ಸ್ಮಾರ್ಟ್‌ಪೋನಿನ ಆರಂಭಿಕ ಬೆಲೆ 33,600 ರೂಪಾಯಿಗಳಿಂದ ಶುರುವಾಗಲಿದೆ ಎಂದು ಹೇಳಲಾಗಿದೆ.

ಶಿಯೋಮಿ 'ಎಂಐ ಎ2' VS 'ಹಾನರ್ ಪ್ಲೇ'..ಯಾವ ಸ್ಮಾರ್ಟ್‌ಪೋನ್ ಬೆಸ್ಟ್?
ನೀವು ಒಂದು ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯಾವಾಗ ಬಯಸಿರುತ್ತಿರೂ ಆಗಲೇ ಆ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿಬಿಡಿ. ಏಕೆಂದರೆ, ಆ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ ಸ್ವಲ್ಪ ತಡವಾದರೂ ಸಹ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗಿರುತ್ತದೆ. ಆದರೆ, ಈ ಬಾರಿ ಒಂದಲ್ಲ..ಎರಡು ಅದ್ಬುತ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾಗಿವೆ.
ಹೌದು, ಕೇವಲ ಒಂದು ವಾರದಲ್ಲಿ ಹತ್ತು ಹಲವು ಸ್ಮಾರ್ಟ್‌ಫೋನ್‌ಗಳು ಬಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಇವುಗಳಲ್ಲಿ ಗ್ರಾಹಕರ ಸದಭಿರುಚಿಯನ್ನು ಪೂರೈಸುವ ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮೊಬೈಲ್ ಪ್ರಿಯರ ನಿದ್ದೆಗೆಡಿಸಲು ಶಿಯೋಮಿಯ ಎಂಐ ಎ2 ಮತ್ತು ಹುವಾವೆ ಕಂಪೆನಿ ಹಾನರ್ ಪ್ಲೇ ಸ್ಮಾರ್ಟ್‌ಪೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿವೆ.

ಈ ಎರಡೂ ಸ್ಮಾರ್ಟ್‌ಪೋನ್‌ಗಳು ಬಜೆಟ್ ಬೆಲೆಯಲ್ಲಿ ಮಾರಾಟಕ್ಕಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿದ್ದು, ಹಾಗಾದರೆ, ಶಿಯೋಮಿಯ ಎಂಐ ಎ2 VS ಹಾನರ್ ಪ್ಲೇ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಬೆಸ್ಟ್ ಖರೀದಿಸಲು ಬೆಸ್ಟ್ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದು ನಂತರ ಖರೀದಿಸಲು ಮುಂದಾಗಿ.

ಶಿಯೋಮಿ 'ಮಿ ಎ2' ಬೆಲೆ?
ಇನ್ನು ನೆನ್ನೆಯಷ್ಟೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಬಿಡುಗಡೆಯಾಗಿದೆ. 4 GB RAM ಮತ್ತು 64 GB ಆವೃತ್ತಿಯ ಸ್ಮಾರ್ಟ್‌ಫೋನ್ ಬೆಲೆ ರೂ.16,999ಕ್ಕೆ ರೂ.ಗಳಾಗಿದ್ದು, ಶೀಘ್ರವೇ 6GB RAM / 128 GB ಆವೃತ್ತಿಯೂ ಲಾಂಚ್ ಆಗಲಿದೆ.


ಹಾನರ್ ಪ್ಲೇ ಬೆಲೆ?
ಭಾರತದಲ್ಲಿ ಆಗಸ್ಟ್ 06ದಿಂದಲೇ ಮಾರಾಟ ಆರಂಭವಾಗಿರುವ ಹಾನರ್ ಪ್ಲೇ4GB RAM ಮತ್ತು 6GB RAM ಹಾಗೂ 64 ಜಿಬಿ ಆಂತರಿಕ ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಂದಿದೆ. 4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 19,999ರೂಪಾಯಿಗಳಾಗಿದ್ದರೆ, 6GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 23,999 ರೂಪಾಯಿಗಳಾಗಿವೆ.

ಶಿಯೋಮಿ 'ಮಿ ಎ2' ಡಿಸ್‌ಪ್ಲೇ
ಇನ್ನು ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಯೂನಿಬಾಡಿ ಮೆಟಲ್ ಡಿಸೈನ್‌ನೊಂದಿಗೆ ಸದ್ಯದ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತ 5.99 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ. FHD+ ಗುಣಮಟ್ಟ ಡಿಸ್‌ಪ್ಲೇ ಇದಾಗಿದ್ದು, ಭಾರತದಲ್ಲಿ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ಹೊಂದಿರುವ ಮೊದಲ ಫೋನ್ ಇದಾಗಿದೆ.

ಹಾನರ್ ಪ್ಲೇ ಡಿಸ್‌ಪ್ಲೇ!
ಮಧ್ಯಮ ಬೆಲೆಯಲ್ವ 'ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಸಹ ನಾಚಿಸುವಂತಿದೆ. 6.3-ಇಂಚಿನ ಫುಲ್-HD+ (1080x2340 ಪಿಕ್ಸಲ್ಸ್) ಜೊತೆಗೆ 85 ಶೇಕಡಾ NTSC colour gamut ಇರುವ ಡಿಸ್‌ಪ್ಲೇ ಅತ್ಯುತ್ತಮ ಅನುಭವವನ್ನು ನೀಡಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಈ ಫೋನ್ ಹೊಂದಿದೆ.

