ಜಿಯೋ ಸಪೋರ್ಟ್ ಮಾಡುವ ರೆಡ್‌ಮಿ 4 : ಬೆಲೆ, ವಿಶೇಷತೆ ಕೇಳಿದ್ರೆ ಈಗಲೇ ಬುಕ್ ಮಾಡ್ತಿರಾ..!!!!

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಶಿಯೋಮಿ, ಮತ್ತೊಂದು ಹೊಸ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ. ಮೊದಲ ಬಾರಿಗೆ ಭಾರತೀಯ ಆಫ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿರುವ ಶಿಯೋಮಿ, ಈ ಹೊಸ ಸ್ಮಾರ್ಟ್‌ಫೋನ್ ಮೂಲಕವೇ ಭರ್ಜರಿ ಎಂಟ್ರಿ ಪಡೆಯಲಿದೆ ಎನ್ನಲಾಗಿದೆ.

ರೆಡ್‌ಮಿ 4 : ಬೆಲೆ, ವಿಶೇಷತೆ ಕೇಳಿದ್ರೆ ಈಗಲೇ ಬುಕ್ ಮಾಡ್ತಿರಾ..!!!!

ಶಿಯೋಮಿ ಕಳೆದ ಕೆಲವು ದಿನಗಳ ಹಿಂದೆ ಕೇವಲ ಅಮೆಜಾನ್ ನಲ್ಲಿ ಮಾತ್ರ ಮಾರಾಟ ಮಾಡಲು ನಿರ್ಮಿಸಿದಂತಹ ರೆಡ್‌ಮಿ 4 A ಸ್ಮಾರ್ಟ್‌ಫೋನ್ ನ ಮುಂದುವರೆದ ಭಾಗವಾದ ರೆಡ್‌ಮಿ 4 ಮತ್ತು ರೆಡ್‌ಮಿ 4 ಪ್ರೈಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ 3 ಎಸ್ ಬದಲಿಗೆ ರೆಡ್‌ಮಿ 4:

ರೆಡ್‌ಮಿ 3 ಎಸ್ ಬದಲಿಗೆ ರೆಡ್‌ಮಿ 4:

ಈ ಹಿಂದೆ ಶಿಯೋಮಿಯ ರೆಡ್‌ಮಿ 3 ಎಸ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿತ್ತು. ಈ ಫೋನ್‌ಬಂದು ತುಂಬ ದಿನಗಳೆ ಕಳೆದಿರುವುದರಿಂದ ಆದರ ಬದಲಿಗೆ ಶಿಯೋಮಿ ರೆಡ್‌ಮಿ 4 ಫೋನನ್ನು ಬಿಡುಗಡೆ ಮಾಡುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

ರೆಡ್‌ಮಿ 4 ವಿಶೇಷತೆಗಳು:

ರೆಡ್‌ಮಿ 4 ವಿಶೇಷತೆಗಳು:

ರೆಡ್‌ಮಿ 4 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ HD 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ ಅಳವಡಿಸಲಾಗಿದ್ದು, ವೇಗದ ಕಾರ್ಯಚರಣೆಗಾಗಿ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಇದ್ದು, ಆಂಡ್ರಾನಿನೋ 505 GPU ಸಹ ಇದರಲ್ಲಿದೆ.

 ರೆಡ್‌ಮಿ 4 ಮೆಮೊರಿ:

ರೆಡ್‌ಮಿ 4 ಮೆಮೊರಿ:

2GB RAM, 16 GB ಇಂಟರ್ನಲ್ ಮೆಮೊರಿ ಜೊತೆಗೆ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಅಳವಡಿಸಲಾಗಿದೆ.

 ರೆಡ್‌ಮಿ 4 ಕ್ಯಾಮೆರಾ;

ರೆಡ್‌ಮಿ 4 ಕ್ಯಾಮೆರಾ;

ರೆಡ್‌ಮಿ 4 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಿದ್ದು, ಇದರೊಂದಿಗೆ LED ಫ್ಲಾಷ್ ಸಹ ಕೊಡಲಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅವಳಡಿಸಿದೆ. ಅಲ್ಲದೇ 4100 mAh ಬ್ಯಾಟರಿ ನೀಡಿದ್ದು, ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 8 ಸಹ ಇರಲಿದೆ.

ರೆಡ್‌ಮಿ 4 ಬೆಲೆ;

ರೆಡ್‌ಮಿ 4 ಬೆಲೆ;

ರೆಡ್‌ಮಿ 3 ಎಸ್ ಶಿಯೋಮಿ ರೆಡ್‌ಮಿ 4 ಬಿಡುಗಡೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಈ ಫೋನಿನ ಬೆಲೆಯೂ ಅದೇ ಇರಲಿದೆ ಎನ್ನಲಾಗಿದೆ, ರೂ. 6,999ಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಇದರಲ್ಲಿ ಬದಲಾವಣೆಯಾದರು ಯಾವುದೇ ಆಶ್ಚರ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
After launching the mid-range Redmi Note 4 and entry-level Redmi 4A, Xiaomi prepares to announce another Redmi smartphone in India this month. to know more visit kannada.gizbot.com
Please Wait while comments are loading...
Opinion Poll

Social Counting