Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಶಯೋಮಿ ಪವರ್ ಬ್ಯಾಂಕ್‌ ಸಿಕ್ಕಾಪಟ್ಟೆ ಸೇಲ್

Written By:

ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಶಯೋಮಿಯ ಪವರ್ ಬ್ಯಾಂಕ್‌ಗಳನ್ನು ಭಾರತದಲ್ಲಿರುವ ಇ ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. 10400mAh ಪವರ್ ಬ್ಯಾಂಕ್ ಅನ್ನು ರೂ 999 ರಂತೆ ಪಟ್ಟಿ ಮಾಡಲಾಗಿದ್ದು, 5200mAh ಪವರ್ ಬ್ಯಾಂಕ್ ಬೆಲೆ ರೂ 799 ಆಗಿದೆ. ಈ ಪವರ್ ಬ್ಯಾಂಕ್‌ಗಳು ಭರ್ಜರಿ ಮಾರಾಟವನ್ನೇ ಪಡೆದುಕೊಂಡಿದ್ದು ಈಗ ವೆಬ್‌ಸೈಟ್‌ನಲ್ಲಿ ಸ್ಟಾಕ್ ಇಲ್ಲ ತಲೆಬರಹದಡಿಯಲ್ಲಿ ಬರುತ್ತಿದೆ.

Mi ಪವರ್ ಬ್ಯಾಂಕ್‌ಗಳು ಅಲ್ಯುಮಿನಿಯಮ್ ಕೇಸ್ ಅನ್ನು ಹೊಂದಿದ್ದು ಪೂರ್ತಿಯಾಗಿ ಬ್ಯಾಟರಿಯನ್ನು ಕವರ್ ಮಾಡಿದೆ. ಇದು ಮೆಟಾಲಿಕ್ ಫಿನಿಶ್ ಅನ್ನು ಹೊಂದಿದ್ದು ನೀರು ಮತ್ತು ಧೂಳು ಪ್ರತಿರೋಧಕ ಶಕ್ತಿಯನ್ನು ಹೊಂದಿದೆ. ಶಯೋಮಿಯ ಪ್ರಕಾರ, Mi ಪವರ್ ಬ್ಯಾಂಕ್‌ಗಳಲ್ಲಿ Mi ಫೋನ್‌ಗಾಗಿ 2.5 ಪೂರ್ಣ ಚಾರ್ಜ್‌ಗಳು, ಐಫೋನ್ 5S ಗಾಗಿ 4.5 ಪೂರ್ಣ ಚಾರ್ಜ್‌ಗಳು, 1.5 ಚಾರ್ಜ್‌ಗಳಿಗಾಗಿ ಐಪ್ಯಾಡ್ ಮಿನಿ ಅನ್ನು ರೀಚಾರ್ಜ್ ಮಾಡಬಹುದಾಗಿದೆ.

ಶಯೋಮಿ ಪವರ್ ಬ್ಯಾಂಕ್ ಭರ್ಜರಿ ಮಾರಾಟ

ಚೀನಾದ ಆಪಲ್ ಎಂದೇ ಕರೆಯಲಾದ ಶಯೋಮಿ ಭಾರತೀಯ ಮಾರುಕಟ್ಟೆಯನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರವೇಶಿಸಿದೆ. ಫ್ಲಿಪ್‌ಕಾರ್ಟ್‌ನೊಂದಿಗೆ ಈ ಫೋನ್‌ಗಳ ಮಾರಾಟ ಒಪ್ಪಂದವನ್ನು ಕಂಪೆನಿ ಮಾಡಿಕೊಂಡಿತ್ತು.

ಶಯೋಮಿ ರೆಡ್ಮಿ 1S ಮತ್ತು ರೆಡ್ಮಿ ನೋಟ್‌ನಂತಹ ಇನ್ನಷ್ಟು ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದ್ದು ಮುಂಬರಲಿರುವ ದಿನಗಳಲ್ಲಿ ದೊಡ್ಡ ಧಮಾಲನ್ನೇ ಇದು ಸೃಷ್ಟಿಮಾಡಲಿದೆ. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಫೋನ್‌ ಸ್ಪರ್ಧೆಗಳ ನಡುವಿನ ಸಾಕ್ಷಿಯಾಗಿ ಭಾರತೀಯ ಮಾರುಕಟ್ಟೆ ತಲೆ ಎತ್ತಿ ನಿಂತಿದೆ.

Read more about:
English summary
This article tells about Xiaomi power bank listed online in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot