ರೆಡ್ ಮಿ 6 ಹಾಗೂ ರೆಡ್ ಮಿ 6ಎನಲ್ಲಿ ಈ ಫೀಚರ್ಸ್ ಗಳು ಇರದೇ ಇರಬಹುದು..!
ಶಿಯೋಮಿಯ ಎಲ್ಲಾ ಫೋನ್ ಗಳಲ್ಲೂ ಈ ವೈಶಿಷ್ಟ್ಯಗಳಿವೆ. ಆದರೆ ಚೈನೀಸ್ ಸ್ಮಾರ್ಟ್ ಫೋನ್ ಶಿಯೋಮಿ ಇತ್ತೀಚೆಗೆ ಬಿಡುಗಡೆಗೊಳಿಸಿರುವ ರೆಡ್ಮಿ 6 ಮತ್ತು ರೆಡ್ಮಿ 6 ಎನಲ್ಲಿ ಬಹುಶ್ಯಃ ಈ ವೈಶಿಷ್ಟ್ಯಗಳು ಇಲ್ಲದೇ ಇರಬಹುದು. ಹಾಗಾದ್ರೆ ಅದ್ಯಾವ ವೈಶಿಷ್ಟ್ಯಗಳನ್ನು ಈ ಎರಡು ಫೋನ್ ಗಳು ಹೊಂದಿರುವುದಿಲ್ಲ ಎಂದು ಕೇಳುತ್ತಿದ್ದೀರಾ? ಅದನ್ನು ತಿಳಿಯಬೇಕು ಎಂದರೆ ಮುಂದೆ ಓದಿ..
ಇತ್ತೀಚಗೆ ತಾನೆ ಗಿಸ್ಮೋಚೀನಾ(IT ಹೋಮ್ ಮುಖಾಂತರ) ಒಂದು ವರದಿಯನ್ನು ಪ್ರಕಟಿಸಿದೆ. ರೆಡ್ಮಿ 6 ಮತ್ತು ರೆಡ್ಮಿ 6ಎ ನಲ್ಲಿ ಇನ್ಫ್ರಾರೆಡ್ ಸೆನ್ಸರ್ ವೈಶಿಷ್ಟ್ಯವು ಕಾಣೆಯಾಗಿದೆ ಎಂಬುದಾಗಿ.. ಹೌದು ಈ ಐಆರ್ ಬ್ಲಾಸ್ಟರ್ ಗಳು ಶಿಯೋಮಿ ಎಂಐ ರಿಮೋಟ್ ಆಪ್ ವೈಶಿಷ್ಟ್ಯವಿದ್ದು, ಇದು ಬಳಕೆದಾರರಿಗೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಮೋಟ್ ಕಂಟ್ರೋಲ್ ಆಗಿ ಬಳಕೆ ಮಾಡಲು ಅಂದರೆ ಟಿವಿ,ಎ.ಸಿ, ಪ್ರೊಜೆಕ್ಟರ್, ಫ್ಯಾನ್ ಮತ್ತು ಇತರೆ ಗೆಜೆಟ್ ಗಳಿಗೆ ರಿಮೋಟ್ ಆಪ್ ನಂತೆ ಕೆಲಸ ಮಾಡುತ್ತಿತ್ತು.

ಈ ವೈಶಿಷ್ಟ್ಯವು ರೆಡ್ಮಿ 6 ಮತ್ತು ರೆಡ್ಮಿ 6ಎ ಫೋನ್ ಗಳಲ್ಲಿ ಇಲ್ಲದೇ ಇರುವುದನ್ನು ಗಮನಿಸಿದರೆ , ಈ ಬ್ರಾಂಡ್ ಬಗ್ಗೆ ಇದುವರೆಗಿನ ