Home
ಮೊಬೈಲ್

ಭಾರತೀಯ ಸ್ಮಾರ್ಟ್‌ಫೋನ್‌ಗಳ ಕಥೆ ಮುಗಿದ ಹಾಗೆ: ಮತ್ತೊಂದು ಶಿಯೋಮಿ ಬಜೆಟ್ ಫೋನ್‌..!

By Srinidhi

ತಿಂಗಳಿಗೊಂದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿರುವ ಶಿಯೋಮಿ, ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ತನ್ನದೇ ಪ್ರಭಾವವನ್ನು ಹೊಂದಿರ ಬೇಕು ಎನ್ನುವ ಕಾರಣಕ್ಕೆ ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌ಫೋನ್‌ಗಳನ್ನು ಬಳಕೆದಾರರಿಗೆ ಕೈಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಮೊನ್ನೆ ತಾನೇ ಟಾಪ್ ಎಂಡ್ ಪೊಕೊ F1 ಫೋನ್‌ ಅನ್ನು ಲಾಂಚ್ ಮಾಡಿತ್ತು, ಈಗ ಇದಕ್ಕೆ ವಿರುದ್ಧವಾಗಿ ಜಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಭಾರತೀಯ ಸ್ಮಾರ್ಟ್‌ಫೋನ್‌ಗಳ ಕಥೆ ಮುಗಿದ ಹಾಗೆ: ಮತ್ತೊಂದು ಶಿಯೋಮಿ ಬಜೆಟ್ ಫೋನ್‌..!

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ 5 ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದೆ. ಬಜೆಟ್ ವಿಭಾಗದಲ್ಲಿ ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸರಣಿಯ ಮುಂದುವರೆದ ಆವೃತ್ತಿಯನ್ನು ಲಾಂಚ್ ಮಾಡಲು ಶಿಯೋಮಿ ಮುಂದಾಗಿದೆ. ಬಜೆಟ್ ವಿಭಾಗದಲ್ಲಿಯೂ ಸಾಕಷ್ಟು ಬೇಡಿಕೆ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ರೆಡ್‌ಮಿ 6 ಮತ್ತೊಮ್ಮೆ ಶಿಯೋಮಿಗೆ ಗೇಮ್ ಚೇಂಜರ್ ಆಗಲಿದೆ. ಸೆಪ್ಟೆಂಬರ್ 5 ರಂದು ಈ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದೆ.

How to use Xiaomi Mi Bluetooth Audio Receiver - KANNADA GIZBOT
ಮೂರು ಸ್ಮಾರ್ಟ್‌ಫೋನ್:

ಮೂರು ಸ್ಮಾರ್ಟ್‌ಫೋನ್:

ಭಾರತೀಯ ಮಾರುಕಟ್ಟೆಗೆ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿದೆ. ರೆಡ್‌ಮಿ 6, ರೆಡ್‌ಮಿ 6 ಪ್ರೋ ಮತ್ತು ರೆಡ್‌ಮಿ 6A ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳಲಿದೆ. ಈ ಬಾರಿ ಹೊಸದಾಗಿ ಪ್ರೋ ಆವೃತ್ತಿಯನ್ನು ಸೇರಿಸಲಾಗುತ್ತಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ದೊರೆಯಲಿದೆ. ಆದರೆ ವಿಶೇಷತೆಗಳು ಮಾತ್ರವೇ ಉತ್ತಮವಾಗಿಯೇ ಇರಲಿದೆ.

#ದೇಶ್ ಕಾ ನಯಾ ಸ್ಮಾರ್ಟ್‌ಫೋನ್ಸ್:

#ದೇಶ್ ಕಾ ನಯಾ ಸ್ಮಾರ್ಟ್‌ಫೋನ್ಸ್:

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಕುರಿತು ಮಾಹಿತಿಯನ್ನು ನೀಡಿರುವ ಶಿಯೋಮಿ, ದೇಶ್ ಕಾ ನಯಾ ಸ್ಮಾರ್ಟ್‌ಫೋನ್ಸ್ ಬಿಡುಗಡೆ ಮಾಡುವುದಾಗಿದೆ ತಿಳಿಸಿದೆ. ಬೆಜೆಟ್ ಬೆಲೆಯಲ್ಲಿ ಶಿಯೋಮಿ ಫೋನ್‌ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ.

ರೆಡ್‌ಮಿ 6 ಸ್ಮಾರ್ಟ್‌ಫೋನ್:

ರೆಡ್‌ಮಿ 6 ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹೊಂದಿರುವ ರೆಡ್‌ಮಿ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9 ನಲ್ಲಿ ಕಾರ್ಯನಿರ್ವಹಿಸಲಿದೆ. 5.45 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 18:9 ಅನುಪಾತದಿಂದ ಕೂಡಿರಲಿದೆ. ಅಲ್ಲದೇ ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಇದರಲ್ಲಿ 12 MP + 5 MP ಕ್ಯಾಮೆರಾ ಇದಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿ ಇದರಲ್ಲಿದೆ.

ರೆಡ್‌ಮಿ 6A ಸ್ಮಾರ್ಟ್‌ಫೋನ್:

ರೆಡ್‌ಮಿ 6A ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹೊಂದಿರುವ ರೆಡ್‌ಮಿ 6A ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9ನಲ್ಲಿ ಕಾರ್ಯನಿರ್ವಹಿಸಲಿದೆ. 5.45 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿ ಇದರಲ್ಲಿದೆ.

ರೆಡ್‌ಮಿ 6 ಪ್ರೋ:

ರೆಡ್‌ಮಿ 6 ಪ್ರೋ:

ಡ್ಯುಯಲ್ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9ನಲ್ಲಿ ರೆಡ್‌ಮಿ 6 ಪ್ರೋ ಕಾರ್ಯನಿರ್ವಹಿಸಲಿದೆ. 5.84 ಇಂಚಿನ FHD+ ಗುಣಮಟ್ಟದ ನೋಚ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ 18:9 ಅನುಪಾತದಿಂದ ಕೂಡಿರಲಿದೆ. ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ಇದರಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ 12 MP + 5 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 4000mAh ಬ್ಯಾಟರಿ ಇದರಲ್ಲಿದೆ.

Best Mobiles in India

English summary
Xiaomi Redmi 6, Redmi 6 Pro, and Redmi 6A India Launch. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+