Subscribe to Gizbot

ಇತಿಹಾಸ ಸೃಷ್ಟಿಸಿದ ಶಿಯೋಮಿ 4A ಸ್ಮಾರ್ಟ್‌ಫೋನ್‌ಗೆ ಇಂದು ಪ್ರೀ ಬುಕ್ ಅವಕಾಶ!!

Written By:

ಭಾರತೀಯ ಮೊಬೈಲ್ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ, ಕೇಲವ 8 ನಿಮಿಷದಲ್ಲಿ ಒಟ್ಟು 2.5 ಲಕ್ಷ ಸ್ಮಾರ್ಟ್‌ಫೋನ್‌ಗಳು ಬೀಕರಿಯಾದ ಮೊದಲ ಮೊಬೈಲ್ ಶಿಯೋಮಿ 4A ಸ್ಮಾರ್ಟ್‌ಫೋನ್ ಖರೀದಿಸಲು ನಿಮಗೆ ಸಾಧ್ಯವಾಗಿಲ್ಲವೆ? ಹಾಗಿದ್ದರೆ ಇಂದು ಅದನ್ನು ಮುಂಗಡ ಬುಕ್ ಮಾಡಿ.!!

ಹೌದು, ಶಿಯೋಮಿ ಕಂಪನಿ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆ ಮಾಡಿರುವ ಶಿಯೋಮಿ 4 ಫೋನ್ ಇಂದು ಶಿಯೋಮಿಯ ಅಧಿಕೃತ ವೆಬ್‌ಸೈಟ್ MI.COMನಲ್ಲಿ ಮುಂಗಡ ಆರ್ಡರ್‌ಗೆ ಲಭ್ಯವಿದ್ದು, 12 ಗಂಟೆಗೆ ಶಿಯೋಮಿ 4A ಬುಕ್ ಮಾಡಿ. ಮತ್ತು ಸ್ಮಾರ್ಟ್‌ಫೋನ್ ವಿಶೇಷತೆ ತಿಳಿಯಲು ಕೆಳಗಿನ ಸ್ಲೈಡರ್‌ನಲ್ಲಿ ನೋಡಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ HD ಡಿಸ್‌ಪ್ಲೇ

5 ಇಂಚಿನ HD ಡಿಸ್‌ಪ್ಲೇ

ರೆಡ್‌ಮಿ 4 A ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಗುಣಮಟ್ಟವನ್ನು ಇದು ಹೊಂದಿದೆ. ಮೊನ್ನೆ ಲಾಂಚ್ ಆದ ನೋಟ್ 4 ನಲ್ಲಿಯೂ ಇದೇ ಮಾದರಿಯ ಸ್ಕ್ರಿನ್ ಇರುವುದನ್ನು ನಾವು ಕಾಣಬಹುದಾಗಿದೆ.

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ವೇಗದ ಕಾರ್ಯ ನಿರ್ವಹಣೆಗಾಗಿ ರೆಡ್‌ಮಿ 4 A ಪೋನಿನಲ್ಲಿ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅಳವಡಿಸಲಾಗಿದ್ದು 1.4Ghz ವೇಗವನ್ನು ಹೊಂದಿದೆ. 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

13 MP ಕ್ಯಾಮೆರಾ:

13 MP ಕ್ಯಾಮೆರಾ:

ರೆಡ್‌ಮಿ 4 A ಪೋನಿನಲ್ಲಿ LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ MIUI8 ಸಹ ಇದರಲಿದೆ.

3120 mAh ಬ್ಯಾಟರಿ:

3120 mAh ಬ್ಯಾಟರಿ:

ರೆಡ್‌ಮಿ 4 A ಪೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ. ಅಲ್ಲದೇ ಈ ಪೋನನ್ನು ಕೇವಲ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 7 ದಿನ ಬ್ಯಾಟರಿ ಬಾಳಿಕೆ ಬರಲಿದೆಯಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Xiaomi Redmi 4A and Redmi Note 4 will be up for pre-order on Mi.com, and here's what you need to know
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot