TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮೊದಲ ಫ್ಲಾಷ್ ಸೇಲ್‌ನಲ್ಲಿ ರೆಡ್‌ಮಿ 6 ಪ್ರೋ: ಜೇಬಿಗೆ ಲಾಭ ಹೇಗೆ..?
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುವ ಸಲುವಾಗಿ ಮತ್ತು ತನಗೆ ಸ್ಪರ್ಧೆಯನ್ನು ನೀಡುತ್ತಿರುವ ರಿಯಲ್ ಮಿ ಸ್ಮಾರ್ಟ್‌ಫೋನ್ ಅನ್ನು ಮಟ್ಟ ಹಾಕುವ ಸಲುವಾಗಿ ಶಿಯೋಮಿ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಇಂದು ಮೊದಲ ಬಾರಿಗೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಂಡಿದೆ.
ಹೊಸ ಮಾದರಿಯ ನೋಚ್ ಡಿಸ್‌ಪ್ಲೇ ಹೊಂದಿರುವ ರೆಡ್‌ಮಿ 6 ಸರಣಿಯ ಟಾಪ್ ಎಂಡ್ ಫೋನ್ ಆಗಿ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಫ್ಲಾಸ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಮಿ. ಕಾಮ್‌ನಲ್ಲಿಯೂ ಮಾರಾಟವಾಗಲಿದೆ ಎನ್ನಲಾಗಿದೆ.
ಬೆಲೆ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.10,999ಕ್ಕೆ ಮಾರಾಟವಾಗಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.12,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದೆ. ಮಿ.ಕಾಮ್ ಮತ್ತು ಅಮೆಜಾನ್ ನಲ್ಲಿ ಮಧ್ಯಾಹ್ನ 12ಕ್ಕೆ ಫಸ್ಟ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.
ನೋಚ್ ಡಿಸ್‌ಪ್ಲೇ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನಿನಲ್ಲಿ 19:9 ಅನುಪಾತದ 5.85 ಇಂಚಿನ FHD+ ಡಿಸ್‌ಪ್ಲೇಯನ್ನ ಕಾಣಬಹುದಾಗಿದೆ. ಮೂರು ಸ್ಮಾರ್ಟ್‌ಫೋನ್‌ಗಳಲ್ಲೇ ಇದು ಉತ್ತಮವಾದ ಡಿಸ್‌ಪ್ಲೇ ಎನ್ನಲಾಗಿದ್ದು, ಅಲ್ಲದೇ ನೋಚ್ ಅನ್ನು ಇದರಲ್ಲಿ ನೀಡಲಾಗಿದೆ. ವಿನ್ಯಾಸದಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಇದಲ್ಲದೇ ನೋಚ್ ಹೈಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ಪ್ರೀಮಿಯಮ್ ಅಲ್ಯೂಮಿನಿಯಮ್ ಬಾಡಿ ಹೊಂದಿದೆ.
ಡ್ಯುಯಲ್ ಕ್ಯಾಮೆರಾ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 MP ಸೋನಿ + 5 MP ಸ್ಯಾಮ್ ಸಂಗ್ ಲೆನ್ಸ್ ಅನ್ನು ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ AI ಫೇಸ್ ಲಾಕ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳಲು AI ಪೋಟ್ರೆಟ್ ಅನ್ನು ನೀಡಲಾಗಿದೆ.
ವೇಗದ ಪ್ರೋಸೆಸರ್:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 623 ಪ್ರೊಸೆಸರ್ ಅಳವಡಿಸಲಾಗಿದೆ. ಇದಲ್ಲೇ ಉತ್ತಮವಾದ CPUವನ್ನು ನೀಡಲಾಗಿದೆ. ಆಕ್ಟಾ ಕೋರ್ ಪ್ರೋಸೆಸರ್ ಇದಾಗಿದೆ. ಇದು 2.0 GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಆಂಡ್ರಾಯ್ಡ್ ಒರಿಯೋ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9.6 ಅನ್ನು ನೋಡಬಹುದಾಗಿದೆ. ಅಲ್ಲದೇ 4000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ VoLTE ಸಪೋರ್ಟ್ ಮಾಡಲಿದೆ. ಅಲ್ಲದೇ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.
ನಾಲ್ಕು ಬಣ್ಣ:
ಒಟ್ಟು ನಾಲ್ಕು ಬಣ್ಣದಲ್ಲಿ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಬ್ಲಾಕ್, ಗೊಲ್ಡ್, ರೆಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೋಡಬಹುದಾಗಿದೆ. ಅಲ್ಲದೇ ಒಂದು ಸ್ಲಿಮ್ ಕೇಸ್ ಅನ್ನು ನೀಡಲಾಗುತ್ತಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.