Subscribe to Gizbot

ಶಿಯೋಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಇನ್ನು ಫ್ಲಾಷ್ ಸೇಲಿಗೆ ಕಾಯಬೇಕಿಲ್ಲ...!

Written By:

ಮಾರ್ಚ್ 14 ರಂದು ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬೆಸ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ವೇಗದ ಪ್ರೋಸೆಸರ್, ಉತ್ತಮ ಕ್ಯಾಮೆರಾ, ಹೊಸ ಮಾದರಿಯ ವಿನ್ಯಾಸ, ಫುಲ್‌ ಸ್ಕ್ರಿನ್ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಸೇರಿದಂತೆ ಟಾಪ್ ವಿಶೇಷತೆಗಳನ್ನು ಒಳಗೊಂಡಿದ್ದ ಫೋನ್ ಇನ್ನು ಮುಂದೆ ಎಲ್ಲಾ ಸಮಯದಲ್ಲಿಯೂ ಮಾರಾಟಕ್ಕೆ ಲಭ್ಯವಿರಲಿದೆ.

ಶಿಯೋಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಇನ್ನು ಫ್ಲಾಷ್ ಸೇಲಿಗೆ ಕಾಯಬೇಕಿಲ್ಲ...!

ಈ ಮೊದಲು ಕೇವಲ ಅಮೆಜಾನ್ ಮತ್ತು ಮಿ.ಕಾಮ್ ನಲ್ಲಿ ಮಾತ್ರವೇ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳುತಿತ್ತು. ಆದರೆ ಇಂದಿನಿಂದ ಈ ಸ್ಮಾರ್ಟ್‌ಫೋನ್ ಅಮೆಜಾನ್ ವೆಬ್ ಮತ್ತು ಆಪ್ ನಲ್ಲಿ ಹಾಗೂ ಮಿ,ಕಾಮ್ ಮತ್ತು ಮಿ ಆಪ್‌ನಲ್ಲಿ ಮಾರಾಟವಾಗಲಿದೆ.

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999ಕ್ಕೆ, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999ಕ್ಕೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ಶಿಯೋಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಇನ್ನು ಫ್ಲಾಷ್ ಸೇಲಿಗೆ ಕಾಯಬೇಕಿಲ್ಲ...!

ರೆಡ್‌ಮಿ 5 ಸ್ಮಾರ್ಟ್‌ಫೋನ್ ನಲ್ಲಿ ಫುಲ್ ಸ್ಕ್ರಿನ್ ವಿನ್ಯಾಸದ 18:9 ಅನುಪಾತದ 5.7 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅಳವಡಿಸಿದ್ದು, ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದ ಹಾಗಿದೆ.

ರೆಡ್‌ಮಿ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾದ ಜೊತೆಗೆ LED ಫ್ಲಾಷ್‌ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ.

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ 3300mAh ಬ್ಯಾಟರಿಯನ್ನು ಅಳವಸಿದ್ದು, ಮೂರು ಆವೃತ್ತಿಯಲ್ಲಿ ಮಾರಾಟವಾಗುವ ಈ ಸ್ಮಾರ್ಟ್‌ಫೋನ್ 2GB/3GB/4G RAM ಮತ್ತು 16GB/32GB/64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

English summary
Xiaomi Redmi 5 Open Sale Now Permanent on Amazon India, Mi.com. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot