ಉತ್ತಮ ಗುಣಮಟ್ಟ, ಹೆಚ್ಚು ಆಯ್ಕೆ ಮತ್ತು ಕಡಿಮೆ ಬೆಲೆ: ಶಿಯೋಮಿಯಿಂದ ಎರಡು ಸ್ಮಾರ್ಟ್ ಫೋನ್..!
ಉತ್ತಮ ಗುಣಮಟ್ಟ, ಹೆಚ್ಚು ಆಯ್ಕೆಗಳು ಮತ್ತು ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿರುವ ಚೀನಾ ಮೂಲದ ಶಿಯೋಮಿ ಸಂಸ್ಥೆಯೂ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಹಲವು ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರೆಡ್ ಮಿ 5 ಮತ್ತು ರೆಡ್ ಮಿ 5A ಸ್ಮಾರ್ಟ್ ಫೋನಿನ ಮುಂದಿನ ಆವೃತ್ತಿಯೂ ಶೀಘ್ರವೇ ಲಾಂಚ್ ಆಗಲಿದೆ.

ಸೆಪ್ಟೆಂಬರ್ ನಲ್ಲಿ ಭಾರತೀಯ ಮಾರುಕಟ್ಟೆಗೆ ಎರಡು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲಿದೆ ಎನ್ನುವ ಸುದ್ದಿಯೂ ಲೀಕ್ ಆಗಿದೆ. ಈ ಸ್ಮಾರ್ಟ್ ಫೋನ್ ಗಳು ಬಜೆಟ್ ಬೆಲೆಯಲ್ಲಿ ದೊರೆಯಲಿದೆ ಎನ್ನುವ ಮಾಹಿತಿ ಇದೆ. ಮೂಲಗಳ ಪ್ರಕಾರ ಇದು ರೆಡ್ ಮಿ 6 ಮತ್ತು ರೆಡ್ ಮಿ 6A ಸ್ಮಾರ್ಟ್ ಫೋನ್ ಎನ್ನಲಾಗಿದೆ. ಇದು ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳೊಂದಿಗೆ ಕೈ ಸೇರಲಿದೆ.

ಚೀನಾದಲ್ಲಿ ಲಾಂಚ್ ಆಗಿದೆ:
ರೆಡ್ ಮಿ 6 ಮತ್ತು ರೆಡ್ ಮಿ 6A ಸ್ಮಾರ್ಟ್ ಫೋನ್ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಉತ್ತಮ ಮಾರಾಟದ ನಿರೀಕ್ಷೆಯನ್ನು ಹೊಂದಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ರೆಡ್ ಮಿ 6 ಸ್ಮಾರ್ಟ್ ಫೋನ್ 3GB RAM +32GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತು 4 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದೇ ಮಾದರಿಯಲ್ಲಿ ರೆಡ್ ಮಿ 6A ಸ್ಮಾರ್ಟ್ ಫೋನ್ ಸಹ 3GB RAM +32GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ.

ರೆಡ್ ಮಿ 6 ಸ್ಮಾರ್ಟ್ ಫೋನ್ ವಿಶೇಷತೆಗಳು:
ರೆಡ್ ಮಿ 6 ಸ್ಮಾರ್ಟ್ ಫೋನಿನಲ್ಲಿ 5.45 ಇಂಚಿನ HD+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದ್ದು, ಮಿಡಿಯಾಟೆಕ್ ಹೆಲಿಯೊ P22 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 3000mAh ಬ್ಯಾಟರಿ ಈ ಫೋನಿನಲ್ಲಿದೆ.

ರೆಡ್ ಮಿ 6 ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ:
ರೆಡ್ ಮಿ 6 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.12 MP + 5 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ. ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

ರೆಡ್ ಮಿ 6A ಸ್ಮಾರ್ಟ್ ಫೋನ್ ವಿಶೇಷತೆಗಳು:
ರೆಡ್ ಮಿ 6A ಸ್ಮಾರ್ಟ್ ಫೋನಿನಲ್ಲಿ 5.45 ಇಂಚಿನ HD+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದ್ದು, ಮಿಡಿಯಾಟೆಕ್ ಹೆಲಿಯೊ P22 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, 3000mAh ಬ್ಯಾಟರಿ ಈ ಫೋನಿನಲ್ಲಿದೆ.

ರೆಡ್ ಮಿ 6A ಸ್ಮಾರ್ಟ್ ಫೋನಿನ ಕ್ಯಾಮೆರಾ:
ರೆಡ್ ಮಿ 6 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಈ ಎರಡು ಫೋನ್ ಗಳಲ್ಲಿ ಇದೊಂದೇ ವ್ಯತ್ಯಾಸ ಎನ್ನಲಾಗಿದೆ. ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ. ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

ಬೆಲೆ:
3GB RAM +32GB ಇಂಟರ್ನಲ್ ಮೆಮೊರಿಯ ರೆಡ್ ಮಿ 6A ಸ್ಮಾರ್ಟ್ ಫೋನ್ ರೂ. 6300ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ ರೆಡ್ ಮಿ 6 ಸ್ಮಾರ್ಟ್ ಫೋನ್ 3GB RAM +32GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ. 8500ಕ್ಕೆ ಮತ್ತು 4 GB RAM + 64 GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ. 10500ಕ್ಕೆ ಮಾರಾಟವಾಗಲಿದೆ.


Click it and Unblock the Notifications