Subscribe to Gizbot

ನೋಕಿಯಾ ದಾಖಲೆ ಅಳಿಸಿದ ಶಿಯೋಮಿ: ರೆಡ್‌ಮಿ 4 ದಾಖಲೆಯ ಮಾರಾಟ..!!

Written By:

ಚೀನಾ ಮೂಲದ ಶಿಯೋಮಿ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯೊಂದು ದೊರೆತಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ನೋಕಿಯಾ ಮೆರದಿದ್ದ ಮಾದರಿಯಲ್ಲಿ ಶಿಯೋಮಿ ಸಹ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಲಿದೆ.

ನೋಕಿಯಾ ದಾಖಲೆ ಅಳಿಸಿದ ಶಿಯೋಮಿ: ರೆಡ್‌ಮಿ 4 ದಾಖಲೆಯ ಮಾರಾಟ..!!

ಶಿಯೋಮಿ ಹೊಸದಾಗಿ ಲಾಂಚ್ ಮಾಡಿದ್ದ ರೆಡ್‌ಮಿ 4 ಸ್ಮಾರ್ಟ್ ಫೋನ್ ಬಿಡುಗಡೆಯಾದ 30 ದಿನದಲ್ಲಿ 1 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ 4 ವೈಶಿಷ್ಟ್ಯಗಳು:

ಶಿಯೋಮಿ ರೆಡ್‌ಮಿ 4 ವೈಶಿಷ್ಟ್ಯಗಳು:

 • ಫಿಂಗರ್ ಪ್ರಿಂಟ್ ಸ್ಕ್ಯಾನರ್
 • 5 HD (720x1280 p) ಡಿಸ್‌ಪ್ಲೇ
 • 2.5D ಕರ್ವಡ್ ಗ್ಲಾಸ್ ವಿನ್ಯಾಸ
 • ಆಕ್ಟಾ ಕೋರ್ ಸಾಪ್ ಡ್ರಾಗನ್ 420 ಪ್ರೋಸೆಸರ್
 • 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

 • ಹಿಂಭಾಗದಲ್ಲಿ 13 MP ಕ್ಯಾಮೆರಾ LED ಫ್ಲಾಷ್ ಲೈಟ್
 • ಮುಂಭಾಗದಲ್ಲಿ 5MP ಕ್ಯಾಮೆರಾ
 • 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
 • MIUI8 ಕಾರ್ಯಚರಣೆಯನ್ನು ಹೊಂದಿದೆ.
 • ಡ್ಯುಯಲ್ 4G ಸಿಮ್ ಸಪೋರ್ಟ್ ಮಾಡಲಿದೆ.
ಮೂರು ಆವೃತ್ತಿಯಲ್ಲಿ ರೆಡ್‌ಮಿ 4:

ಮೂರು ಆವೃತ್ತಿಯಲ್ಲಿ ರೆಡ್‌ಮಿ 4:

 • 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.6,999
 • 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.8,999
 • 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.10,999 ಆಗಿದೆ.

ವಿಡಿಯೋ ನೋಡಿ:

ಸದ್ಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ರೆಡ್‌ಮಿ 4 ಸ್ಮಾರ್ಟ್‌ಫೋನ್ ಹೇಗೆದೆ ಎಂಬುದರ ಮೊದಲ ಪರಿಚಯವನ್ನು ಮಾಡುವ ವಿಡಿಯೋ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This is a huge milestone for the company, which has been breaking records ever since it started its journey in the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot