ಇಂದೇ ಮೊದಲು ರೆಡ್‌ಮಿ 6 ಫ್ಲಾಷ್ ಸೇಲ್..! ಏಕೆ ಖರೀದಿಸಬೇಕು..?
ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯನ್ನು ಸಾಧಿಸಲು ಒಂದೇ ಮಾದರಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಲಾಂಚ್ ಮಾಡಿದನ್ನು ನಿಮಗೆ ತಿಳಿಸಿದ್ದವು. ಬಳಕೆದಾರರಿಗೆ ಬಜೆಟ್‌ಗೆ ತಕ್ಕ ಹಾಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ಈ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಶಿಯೋಮಿ ರೆಡ್‌ಮಿ 6A, ರೆಡ್‌ಮಿ 6 ಮತ್ತು ರೆಡ್‌ಮಿ 6 ಪ್ರೋಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಮೊದಲಿಗೆ ಇಂದು ಮಧ್ಯಾಹ್ನ ರೆಡ್‌ಮಿ 6 ಸ್ಮಾರ್ಟ್‌ಫೋನ್ 12 ಗಂಟೆಗೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ರೆಡ್‌ಮಿ 6 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ನಲ್ಲಿ ಮಾರಾಟವಾಗಲಿದ್ದು, ಬಜೆಟ್ ಬೆಲೆಗಿಂತ ಕೊಂಚ ಹೆಚ್ಚಿನ ಬೆಲೆಗೆ ಮಾರಾಟವಾಗಲಿದ್ದು, ಬಳಕೆದಾರರಿಗೆ ಉತ್ತಮ ಆಯ್ಕೆಗಳನ್ನು ನೀಡಲಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ರೆಡ್‌ಮಿ 5 ಸ್ಮಾರ್ಟ್‌ಫೋನಿನ ಮುಂದುವರೆದ ಆವೃತ್ತಿಯಾಗಿದ್ದು, ಹೊಸ ವಿಷೇಷತೆಗಳೊಂದಿಗೆ ಕಾಣಿಸಿಕೊಂಡಿದೆ.

ಫುಲ್‌ಸ್ಕ್ರಿನ್ ಡಿಸ್‌ಪ್ಲೇ:
ರೆಡ್‌ಮಿ 6 ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.45 ಇಂಚಿನ HD+ ಡಿಸ್‌ಪ್ಲೇಯನ್ನ ಕಾಣಬಹುದಾಗಿದೆ. ಇದು ಹಿಂದಿನ ರೆಡ್‌ಮಿ 5 ಸ್ಮಾರ್ಟ್‌ಫೋನ್‌ಗಿಂತಲೂ ದೊಡ್ಡದಾಗಿದೆ ಎನ್ನಬಹುದಾಗಿದೆ. ಇದು ಪುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿದ್ದು, ಹಿಂದಿನ ಫೋನ್‌ಗಿಂತಲೂ ವಿನ್ಯಾಸದಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ.

ಡ್ಯುಯಲ್ ಕ್ಯಾಮೆರಾ ಇದೆ:
ರೆಡ್‌ಮಿ 6 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 MP + 5 MP ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ AI ಫೇಸ್ ಲಾಕ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳಲು AI ಪೋಟ್ರೆಟ್ ಅನ್ನು ಆಯ್ಕೆ ಮಾಡಬಹುದಾಗಿದೆ.

ವೇಗದ ಪ್ರೋಸೆಸರ್:
ಇದೇ ಮೊದಲ ಬಾರಿಗೆ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಬಿಟ್ಟು ಹೆಲಿಯೊ P22 ಪ್ರೋಸೆಸರ್ ಅನ್ನು ರೆಡ್‌ಮಿ 6 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲು ಮುಂದಾಗಿದೆ, ಇದರೊಂದಿಗೆ ಕಾರ್ಟೆಕ್ಸ್ A53 CPUವನ್ನು ನೀಡಲಾಗಿದೆ. ಆಕ್ಟಾ ಕೋರ್ ಪ್ರೋಸೆಸರ್ ಇದಾಗಿದೆ. ಇದು 2.0 GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಒರಿಯೋ:
ರೆಡ್‌ಮಿ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9.6 ಅನ್ನು ನೋಡಬಹುದಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ VoLTE ಸಪೋರ್ಟ್ ಮಾಡಲಿದೆ. ಅಲ್ಲದೇ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.

ರೆಡ್‌ಮಿ 6 ನಾಲ್ಕು ಬಣ್ಣದಲ್ಲಿ:
ಒಟ್ಟು ನಾಲ್ಕು ಬಣ್ಣದಲ್ಲಿ ರೆಡ್‌ಮಿ 6 ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಬ್ಲಾಕ್, ಗೊಲ್ಡ್, ರೋಸ್ ಗೋಲ್ಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೋಡಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಬೆಲೆಗಳು:
ರೆಡ್‌ಮಿ 6 ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.7999ಕ್ಕೆ ಮಾರಾಟವಾಗಲಿದೆ. 3 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.9499ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದೆ.


Click it and Unblock the Notifications








