ಶಿಯೋಮಿಯ ಮತ್ತೊಂದು ಸ್ಮಾರ್ಟ್ ಪೋನ್ ರೆಡ್ ಮಿ 6 ಲಾಂಚ್... ಬಜೆಟ್ ಪೋನ್ ನಲ್ಲಿ ಏನೇಲ್ಲಾ ಇದೆ..?
ಚೈನಾ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿ ಶಿಯೋಮಿ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ ಮತ್ತೊಂದು ಪೋನ್ ಬಿಡುಗಡೆ ಮಾಡಿದ್ದು, ಶಿಯೋಮಿಯ ಉತ್ಸಾಹ ಮುಂದುವರೆದಿದೆ. ಮಂಗಳವಾರ ಚೀನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ರೆಡ್ ಮಿ 6 ಸರಣಿ ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗಿದ್ದು, ಸ್ಮಾರ್ಟ್ ಪೋನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.
ಬಹಳಷ್ಟು ನಿರೀಕ್ಷೆ ಮತ್ತು ಫೀಚರ್ಸ್ ಬಗ್ಗೆ ಅನೇಕ ಸೋರಿಕೆಗಳ ನಂತರ ರೆಡ್ ಮಿ 6 ಸ್ಮಾರ್ಟ್ ಪೋನ್ ಬಿಡುಗಡೆಯಾಗಿದ್ದು, ಉತ್ತಮ ಬಜೆಟ್ ಸ್ಮಾರ್ಟ್ ಪೋನ್ ಎಂದು ತಜ್ಞರು ಹೇಳುತ್ತಿದ್ದಾರೆ. ರೆಡ್ ಮಿ 5 ಸ್ಮಾರ್ಟ್ ಪೋನ್ ಯಶಸ್ವಿ ನಂತರ ರೆಡ್ ಮಿ 6 ಸರಣಿಯನ್ನು ಶಿಯೋಮಿ ಸ್ಮಾರ್ಟ್ ಪೋನ್ ಪ್ರಿಯರ ತೆಕ್ಕೆಗೆ ಹಾಕಿದೆ. ಹೊಸ ಬಜೆಟ್ ಪೋನ್ ರೆಡ್ ಮಿ 6ಲ್ಲಿ ಏನೆಲ್ಲಾ ಫೀಚರ್ಸ್ ಇದೆ, ಯಾವ ಕಾರಣಕ್ಕಾಗಿ ರೆಡ್ ಮಿ 6 ಖರೀದಿಸಬೇಕು ಎಂಬುದನ್ನು ಮುಂದೆ ನೋಡಿ.


ಉತ್ತಮ ಡಿಸ್ ಪ್ಲೇ
ಶಿಯೋಮಿ ಬಿಡುಗಡೆಗೊಳಿಸಿರುವ ಹೊಸ ರೆಡ್ ಮಿ 6 ಸ್ಮಾರ್ಟ್ ಪೋನ್ 5.45 ಇಂಚ್ HD+ ಡಿಸ್ ಪ್ಲೇ ಹೊಂದಿದ್ದು, 1440x720 ಪಿಕ್ಸೆಲ್ಸ್ ರೆಸಲ್ಯೂಷನ್, 18:9 ಆಸ್ಪೆಕ್ಟ್ ರೇಷಿಯೋ ಹೊಂದಿದೆ. ಕಳೆದ ವರ್ಷನ್ ರೆಡ್ ಮಿ 5ಗಿಂತ ಸ್ಕ್ರೀನ ಸೈಜ್ ಕಡಿಮೆಯಿದ್ದು, ಮತ್ತೇಲ್ಲಾ ಡಿಸ್ ಪ್ಲೇ ಫೀಚರ್ಸ್ ಅವೇ ಇದ್ದು ಉತ್ತಮವಾಗಿದೆ.

2 ವಿಧಗಳಲ್ಲಿ ಲಭ್ಯ
ಹೊಸ ರೆಡ್ ಮಿ 6 ಎರಡು ವಿಧಗಳಲ್ಲಿ ಲಭ್ಯವಿದ್ದು, 3GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GB ಮೆಮೊರಿ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಟೊರೇಜ್ ಸಾಮರ್ಥ್ಯವನ್ನು ಹೆಚ್ಚಿಸಲು ಮೈಕ್ರೋ SD ಕಾರ್ಡ್ ಸ್ಲಾಟ್ ನೀಡಲಾಗಿದೆ.

