ಬಜೆಟ್ ಬೆಲೆಯ ಬೊಂಬಾಟ್ ಫೋನ್ ರೆಡ್‌ಮಿ 6 ಸ್ಮಾರ್ಟ್‌ಫೋನ್..!

    How to use Xiaomi Mi Bluetooth Audio Receiver - KANNADA GIZBOT

    ಒಂದೇ ಮಾದರಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಹಂತ ಹಂತವಾಗಿ ಬಜೆಟ್ ಹಾಗೂ ಬೆಲೆಯನ್ನು ಏರಿಕೆ ಮಾಡುತ್ತಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಬಳಕೆದಾರರಿಗೆ ಬಜೆಟ್‌ಗೆ ತಕ್ಕ ಹಾಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ಈ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಶಿಯೋಮಿ ಯೋಜನೆಯನ್ನು ರೂಪಿಸಿದೆ. ರೆಡ್‌ಮಿ 6A, ರೆಡ್‌ಮಿ 6 ಮತ್ತು ರೆಡ್‌ಮಿ 6 ಪ್ರೋ ಲಾಂಚ್ ಆಗಿದೆ.

    ಬಜೆಟ್ ಬೆಲೆಯ ಬೊಂಬಾಟ್ ಫೋನ್ ರೆಡ್‌ಮಿ 6 ಸ್ಮಾರ್ಟ್‌ಫೋನ್..!

    ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್ ಆಗಿ ಸೇಲ್‌ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯೂ ಮುಂದಿದೆ. ರೆಡ್‌ಮಿ 6 ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿದುಕೊಳ್ಳುವ. ಬಜೆಟ್ ಬೆಲೆಗಿಂತ ಹೊಚ ಹೆಚ್ಚಿನ ಬೆಲೆಗೆ ಮಾರಾಟವಾಗಲಿದ್ದು, ಬಳಕೆದಾರರಿಗೆ ಉತ್ತಮ ಆಯ್ಕೆಗಳನ್ನು ನೀಡಲಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ರೆಡ್‌ಮಿ 5 ಸ್ಮಾರ್ಟ್‌ಫೋನಿನ ಮುಂದುವರೆದ ಆವೃತ್ತಿಯಾಗಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಡ್ಯುಯಲ್ ಕ್ಯಾಮೆರಾ:

    ರೆಡ್‌ಮಿ 6 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 MP + 5 MP ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ AI ಫೇಸ್‌ ಲಾಕ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳಲು AI ಪೋಟ್ರೆಟ್ ಅನ್ನು ಕ್ಲಿಕ್ ಮಾಡಬಹುದಾಗಿದೆ.

    5.45 ಇಂಚಿನ HD+ ಡಿಸ್‌ಪ್ಲೇ:

    ರೆಡ್‌ಮಿ 6 ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.45 ಇಂಚಿನ HD+ ಡಿಸ್‌ಪ್ಲೇಯನ್ನ ಕಾಣಬಹುದಾಗಿದೆ. ಇದು ಹಿಂದಿನ ಸ್ಮಾರ್ಟ್‌ಫೋನ್‌ಗಿಂತಲೂ ದೊಡ್ಡದಾಗಿದೆ ಎನ್ನಬಹುದಾಗಿದೆ. ಇದು ಪುಲ್‌ ಸ್ಕ್ರಿನ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಹಿಂದಿನ ಫೋನ್‌ಗಿಂತಲೂ ವಿನ್ಯಾಸದಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ.

    ಪ್ರೋಸೆಸರ್;

    ಇದೇ ಮೊದಲ ಬಾರಿಗೆ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಬಿಟ್ಟು ಹೆಲಿಯೊ P22 ಪ್ರೋಸೆಸರ್ ಅನ್ನು ರೆಡ್‌ಮಿ 6 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲು ಮುಂದಾಗಿದೆ ಇದರೊಂದಿಗೆ ಕಾರ್ಟೆಕ್ಸ್ A53 CPUವನ್ನು ನೀಡಲಾಗಿದೆ. ಆಕ್ಟಾ ಕೋರ್ ಪ್ರೋಸೆಸರ್ ಇದಾಗಿದೆ. ಇದು 2.0 GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

    ಆಂಡ್ರಾಯ್ಡ್ ಒರಿಯೋ:

    ರೆಡ್‌ಮಿ 6 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9.6 ಅನ್ನು ನೋಡಬಹುದಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ VoLTE ಸಪೋರ್ಟ್ ಮಾಡಲಿದೆ. ಅಲ್ಲದೇ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.

    ನಾಲ್ಕು ಬಣ್ಣ:

    ಒಟ್ಟು ನಾಲ್ಕು ಬಣ್ಣದಲ್ಲಿ ರೆಡ್‌ಮಿ 6 ಸ್ಮಾರ್ಟ್‌ಫೋನ್‌ ಕಾಣಿಸಿಕೊಂಡಿದೆ. ಬ್ಲಾಕ್, ಗೊಲ್ಡ್, ರೋಸ್ ಗೋಲ್ಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೋಡಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

    ಬೆಲೆ:

    ರೆಡ್‌ಮಿ 6 ಸ್ಮಾರ್ಟ್‌ಫೋನ್‌ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.7999ಕ್ಕೆ ಮಾರಾಟವಾಗಲಿದೆ. 3 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.9499ಕ್ಕೆ ಮಾರಾಟವಾಗಲಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    Xiaomi Redmi 6 launched in India. to know more visit kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more