ಕ್ಸಯೋಮಿ ರೆಡ್ಮೀ 1S ಡ್ಯುಯೆಲ್ ಸಿಮ್ ಬೆಂಬಲದೊಂದಿಗೆ ಭಾರತದಲ್ಲಿ

By Shwetha
|

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಉತ್ಪನ್ನಗಳದ್ದೇ ಕಾರುಬಾರು ಎಂಬುದು ನಿಚ್ಚಳವಾಗಿ ಈಗ ಕಂಡುಬರುತ್ತಿದೆ. ಸ್ಯಾಮ್‌ಸಂಗ್ ಮತ್ತು ಸೋನಿಯಂತೆ ಚೀನಾ ಸ್ಮಾರ್ಟ್‌ಫೋನ್‌ಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಕಮಾಲನ್ನು ಪ್ರದರ್ಶಿಸುವ ನಿಟ್ಟಿನಲ್ಲಿವೆ.

ಕ್ಸಯೋಮಿ ಫೋನ್ ತನ್ನ ಮುಂಬರಲಿರುವ Xiaomi Mi 3 ಹ್ಯಾಂಡ್‌ಸೆಟ್ ಮೂಲಕ ಸುದ್ದಿಯಲ್ಲಿತ್ತು. ಈ ಡಿವೈಸ್ ಅನ್ನು ಮಾತ್ರ ಕಂಪೆನಿ ಹೊರತರದೇ ನ್ಯೂ ರೆಡ್ಮೀ 1S ಅನ್ನು ಕೂಡ ಕಂಪೆನಿ ಲಾಂಚ್ ಮಾಡುತ್ತಿದೆ.

ಕ್ಸಯೋಮಿ ರೆಡ್ಮೀ 1S ಡ್ಯುಯೆಲ್ ಸಿಮ್ ಫೋನ್ ರೂ 6,999 ಕ್ಕೆ

Mi 3 ಮತ್ತು ನ್ಯೂ ರೆಡ್ಮೀ 1S ಅನ್ನು ಲಾಂಚ್ ಮಾಡುವುದರೊಂದಿಗೆ ಕ್ಸಯೋಮಿ ಭಾರತೀಯ ಬಳಕೆದಾರರಿಗೆ ಬಜೆಟ್ ಫೋನ್ ಅನ್ನು ಒದಗಿಸುವ ತಯಾರಿಯನ್ನು ಮಾಡಿದೆ ಎಂದೇ ಹೇಳಬಹುದು. ಇದು ಕಡಿಮೆ ಬಜೆಟ್‌ನಲ್ಲಿ ವಿಶಿಷ್ಟ ಅಂಶಗಳನ್ನು ಒಳಗೊಂಡಿರುವ ಫೋನ್ ಆಗಿದ್ದು ಭಾರತೀಯ ಬಳಕೆದರರಿಗೆ ಇಷ್ಟವಾಗಲಿದೆ.

ನ್ಯೂ ರೆಡ್ಮೀ 1S 4.7 ಇಂಚಿನ 720x1280 ಪಿಕ್ಸೆಲ್ IPS-LCD ಡಿಸ್‌ಪ್ಲೇಯೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಒಳಗೊಂಡಿದೆ. ಇದರ ಪಿಕ್ಸೆಲ್ ಡೆನ್ಸಿಟಿ 300ppi ಆಗಿದೆ. ಇದರಲ್ಲಿ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಚಾಲನೆಯಾಗುತ್ತಿದ್ದು MIUI v5 ಇದರ ಮೇಲ್ಭಾಗದಲ್ಲಿ ಇದೆ. ಇದರಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಅನ್ನು ಅಪ್‌ಗ್ರೇಡ್ ಮಾಡಬಹುದೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಡ್ಯುಯೆಲ್ ಸಿಮ್ ಉಳ್ಳ ರೆಡ್ಮೀ ಸ್ಮಾರ್ಟ್‌ಫೋನ್ ಡ್ಯುಯೆಲ್ ಸ್ಟ್ಯಾಂಡ್‌ಬೈನಲ್ಲಿ ಬಂದಿದೆ. ಇದು 1.6GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 SoC ಮತ್ತು 1ಜಿಬಿ RAM ಇದರಲ್ಲಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯಾಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ. ಇದು ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು, ಫ್ಲ್ಯಾಶ್ ಜತೆಗಿರುವ ಆಟೋಫೋಕಸ್ ಅನ್ನು 1.3 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

ಕ್ಸಯೋಮಿ ರೆಡ್ಮೀ 1S ಮತ್ತು ರೆಡ್ಮೀ ನೋಟ್ ಅನ್ನು ರೂ 6,999 ಹಾಗೂ ರೂ 9,999 ಹಾಗೆ ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ.

Best Mobiles in India

Read more about:
English summary
This article tells that Xiaomi Redmi 1 with dual sim support 6,999 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X