ಪ್ರೊಸೆಸರ್ ಮತ್ತು ಸ್ಪೀಡ್
ಹೊಸ ರೆಡ್ ಮಿ 6 ಸ್ಮಾರ್ಟ್ ಪೋನ್ ನಲ್ಲಿ 12nm ಆಧಾರಿತ ಮೀಡಿಯಾಟೆಕ್ ಹೆಲಿಯೋ P22 ಪ್ರೊಸೆಸರ್ ಬಳಸಲಾಗಿದ್ದು, 2GHz ವೇಗ ಹೊಂದಿರಲಿದೆ. ಹೆಲಿಯೋ P22 ಪ್ರೊಸೆಸರ್ ರೆಡ್ ಮಿ 5ನ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 450ಗಿಂತ 48% ಉತ್ತಮವಾದ CPU ಕಾರ್ಯನಿರ್ವಹಣೆಯನ್ನು ನೀಡಲಿದೆ ಎಂದು ಶಿಯೋಮಿ ಹೇಳಿಕೊಂಡಿದೆ. ಹೊಸ ಪ್ರೊಸೆಸರ್ ಇರುವುದರಿಂದ ವೇಗವಾದ ಕಾರ್ಯನಿರ್ವಹಣೆ ನಿರೀಕ್ಷಿಸಬಹುದು.

AI ಬೆಂಬಲಿತ ಡ್ಯುಯಲ್ ಕ್ಯಾಮೆರಾ
ರೆಡ್ ಮಿ 5ಗಿಂತ ಹೊಸ ರೆಡ್ ಮಿ 6 ಸ್ಮಾರ್ಟ್ ಪೋನ್ ನಲ್ಲಿ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ. AI ಬೆಂಬಲಿತ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಪ್ರೈಮರಿ ಸೆನ್ಸಾರ್ 12MP ಹಾಗೂ ಸೆಕೆಂಡರಿ ಸೆನ್ಸಾರ್ 5MP ಗುಣಮಟ್ಟ ಹೊಂದಿದೆ.

ಪೋರ್ಟರೈಟ್ ಸೆಲ್ಫಿ
ಶಿಯೋಮಿಯ ಹೊಸ ರೆಡ್ ಮಿ 6 ನಲ್ಲಿ ಸೆಲ್ಫಿ ಕ್ಯಾಮೆರಾ ಉತ್ತಮವಾಗಿದ್ದು, ಪೋರ್ಟರೈಟ್ ಮೋಡ್ ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದಾಗಿದೆ. ಇದಷ್ಟೇ ಅಲ್ಲದೇ ಬ್ಯಾಕ್ ಗ್ರೌಂಡ್ ಬ್ಲರ್ ಮಾಡಿ, ಆಬ್ಜೆಕ್ಟ್ ಅನ್ನು ಫೋಕಸ್ ಮಾಡುವ ಆಯ್ಕೆ ನೀಡಲಾಗಿದೆ. 5MP ಸ್ಪೋರ್ಟ್ಸ್ ಸೆನ್ಸಾರ್ ಹೊಂದಿದೆ.

ಫೇಸ್ ಐಡಿ ಸಪೋರ್ಟ್
ರೆಡ್ ಮಿ 6ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಳವಡಿಸಿದ್ದು, ಫೇಸ್ ಐಡಿ ಸೌಲಭ್ಯ ನೀಡಿದೆ. ಇದರಿಂದ ಸ್ಮಾರ್ಟ್ ಪೋನ್ ಅನ್ ಲಾಕ್ ಮಾಡಬಹುದಾಗಿದೆ. ಬಜೆಟ್ ಪೋನ್ ನಲ್ಲಿ ಫೇಸ್ ಐಡಿ ನೀಡಿರುವುದು ರೆಡ್ ಮಿ 6ಗೆ ಪ್ಲಸ್ ಪಾಯಿಂಟ್ ಆಗಿದೆ. ಅದಲ್ಲದೇ ಸ್ಮಾರ್ಟ್ ಆಬ್ಜೆಕ್ಟ್ ರೆಕಾಗ್ನೈಷನ್ ಫೀಚರ್ ಅನ್ನು ರೆಡ್ ಮಿ 6 ಹೊಂದಿದೆ.

MIUI 10 ಅಳವಡಿಕೆ
ರೆಡ್ ಮಿ 6 ಸ್ಮಾರ್ಟ್ ಪೋನ್ ಹೊಸ ಆಂಡ್ರಾಯ್ಡ್ ಓರಿಯೋ ಆಧಾರಿತ MIUI 10 ನಿಂದ ಕಾರ್ಯನಿರ್ವಹಿಸಲಿದೆ. ಮತ್ತು ಶಿಯೋ AI ಅಸಿಸ್ಟಂಟ್ ನೊಂದಿಗೆ ರೆಡ್ ಮಿ 6 ಲಾಂಚ್ ಆಗಿದ್ದು, ಗೂಗಲ್ ಅಸಿಸ್ಟಂಟ್ ನಂತೆ ಕಾರ್ಯನಿರ್ವಹಿಸಲಿದೆ.

ಬೆಸ್ಟ್ ಬಜೆಟ್ ಸ್ಮಾರ್ಟ್ ಪೋನ್
ಶಿಯೋಮಿಯ ಹೊಸ ರೆಡ್ ಮಿ 6 ಸ್ಮಾರ್ಟ್ ಪೋನ್ ಉತ್ತಮ ಬಜೆಟ್ ಪೋನ್ ಆಗಿದೆ. ಚೀನಾದಲ್ಲಿ ಗುರುವಾರ ಬಿಡುಗಡೆಗೊಂಡ 3GB RAM ಸ್ಮಾರ್ಟ್ ಪೋನ್ ನ ಬೆಲೆ 799 ಯನ್ ಆಗಿದ್ದು, ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 8,500 ರೂ. ಆಗಲಿದೆ. 4GB RAM ಸ್ಮಾರ್ಟ್ ಪೋನ್ ನ ಬೆಲೆ 999 ಯನ್ ಆಗಿದ್ದು, ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 10,500 ರೂ. ಆಗಲಿದೆ. ಭಾರತೀಯ ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿಯೇ ಬೆಸ್ಟ್ ಬಜೆಟ್ ಸ್ಮಾರ್ಟ್ ಪೋನ್ ಆಗುವ ಸಾಧ್ಯತೆ ಇದೆ.

ರೆಡ್ ಮಿ 6 ಎ
ಶಿಯೋಮಿ ರೆಡ್ ಮಿ 6 ಜೊತೆಗೆ ರೆಡ್ ಮಿ 6 ಎ ಸ್ಮಾರ್ಟ್ ಪೋನ್ ಸಹ ಬಿಡುಗಡೆ ಮಾಡಿದೆ. ರೆಡ್ ಮಿ 5ಎ ಯ ಯಶಸ್ಸಿನೊಂದಿಗೆ ರೆಡ್ ಮಿ 6ಎ ಲಾಂಚ್ ಆಗಿದೆ. ರೆಡ್ ಮಿ 6 ಹೊಂದಿರುವ ಹಲವು ಫೀಚರ್ ಗಳನ್ನು ರೆಡ್ ಮಿ 6ಎ ಹೊಂದಿದೆ. ಡಿಸ್ ಪ್ಲೇ ನಲ್ಲಿ ಯಾವುದೇ ವ್ಯತ್ಯಾಸವಿಲ್ಲ ರಡು ಪೋನ್ ಗಳಿಗೂ.
ಬ್ಯಾಕ್ ಕ್ಯಾಮೆರಾ 12 MP ಸೆನ್ಸಾರ್ ಹೊಂದಿದ್ದು, ಫ್ರಂಟ್ ಕ್ಯಾಮೆರಾ 5 MP ಸೆಲ್ಫಿ ಶೂಟರ್ ನೊಂದಿಗೆ ಲಭ್ಯವಿದೆ. ಹೊಸ ಆಂಡ್ರಾಯ್ಡ್ ಓರಿಯೋ ಬೆಂಬಲಿತ MIUI 10 ನಿಂದ ರೆಡ್ ಮಿ 6ಎ ಕಾರ್ಯನಿರ್ವಹಿಸಲಿದೆ. 3000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 2GB RAM + 16GB ಮೆಮೊರಿ ಆಯ್ಕೆಯಲ್ಲಿ ಲಭ್ಯವಿದೆ. ಬೆಲೆ ಸುಮಾರು 6000 ರೂ. ಆಗಿರಲಿದೆ.


ಭಾರತಕ್ಕೆ ಯಾವಾಗ?
ಹೊಸ ರೆಡ್ ಮಿ 6 ಸರಣಿ ಸ್ಮಾರ್ಟ್ ಪೋನ್ ಗಳು ಜೂನ್ 15 ರಿಂದ ಚೀನಾದಲ್ಲಿ ಲಭ್ಯವಿದ್ದು, ಭಾರತದಲ್ಲಿ ಯಾವಾಗ ಲಾಂಚ್ ಆಗಲಿದಾವೆ ಎಂಬುದನ್ನು ಶಿಯೋಮಿ ತಿಳಿಸಿಲ್ಲ. ಆದ್ದರಿಂದ, ಉತ್ತಮ ಬಜೆಟ್ ಸ್ಮಾರ್ಟ್ ಪೋನ್ ಗೆ ಇನ್ನೊಂದಿಷ್ಟು ದಿನ ಕಾಯಬೇಕಿರುವದಂತೂ ಅನಿವಾರ್ಯ.


Click it and Unblock the Notifications
