Home
ಮೊಬೈಲ್

ಮಾರುಕಟ್ಟೆಯಲ್ಲಿ ಹೊಸ ಸಂಚಲನ: ಶಿಯೋಮಿ 6 ಪ್ರೋ ಸ್ಮಾರ್ಟ್ ಫೋನ್ ವಿಶೇಷತೆ..!

By Srinidhi

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ, ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಸದ್ದಿಲ್ಲದೇ ತಯಾರಿಯನ್ನು ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್ ಮಿ ನೋಟ್ 5 ಪ್ರೋ ಸ್ಮಾರ್ಟ್ ಫೋನ್ ಭಾರೀ ಬೇಡಿಕೆಯಲ್ಲಿದ್ದು, ಇದನ್ನು ಮೀರಿಸುವ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಎಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಶಿಯೋಮಿ ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಜೂನ್ 25ಕ್ಕೆ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್ ಮಿ 6 ಮತ್ತು ರೆಡ್ ಮಿ 6A ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಂಡಿದ್ದು, ಇದರ ಮುಂದುವರೆದ ಭಾಗವಾಗಿ ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.

ಹೊಸ ಸಂಚಲನ: ಶಿಯೋಮಿ 6 ಪ್ರೋ ಸ್ಮಾರ್ಟ್ ಫೋನ್ ವಿಶೇಷತೆ..!

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್

ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಆಗುತ್ತಿರುವ 19:9 ಅನುಪಾತದ ಡಿಸ್ ಪ್ಲೇಯನ್ನು ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ. ಈ ಸ್ಮಾರ್ಟ್ ಫೋನಿನಲ್ಲಿ 5.84 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇ ಇದಾಗಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ

ಎರಡು ಆವೃತ್ತಿಯಲ್ಲಿ ಲಭ್ಯ

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದ್ದು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ಇದಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

ಆಂಡ್ರಾಯ್ಡ್ ಒರಿಯೋ

ಆಂಡ್ರಾಯ್ಡ್ ಒರಿಯೋ

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 10 ಸಹ ಇರಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.

ಕ್ಯಾಮೆರಾ

ಕ್ಯಾಮೆರಾ

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾ ಇಲ್ಲ. ಬದಲಾಗಿ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಹೊಂದಿದ್ದು, ಮುಂಭಾಗದಲ್ಲಿ ಸೆಲ್ಪಿಗಾಗಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ ನೋಚ್ ಸಹ ಕಾಣಿಸಿಕೊಳ್ಳಲಿದೆ.

ವೇಗದ ಪ್ರೋಸೆಸರ್

ವೇಗದ ಪ್ರೋಸೆಸರ್

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಇದು ಗೇಮ್ ಆಡಲು ಮತ್ತು ಮಲ್ಟಿ ಟಾಸ್ಕಿಂಗ್ ಮಾಡಲು ಸಹಾಯ ಮಾಡಲಿದೆ. ಆದರೆ ಈ ಸ್ಮಾರ್ಟ್ ಫೋನ್ ಬೆಲೆಗಳ ಕುರಿತು ಯಾವುದೇ ಮಾಹಿತಿ ಲೀಕ್ ಆಗಿಲ್ಲ.

Best Mobiles in India

English summary
Xiaomi redmi 6 pro confirms 19:9 display. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+