Subscribe to Gizbot

ರೂ.6,999ಕ್ಕೆ ಲಾಂಚ್ ಆದ ಶಿಯೋಮಿ ರೆಡ್‌ಮಿ 4: ಬೆಂಗಳೂರಿಗರಿಗೆ ಮಾತ್ರವೇ ಭರ್ಜರಿ ಆಫರ್..!! ಏನದು..?

Written By:

ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಮತ್ತೊಂದು ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಜೇಬಿಗೆ ಹೊರೆಯಾಗದೆ ಹೆಚ್ಚಿನ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

ರೂ.6,999ಕ್ಕೆ ಲಾಂಚ್ ಆದ ಶಿಯೋಮಿ ರೆಡ್‌ಮಿ 4

ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ಮೇಲೆ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಯೋಮಿ ಸಹ ಇದೇ ವಿಭಾಗದಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದು, ಇದೇ ಕಾರಣಕ್ಕೆ ಶಿಯೋಮಿ ಮೊನ್ನೆ ರೆಡ್‌ಮಿ 4A ಬಿಡುಗಡೆ ಮಾಡಿತ್ತು. ಅದೇ ಮಾದರಿಯಲ್ಲಿ ಇಂದು ರೆಡ್‌ಮಿ 4 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಮೂರು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ 4 ಬೆಲೆ:

ಶಿಯೋಮಿ ರೆಡ್‌ಮಿ 4 ಬೆಲೆ:

ಮೂರು ಆವೃತ್ತಿಯಲ್ಲಿ ರೆಡ್‌ಮಿ 4 ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, ಆರಂಭದಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.6,999 ಆಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.8,999 ಆಗಲಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.10,999 ಗಳಿಗೆ ದೊರೆಯಲಿದೆ.

ಬೆಂಗಳೂರಿಗೆ ಭರ್ಜರಿ ಆಫರ್ ನೀಡಿದ ಶಿಯೋಮಿ:

ಬೆಂಗಳೂರಿಗೆ ಭರ್ಜರಿ ಆಫರ್ ನೀಡಿದ ಶಿಯೋಮಿ:

ಶಿಯೋಮಿ ರೆಡ್‌ಮಿ 4 ಮೇ 23ರಿಂದ ಆನ್‌ಲೈನ್‌ ನಲ್ಲಿ ದೊರೆಯಲಿದೆ. ಅಮೆಜಾನ್ ನಲ್ಲಿ ಮಾತ್ರವೇ ಈ ಫೋನ್ ದೊರೆಯಲಿದೆ. ಆದರೆ ಬೆಂಗಳೂರಿನ ಜನರಿಗೆ ಶಿಯೋಮಿ ಕೊಡುಗೆಯೊಂದನ್ನು ನೀಡಿದ್ದು, ಮೇ. 20 ರಂದು ಶಿಯೋಮಿ ಬೆಂಗಳೂರಿನಲ್ಲಿ ತನ್ನ ಮೊದಲ ಆಫ್‌ಲೈನ ಶಾಖೆ ತೆರೆಯಲಿದ್ದು, ಅಲ್ಲಿ ಈ ಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಮೊದಲೆ ಮಿ.ಕಾಮ್‌ನಲ್ಲಿ ಫ್ರೀ ಬುಕ್ ಮಾಡಬೇಕಾಗಿದೆ.

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ಈ ಹಿಂದೆ ಲಾಂಚ್ ಮಾಡಿದ್ದ ರೆಡ್‌ಮಿ 4A ಮುಂದುವರೆದ ಭಾಗ ರೆಡ್‌ಮಿ 4 ಆಗಿದ್ದು, ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಕ್ಯಾಮೆರಾ ಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ಶಿಯೋಮಿ ರೆಡ್‌ಮಿ 4 ಡಿಸ್‌ಪ್ಲೇ:

ಶಿಯೋಮಿ ರೆಡ್‌ಮಿ 4 ಡಿಸ್‌ಪ್ಲೇ:

ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ 5 ಇಂದಿನ HD (720x1280 p) ಡಿಸ್‌ಪ್ಲೇ ಆಳವಡಿಸಲಾಗಿದ್ದು 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ಇದು ವಿಡಿಯೋ ನೋಡಲು, ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ಶಿಯೋಮಿ ರೆಡ್‌ಮಿ 4 ವೇಗದ ಕಾರ್ಯಚರಣೆ:

ಶಿಯೋಮಿ ರೆಡ್‌ಮಿ 4 ವೇಗದ ಕಾರ್ಯಚರಣೆ:

ಶಿಯೋಮಿ ರೆಡ್‌ಮಿ 4ನಲ್ಲಿ ವೇಗದ ಕಾರ್ಯಚರಣೆಗಾಗಿ ಆಕ್ಟಾ ಕೋರ್ ಸಾಪ್ ಡ್ರಾಗನ್ 420 ಪ್ರೋಸೆಸರ್ ಅಳವಡಿಸಲಾಗಿದ್ದು, ಅಲ್ಲದೇ 2GB/3GB/4GB RAM ಅನ್ನು ನೀಡಲಾಗಿದೆ. ಅಲ್ಲದೇ 16GB/32GB/64GB ಇಂಟರ್ನಲ್ ಮೆಮೊರಿಯೂ ಸಹ ಇದೆ. ಇದರೊಂದಿಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ.

ಶಿಯೋಮಿ ರೆಡ್‌ಮಿ 4 ಕ್ಯಾಮೆರಾ:

ಶಿಯೋಮಿ ರೆಡ್‌ಮಿ 4 ಕ್ಯಾಮೆರಾ:

ಶಿಯೋಮಿ ರೆಡ್‌ಮಿ 4 ಉತ್ತಮ ಕ್ಯಾಮೆರಾವನ್ನು ಹೊಂದಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ ಡ್ಯುಯಲ್ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ 5MP ಕ್ಯಾಮೆರಾ ಸಹ ಇದ್ದು, FHD ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.

ಶಿಯೋಮಿ ರೆಡ್‌ಮಿ 4 ಬ್ಯಾಟರಿ:

ಶಿಯೋಮಿ ರೆಡ್‌ಮಿ 4 ಬ್ಯಾಟರಿ:

ಶಿಯೋಮಿ ರೆಡ್‌ಮಿ 4 ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್ ಗಾಗಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಇದು ಎರಡು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಶಿಯೋಮಿ ರೆಡ್‌ಮಿ 4 ಇತರೆ ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ಇತರೆ ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4ನ ಪ್ರಮುಖ ವಿಶೇಷತೆ ಎಂದರೆ ಇದರಲ್ಲಿ ನಿಮ್ಮ ವೈಯಕ್ತಿಕ ಮತ್ತು ಪ್ರೋಫೆಷನ್ ಲೈಫಿಗಾಗಿ ಬೇರೆ ಬೇರೆ ಆಯ್ಕೆಗಳನ್ನು ನೀಡಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, MIUI8 ಕಾರ್ಯಚರಣೆಯನ್ನು ಹೊಂದಿದೆ. ಅಲ್ಲದೇ ಡ್ಯುಯಲ್ 4G ಸಿಮ್ ಸಪೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Xiaomi Redmi 4 has been released in India starting from Rs. 6,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot