Home
ಮೊಬೈಲ್

ರೆಡ್‌ಮಿ 4A ಇಂದು ಸೇಲ್..ಡಿಜಿಟಲ್ ಭಾರತಕ್ಕೆ ಸ್ಫೂರ್ತಿ ಈ ಸ್ಮಾರ್ಟ್‌ಫೋನ್!!

ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಇದೋಂದೆ!!

By Bhaskar N J

ಡಿಜಿಟಲ್ ಭಾರತಕ್ಕೆ ಸಹಕಾರಿಯಾಗುವಂತಿರುವ ಶಿಯೋಮಿ ಕಂಪನಿ ರೆಡ್‌ಮಿ 4A ಸ್ಮಾರ್ಟ್‌ಫೋನ್ ಇಂದು ಮಾರಾಟಕ್ಕಿದೆ. ಸ್ಮಾರ್ಟ್‌ಫೋನ್ ಅನ್ನು ಶಿಯೋಮಿಯ (MI.com) ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್ ಶಾಪಿಂಗ್ ತಾಣದಲ್ಲಿ ಮೊದಲು ಬಿಡುಗಡೆಗೊಳಿಸಿದ್ದು, ಇಂದಿನಿಂದ ಫ್ಲಾಷ್ ಸೇಲ್ ಆರಂಭವಾಗಲಿದೆ.

15,000 ರೂ. ಒಳಗಿನ ಟಾಪ್ 10 ಸ್ಮಾರ್ಟ್‌ಫೋನ್ ಲೀಸ್ಟ್!! ಯಾವುದು ನಿಮ್ಮ ಬೆಸ್ಟ್?

5 ಇಂಚಿನ HD ಡಿಸ್‌ಪ್ಲೇ 720x1280p ರೆಸಲ್ಯೂಷನ್ ಗುಣಮಟ್ಟ ಹೊಂದಿರುವ ರೆಡ್‌ಮಿ 4A ಸ್ಮಾರ್ಟ್‌ಫೋನ್ 4G ಕನೆಕ್ಟಿವಿಟಿ ಹೊಂದಿದ್ದು, ಕೇವಲ 5999 ರೂಪಾಯಿಗಳ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.!! ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಇದೋಂದೆ ಆಗಿದ್ದು, ಬೇರೆ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ವೇಗದ ಕಾರ್ಯ ನಿರ್ವಹಣೆಗಾಗಿ ರೆಡ್‌ಮಿ 4 A ಪೋನಿನಲ್ಲಿ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅಳವಡಿಸಲಾಗಿದ್ದು 1.4Ghz ವೇಗವನ್ನು ಹೊಂದಿದೆ. 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

 13 MP ಕ್ಯಾಮೆರಾ:

13 MP ಕ್ಯಾಮೆರಾ:

ರೆಡ್‌ಮಿ 4 A ಪೋನಿನಲ್ಲಿ LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ MIUI8 ಸಹ ಇದರಲ್ಲಿದೆ.

3120 mAh ಬ್ಯಾಟರಿ:

3120 mAh ಬ್ಯಾಟರಿ:

ರೆಡ್‌ಮಿ 4 A ಪೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ.ಅಲ್ಲದೇ ಈ ಪೋನನ್ನು ಕೇವಲ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಬಹುದು

2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಬಹುದು

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಪೋನುಗಳಲ್ಲಿ ಎರಡು ಹೈಬ್ರಿಡ್ 2 ಸಿಮ್ ಕಾರ್ಡ್ ಹಾಕಬಹುದಾಗಿದೆ. ಆದರೆ ಮೊಮೊರಿ ಕಾರ್ಡ್ ಹಾಕಲು ಸಾಧ್ಯವಿರುವುದಿಲ್ಲ. ಒಂದು ಸಿಮ್ ಮತ್ತು ಮೊಮೊರಿ ಕಾರ್ಡ್ ಹಾಕಬಹುದಾಗಿರುತ್ತದೆ. ಆದರೆ ರೆಡ್‌ಮಿ 4 A ಪೋನಿನಲ್ಲಿ ಒಮ್ಮೆಗೆ 2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

Best Mobiles in India

English summary
Redmi 4A!!..Here's all you need to know. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+