Subscribe to Gizbot

ಶಯೋಮಿಯ ರೆಡ್ಮೀ 1S ರೂ 5,999 ಕ್ಕೆ

Posted By:

ಭಾರತದಲ್ಲಿ ನೀವೊಬ್ಬ ಫೋನ್ ತಯಾರಕರಾಗಿದ್ದರೆ ನಿಜಕ್ಕೂ ಇದು ಸೌಭಾಗ್ಯವಾಗಿದೆ. ಏಕೆಂದರೆ ಹತ್ತು ಕೆ ಒಳಗಿನ ಫೋನ್‌ಗಳ ಆಕರ್ಷಣೆ ನಿಜಕ್ಕೂ ಗ್ರಾಹಕರನ್ನು ಸೆಳೆದಿಡುತ್ತಿದ್ದು ಬಜೆಟ್ ಪ್ರೇಮಿಗಳಿಗೆ ಮತ್ತು ಕಡಿಮೆ ಮಟ್ದಲ್ಲಿ ಅತ್ಯುತ್ತಮ ಲಾಭವನ್ನು ಗಳಿಸುವವರಿಗೆ ಭಾರತದ ಫೋನ್ ಮಾರುಕಟ್ಟೆ ವರದಾಯಕವಾಗಿದೆ.

ಇದಕ್ಕೆ ಉದಾಹರಣೆ ನೀಡಬೇಕೆಂದರೆ ಮೋಟೋ ಜಿ ಮತ್ತು ಮೋಟೋ ಇ ಆಗಿದೆ. ಬರಿಯ ಮೋಟೋರೋಲಾ ಕಂಪೆನಿ ಮಾತ್ರವೇ ಕಡಿಮೆ ಮೌಲ್ಯದ ಆಕರ್ಷಕ ಫೀಚರ್ ಉಳ್ಳ ಡಿವೈಸ್‌ಗಳನ್ನು ಮಾರಾಟ ಮಾಡದೇ ಇತರ ಫೋನ್‌ ತಯಾರಿಕಾ ಕಂಪೆನಿಗಳೂ ಕೂಡ ಇದೇ ಹಾದಿಯಲ್ಲಿ ನಡೆದು ಯಶಸ್ಸನ್ನು ತಲುಪಿದೆ.

ಇನ್ನು ಸದ್ಯಕ್ಕೆ ಬಜೆಟ್ ಫೋನ್ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಫೋನ್ ಶಯೋಮಿಯಾಗಿದ್ದು ಈ ವರ್ಷದಲ್ಲೇ ಹತ್ತು ಕೆ ಬೆಲೆಯಲ್ಲಿ ತನ್ನ ಉತ್ಪನ್ನವಾದ MI3 ಅನ್ನು ಲಾಂಚ್ ಮಾಡಿ ಯಶಸ್ಸನ್ನು ಪಡೆದುಕೊಂಡಿದೆ. ಇದೇ ಯಶಸ್ಸನ್ನು ಶಾಶ್ವತವಾಗಿ ಇರಿಸುವ ನಿಟ್ಟಿನಲ್ಲಿ ಕಂಪೆನಿ ರೆಡ್ಮೀ 1S ಅನ್ನು ಲಾಂಚ್ ಮಾಡಿದೆ.

ಕಂಪೆನಿಯು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯುವಂತೆ ಮಾಡಿದ್ದು ಇಂದು ಸಂಜೆ 6 ಗಂಟೆಯ ನಂತರ ಫೋನ್ 5,999 ಕ್ಕೆ ಲಭ್ಯವಾಗುತ್ತಿದೆ. ನಿಜಕ್ಕೂ ಮೋಟೋ ಇ ಗೆ ಈ ಫೋನ್‌ನ ಲಾಂಚ್ ಕಂಟಕಪ್ರಾಯವೆನಿಸಲಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಫೋನ್‌ನ ಕುರಿತಾದ ಮೋಡಿ ಮಾಡುವ ಅದ್ಭುತ ಫೀಚರ್‌ಗಳನ್ನು ಅರಿತುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್ಮೀ 1S ವಿಶೇಷತೆ

#1

ಇದು 4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪ್ರಸ್ತುತ ಕಾಲಕ್ಕೆ ತಕ್ಕಮಟ್ಟಿಗೆ ಉಚಿತವಾಗಿದೆ. ರೆಡ್ಮೀ 1S' 1280 x 720 ಡಿಸ್‌ಪ್ಲೇಯು 312 ppi, ಒಗಿಸುತ್ತಿದೆ ಇನ್ನು ಇದರ ವೀಕ್ಷಣಾ ಸಾಮರ್ಥ್ಯ ಕೂಡ ಅತ್ಯದ್ಭುತವಾಗಿದೆ.

ರೆಡ್ಮೀ 1S ವಿಶೇಷತೆ

#2

ಫೋನ್‌ನಲ್ಲಿರುವ ಹಾರ್ಡ್‌ವೇರ್‌ನಿಂದಾಗಿ ಫೋನ್ ಕಣ್ಸೆಳೆಯುವ ನೋಟದೊಂದಿಗೆ ಮಜಬೂತಾಗಿದೆ. ಹ್ಯಾಂಡ್‌ಸೆಟ್ ಫ್ರಂಟ್ ಕ್ಯಾಮೆರಾ ಮತ್ತು ವಾಲ್ಯೂಮ್ ರಾಕರ್ ಬಟನ್‌ಗಳನ್ನು ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ನಿಮಗೆ ನೋಡಬಹುದು.

ರೆಡ್ಮೀ 1S ವಿಶೇಷತೆ

#3

ಈ ಫೋನ್ ಅತ್ಯುತ್ತಮವಾಗಿದ್ದು ಹ್ಯಾಂಡಿಯಾಗಿದೆ ಎಂಬುದು ತಿಳಿದು ಬಂದ ವಿಚಾರವಾಗಿದೆ. ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಅನ್ನು ಹೊಂದಿದ್ದು ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 1GB RAM ಫೋನ್‌ನಲ್ಲಿದ್ದು 8GB ಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದನ್ನು ನೀವು 64 ಜಿಬಿಗೆ ವಿಸ್ತರಿಸಬಹುದಾಗಿದೆ.

ರೆಡ್ಮೀ 1S ವಿಶೇಷತೆ

#4

ಫೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದ್ದು (WCDMA for 3G + GSM for 2G) ಆಯ್ಕೆಗಳಿವೆ. 3G, GPRS/ EDGE, ವೈ-ಫೈ ಇದರಲ್ಲಿದೆ. Micro-USB, ಬ್ಲ್ಯೂಟೂತ್ 4.0, FM ರೇಡಿಯೊ, GPS/ A-GPS, ಮತ್ತುUSB OTG ಪೋನ್‌ನ ಸಂಪರ್ಕ ವಿಶೇಷತೆಗಳಾಗಿವೆ.

ರೆಡ್ಮೀ 1S ವಿಶೇಷತೆ

#5

ಫೋನ್‌ನ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 1.6 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

<center><iframe width="100%" height="360" src="//www.youtube.com/embed/6_mTxV1uIPA?feature=player_embedded" frameborder="0" allowfullscreen></iframe></center>

English summary
This article tells about Xiaomi Redmi 1S First Look and Hands On Xiaomi Brings Power to the Budget People.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot