ಶಿಯೋಮಿ ದಾಖಲೆ ಅಳಿಸಿದ ಪೊಕೊ F1: ಕ್ಷಣದಲ್ಲಿ ಲಕ್ಷ-ಲಕ್ಷ ಫೋನ್ ಸೇಲ್..!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ, ಯಾವುದೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಫ್ಲಾಷ್ ಸೇಲ್‌ನಲ್ಲಿಯೇ ಮಾರಾಟ ಮಾಡುತ್ತಿದೆ. ಹೀಗೆ ಕ್ಷಣ ಮಾತ್ರದಲ್ಲಿಯೇ ಲಕ್ಷ-ಲಕ್ಷ ಫೋನ್‌ಗಳನ್ನು ಸೇಲ್ ಮಾಡುತ್ತಿತು. ಈಗ ಇದೇ ಮಾದರಿಯಲ್ಲಿ ಶಿಯೋಮಿ ಸಬ್ ಬ್ರಾಂಡ್ ಪೊಕೊ, ಶಿಯೋಮಿಯ ದಾಖಲೆಯನ್ನು ಅಳಿಸಿ ಹಾಕಿದೆ ಎನ್ನಲಾಗಿದೆ.

ಆಗಸ್ಟ್ 29 ರಂದು ಮೊದಲ ಸೇಲ್‌ನಲ್ಲಿ ಕಾಣಿಸಿಕೊಂಡ ಪೊಕೊ F1 ಸ್ಮಾರ್ಟ್‌ಫೋನ್, ಫ್ಲಿಪ್‌ಕಾರ್ಟ್ ಮತ್ತು ಮಿ. ಕಾಮ್‌ನಲ್ಲಿ ಮಾತ್ರವೇ ಫ್ಲಾಷ್ ಸೇಲ್‌ನಲ್ಲಿ ಲಭ್ಯವಿತ್ತು. ಈ ಎರಡು ಕಡೆಗಳಲ್ಲಿ ಕ್ಷಣ ಮಾತ್ರದಲ್ಲಿಯೇ ಲಕ್ಷ ಲಕ್ಷ ಫೋನ್‌ಗಳು ಸೇಲ್ ಆಗಿ ಶಿಯೋಮಿ ದಾಖಲೆಯನ್ನು ಅಳಿಸಿ ಹೊಸದಾಗಿ ತನ್ನದೇ ನೂತನ ದಾಖಲೆಯನ್ನು ನಿರ್ಮಿಸಿದೆ.

ನೆಕ್ಸ್ಟ್ ಸೇಲ್:
ಮೊದಲ ಸೇಲ್‌ನಲ್ಲಿ ಸೋಲ್ಟ್ ಔಟ್ ಆಗಿರುವ ಪೊಕೊ F1 ಸ್ಮಾರ್ಟ್‌ಫೋನ್ ಮುಂದಿನ ವಾರ ಎಂದರೆ ಸೆಪ್ಟೆಂಬರ್ 05 ರಂದು ಮತ್ತೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಫ್ಲಿಪ್‌ಕಾರ್ಟ್ ಮತ್ತು ಮಿ. ಕಾಮ್ ಎರಡರಲ್ಲಿಯೂ ಪೊಕೊ F1 ಸ್ಮಾರ್ಟ್‌ಫೋನ್ ಕೊಳ್ಳುವ ಅವಕಾಶವಿರಲಿದೆ.

ಪ್ರಿಮಿಯಮ್ ನಲ್ಲಿ ದಾಖಲೆ:
ಪ್ರೀಮಿಯಮ್ ವಿಶೇಷತೆಗಳನ್ನು ಹೊಂದಿರುವ ಫೋನ್ ವೊಂದು ಇಷ್ಟು ವೇಗವಾಗಿ, ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗಿರುವುದು ಇದೇ ಮೊದಲು ಎನ್ನಲಾಗಿದೆ. ಇದನ್ನು ಬಿಟ್ಟರೇ ಇಷ್ಟು ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಹಾಕಿದ್ದು ಒನ್‌ಪ್ಲಸ್ ಮಾತ್ರವೇ ಎನ್ನಲಾಗಿದೆ.

ವಿಶೇಷತೆ:
6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ ಇದರೊಂದಿಗೆ ನೋಚ್ ನೀಡಲಾಗಿದೆ. ನಿಮಗೆ ನೋಚ್ ಇಷ್ಟವಾಗದೆ ಇದ್ದರೆ ಅನ್ನು ತೆಗೆದು ಹಾಕುವ ಅವಕಾಶವು ಇದೆ. ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಜೊತೆಗೆ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz ವೇಗದ CPUವನ್ನು ನೀಡಲಾಗಿದೆ.

ಬೆಸ್ಟ್ ಆಯ್ಕೆಗಳು:
ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 20 ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಇದಕ್ಕದಾಗಿ AI ಬ್ಯೂಟಿಫೈ ಅನ್ನು ಅಳವಡಿಸಲಾಗಿದ್ದು, ಬಳಕೆದಾರರು ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಜೊತೆಗೆ ಇನ್‌ಫಾರೆಡ್ ಫೇಸ್ ಆನ್‌ಲಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ.

ಪೊಕೊ F1 ಸ್ಮಾರ್ಟ್‌ಫೋನ್ ಬೆಲೆ:
ಒಟ್ಟು ನಾಲ್ಕು ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. 6GB RAM + 64GB ಕೇವಲ ರೂ.20,999ಕ್ಕೆ, 6GB RAM + 128GB ಆವೃತ್ತಿಯೂ 23,999ಕ್ಕೆ, 8GB RAM + 256GB ರೂ.28,999ಕ್ಕೆ ಮಾರಾಟವಾಗಲಿದೆ. ಸ್ಪೇಷಲ್ ಆವೃತ್ತಿ 8GB RAM + 256GB ಆವೃತ್ತಿಯೂ ರೂ.29999ಕ್ಕೆ ಲಭ್ಯವಿರಲಿದೆ.


Click it and Unblock the Notifications








