Home
ಮೊಬೈಲ್

ಟಾಪ್‌ಎಂಡ್ ಫೋನ್‌ ನಾಚಿಸುವಂತಿದೆ ನೂತನ ರೆಡ್‌ಮಿ 5 ಸ್ಮಾರ್ಟ್‌ಫೋನ್: ಬೆಲೆ ಎಷ್ಟು..?

By Srinidhi

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ಚೀನಾ ಮೂಲದ ಶಿಯೋಮಿ, ಬಜೆಟ್ ಬೆಲೆಯಲ್ಲಿ ಟಾಪ್ ಎಂಡ್ ವಿಶೇಷತೆಗಳಿರುವ ರೆಡ್‌ಮಿ 5 ಅನ್ನು ಭಾರತೀಯ ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗದಲ್ಲಿಯೂ ತನ್ನದೇ ಸ್ಮಾರ್ಟ್‌ಫೋನ್‌ಗಳ ಅಬ್ಬರ ಇರುವಂತೆ ನೋಡಿಕೊಂಡಿದೆ.

ಟಾಪ್‌ಎಂಡ್ ಫೋನ್‌ ನಾಚಿಸುವಂತಿದೆ ನೂತನ ರೆಡ್‌ಮಿ 5 ಸ್ಮಾರ್ಟ್‌ಫೋನ್: ಬೆಲೆ ಎಷ್ಟು.

ಮಾರ್ಚ್ 14 ರಂದು ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನ್ ಎಲ್ಲಾ ವಿಧದಲ್ಲಿಯೂ ಬೆಸ್ಟ್ ಎನ್ನಬಹುದಾಗಿದ್ದು, ವೇಗದ ಪ್ರೋಸೆಸರ್, ಉತ್ತಮ ಕ್ಯಾಮೆರಾ, ಹೊಸ ಮಾದರಿಯ ವಿನ್ಯಾಸ, ಫುಲ್‌ ಸ್ಕ್ರಿನ್ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಸೇರಿದಂತೆ ಟಾಪ್ ವಿಶೇಷತೆಗಳನ್ನು ಒಳಗೊಂಡಿದ್ದು, ಬಜೆಟ್ ಬೆಲೆಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ಮೊದಲ ಸೇಲ್:

ಮೊದಲ ಸೇಲ್:

ರೆಡ್‌ಮಿ 5 ಸ್ಮಾರ್ಟ್‌ಫೋನ್ ಅಮೆಜಾನ್ ನಲ್ಲಿ ಏಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದ್ದು, ಇದರೊಂದಿಗೆ ಮಿ.ಕಾಮ್ ಮತ್ತು ಮಿ ಸ್ಟೋರ್‌ಗಳಲ್ಲಿಯೂ ಕಾಣಿಸಿಕೊಳ್ಳಲಿದೆ. ಮಾರ್ಚ್ 20 ರಂದು ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್‌ ಆಗಲಿದೆ.

ಬಜೆಟ್ ಬೆಲೆಯಲ್ಲಿ ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಬಜೆಟ್ ಬೆಲೆಯಲ್ಲಿ ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ರೆಡ್‌ಮಿ 5 ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ದೊರೆಯುತ್ತಿದ್ದರು ಸಹ ಫುಲ್ ಸ್ಕ್ರಿನ್ ವಿನ್ಯಾಸದ್ದಾಗಿದ್ದು, 18:9 ಅನುಪಾತದ 5.7 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇ ಇದಾಗಿದೆ. ಅಲ್ಲದೇ ಸ್ಲಿಮ್ ವಿನ್ಯಾಸದಲ್ಲಿದ್ದು, ಇದು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ರೆಡ್‌ಮಿ 5 ಸ್ಮಾರ್ಟ್‌ಫೋನ್‌ನಲ್ಲಿ ಶಿಯೋಮಿ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅಳವಡಿಸಿದ್ದು, ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದ ಹಾಗಿದೆ. ಉತ್ತಮವಾದ ಗೇಮ್‌ಗಳನ್ನು ಸುಲಭವಾಗಿ ಆಡಬಹುದಾಗಿದೆ.

ಬೆಸ್ಟ್ ಕ್ಯಾಮೆರಾ:

ಬೆಸ್ಟ್ ಕ್ಯಾಮೆರಾ:

ರೆಡ್‌ಮಿ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದು ಲೋ ಲೈಟ್‌ನಲ್ಲಿಯೂ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ. ಇದರೊಂದಿಗೆ LED ಫ್ಲಾಷ್‌ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ LED ಫ್ಲಾಷ್ ಲೈಟ್ ಅನ್ನು ಶಿಯೋಮಿ ನೀಡಿದೆ.

ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

ಚಾರ್ಜ್ ಆಗುವ ಸಮಯದಲ್ಲಿ ಬಿಸಿಯಾಗುವುದನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರುವ ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ 3300mAh ಬ್ಯಾಟರಿಯನ್ನು ಅವಳವಸಿದ್ದು, ಇದು ಎರಡು ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ.

ಮೂರು ಆವೃತ್ತಿ:

ಮೂರು ಆವೃತ್ತಿ:

ರೆಡ್‌ಮಿ 5 ಸ್ಮಾರ್ಟ್‌ಫೋನ್ ನಲ್ಲಿ ಶಿಯೋಮಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಮೂರು ಆವೃತ್ತಿಯಲ್ಲಿ ಮಾರಾಟವಾಗುವ ಈ ಸ್ಮಾರ್ಟ್‌ಫೋನ್ 2GB/3GB/4G RAM ಮತ್ತು 16GB/32GB/64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಬೆಲೆಗಳು:

ಬೆಲೆಗಳು:

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999ಕ್ಕೆ, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999ಕ್ಕೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

Best Mobiles in India

English summary
Xiaomi Redmi 5 to launch exclusively on Amazon India; features, availability. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+