ಟಾಪ್ ಎಂಡ್ ಫೋನ್‌ಗಳಿಗೂ ಸೆಡ್ಡು ಹೊಡೆಯುವ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್..!
ಮಾರುಕಟ್ಟೆಯಲ್ಲಿ ಹೊಸ ಮಾದರಿಯ ನೋಚ್ ಡಿಸ್‌ಪ್ಲೇ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ರೆಡ್‌ಮಿ 6 ಸರಣಿಯ ಟಾಪ್ ಎಂಡ್ ಫೋನ್ ಆಗಿ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಹೊಸ ಮಾದರಿಯ ಆಯ್ಕೆಗಳೊಂದಿಗೆ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ ಎನ್ನಲಾಗಿದೆ.

ಒಂದೇ ಮಾದರಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಶಿಯೋಮಿ ಯೋಜನೆಯನ್ನು ರೂಪಿಸಿದೆ. ರೆಡ್‌ಮಿ 6A, ರೆಡ್‌ಮಿ 6 ಮತ್ತು ರೆಡ್‌ಮಿ 6 ಪ್ರೋ ಲಾಂಚ್ ಆಗಿದೆ. ಬಳಕೆದಾರರಿಗೆ ಉತ್ತಮ ಆಯ್ಕೆಗಳೊಂದಿಗೆ ಇದೆ ಮೊದಲ ಬಾರಿಗೆ ಪ್ರೋ ಸರಣಿಯೂ ಕಾಣಿಸಿಕೊಂಡಿದೆ. ಇದರಿಂದ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆಯೂ ಖರೀದಿಗೆ ದೊರೆಯಲಿದೆ.

5.84 ಇಂಚಿನ FHD+ ಡಿಸ್‌ಪ್ಲೇ:
ರೆಡ್‌ಮಿ 6 ಪ್ರೋ ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿ 19:9 ಅನುಪಾತದ 5.85 ಇಂಚಿನ FHD+ ಡಿಸ್‌ಪ್ಲೇಯನ್ನ ಕಾಣಬಹುದಾಗಿದೆ. ಮೂರು ಸ್ಮಾರ್ಟ್‌ಫೋನ್‌ಗಳಲ್ಲೇ ಇದು ಉತ್ತಮವಾದ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ ನೋಚ್ ಅನ್ನು ಇದರಲ್ಲಿ ನೀಡಲಾಗಿದೆ. ವಿನ್ಯಾಸದಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಇದಲ್ಲದೇ ನೋಚ್ ಹೈಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ಪ್ರೀಮಿಯಮ್ ಅಲ್ಯೂಮಿನಿಯಮ್ ಬಾಡಿ ಹೊಂದಿದೆ.

ಡ್ಯುಯಲ್ ಕ್ಯಾಮೆರಾ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 12 MP ಸೋನಿ + 5 MP ಸ್ಯಾಮ್ ಸಂಗ್ ಲೆನ್ಸ್ ಅನ್ನು ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ AI ಫೇಸ್ ಲಾಕ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳಲು AI ಪೋಟ್ರೆಟ್ ಅನ್ನು ಕ್ಲಿಕ್ ಮಾಡಬಹುದಾಗಿದೆ.

ಪ್ರೋಸೆಸರ್;
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 623 ಪ್ರೊಸೆಸರ್ ಅಳವಡಿಸಲಾಗಿದೆ. ಇದಲ್ಲೇ ಉತ್ತಮವಾದ CPUವನ್ನು ನೀಡಲಾಗಿದೆ. ಆಕ್ಟಾ ಕೋರ್ ಪ್ರೋಸೆಸರ್ ಇದಾಗಿದೆ. ಇದು 2.0 GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಒರಿಯೋ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9.6 ಅನ್ನು ನೋಡಬಹುದಾಗಿದೆ. ಅಲ್ಲದೇ 4000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ VoLTE ಸಪೋರ್ಟ್ ಮಾಡಲಿದೆ. ಅಲ್ಲದೇ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವು ಇದರಲ್ಲಿದೆ.


ನಾಲ್ಕು ಬಣ್ಣ:
ಒಟ್ಟು ನಾಲ್ಕು ಬಣ್ಣದಲ್ಲಿ ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಬ್ಲಾಕ್, ಗೊಲ್ಡ್, ರೆಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೋಡಬಹುದಾಗಿದೆ. ಅಲ್ಲದೇ ಒಂದು ಸ್ಲಿಮ್ ಕೇಸ್ ಅನ್ನು ನೀಡಲಾಗುತ್ತಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಬೆಲೆ:
ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.10,999ಕ್ಕೆ ಮಾರಾಟವಾಗಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.12,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದೆ. ಮಿ.ಕಾಮ್ ಮತ್ತು ಅಮೆಜಾನ್ ನಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12ಕ್ಕೆ ಫಸ್ಟ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.


Click it and Unblock the Notifications