ಶಿಯೋಮಿ 'ಮಿ ಎ2' ಪ್ರೊಸೆಸರ್!
ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 2.2GHz ವೇಗ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಗೂಗಲ್ ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಒನ್ OS ಅನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಶಿಯೋಮಿಯ ಕೇಲವು ಆಪ್‌ಗಳು ಸಹ ಲಭ್ಯವಿವೆ.

ಹಾನರ್ ಪ್ಲೇ ಪ್ರೊಸೆಸರ್!
ಅಕ್ಟಾ-ಕೋರ್-ಹುವಾಯಿ HiSilicon Kirin 970 ಸಾಕೆಟ್, Mali-G72 GPU ಜೊತೆಗೆ ಮತ್ತು NPU( ನ್ಯೂಟ್ರಲ್ ಪ್ರೊಸೆಸಿಂಗ್ ಯುನಿಟ್) ಬಿಲ್ಟ್ ಇನ್ ಆದ ಪ್ರೊಸೆಸರ್ ಶಕ್ತಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಹೊಣೆ ಹೊತ್ತಿದೆ. ಇನ್ನು ಮೊದಲೇ ಹೇಳಿದಂತೆ 4ಜಿಬಿ ಮತ್ತು 6ಜಿಬಿಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಶಿಯೋಮಿ 'ಮಿ ಎ2' ಕ್ಯಾಮೆರಾ?
ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ 12 MP + 20 MP ಸಾಮರ್ಥ್ಯದಲ್ಲಿ ಡ್ಯುಯಲ್ ರಿಯಲ್ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 20 MP ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಹಾಗೂ ಎರಡು ಕಡೆಗಳಲ್ಲಿಯೂ ಆಟೋ HDR ಆಯ್ಕೆಯನ್ನು ಕಾಣಬಹುದಾಗಿದೆ. ಬೋಕೆ ಮೋಡ್ ಅನ್ನು ಕಾಣಬಹುದಾಗಿದೆ.

ಹಾನರ್ ಪ್ಲೇ ಕ್ಯಾಮೆರಾ !
ಹಾನರ್ ಪ್ಲೇ' ಡ್ಯುಯಲ್ ರಿಯರ್ ಕ್ಯಾಮೆರಾ ಡ್ಯುಯಲ್ ಕ್ಯಾಮರಾ ಸೆಟ್‌ಅಪ್ ಅನ್ನು ಹೊಂದಿದ್ದು, ಒಂದು 16 ಮೆಗಾಪಿಕ್ಸಲ್ ಪ್ರೈಮರಿ ಲೆನ್ಸ್ f/2.2 ದ್ಯುತಿರಂದ್ರ ಮತ್ತು PDAF ಆಗಿದ್ದರೆ, ಇನ್ನೊಂದು 2 ಮೆಗಾಪಿಕ್ಸಲ್ ಸೆಂಕೆಂಡರಿ ಲೆನ್ಸ್ ಜೊತೆಗೆ f/2.4 ದ್ಯುತಿರಂದ್ರವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿದೆ.

ಶಿಯೋಮಿ 'ಮಿ ಎ2' ಇತರೆ ಫೀಚರ್ಸ್?
ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನಿನಲ್ಲಿ 3000mAh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜರ್ ತಂತ್ರಜ್ಞಾನವಿದೆ. 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಸೇರಿದಂತೆ ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಹೊಂದಿರಬಹುದಾದ ಬಹುತೇಕ ಎಲ್ಲಾ ಸಾಮಾನ್ಯ ಫೀಚರ್ಸ್ ಸ್ಮಾರ್ಟ್‌ಪೋನಿನ ಬೆಲೆಯನ್ನು ಹೆಚ್ಚಿಸಿದೆ. ಇಯರ್ ಫೋನ್ ಜಾಕ್ ಇಲ್ಲದಿರುವುದು ಆಶ್ಚರ್ಯಮೂಡಿಸಿದೆ.

ಹಾನರ್ ಪ್ಲೇ ಇತರೆ ಫೀಚರ್ಸ್?
3750 mAh ಬ್ಯಾಟರಿ , 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳುವ ಅವಕಾಶವಿರುವ ಈ ಫೋನಿನಲ್ಲಿ ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಯನ್ನು ಹೊಂದಿದೆ. ಸೆನ್ಸರ್ ಗಳಲ್ಲಿ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, gyroscope ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

ಖರೀದಿಸಲು ಯಾವ ಫೋನ್ ಬೆಸ್ಟ್?
ಹಾನರ್ ಮತ್ತು ಶಿಯೋಮಿ 'ಮಿ ಎ2' ಎರಡೂ ಸ್ಮಾರ್ಟ್‌ಪೋನ್‌ಗಳು ನಾವು ನೀಡುವ ಬೆಲೆಗೆ ಯೋಗ್ಯವಾದ ಫೋನ್‌ಗಳೆಂದು ಹೇಳಹುದಾಗಿದೆ. ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ಮತ್ತು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಹೊಂದಿರುವುದು ಗ್ರಾಹಕರನ್ನು ಸೆಳೆಯಲು ಸಹಾಯಕವಾಗಿದೆ. ಆದರೆ, ಅಕ್ಟಾ-ಕೋರ್-ಹುವಾಯಿ HiSilicon Kirin 970 ಪ್ರೊಸೆಸರ್ ಕೂಡ ಶಕ್ತಿಶಾಲಿಯಾಗಿದೆ.! ನನ್ನ ಪ್ರಕಾರ, ಎರಡರಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಿದರೂ ಗ್ರಾಹಕರಿಗೆ ಲಾಭವೇ ಹೆಚ್ಚು.!


Click it and Unblock the Notifications




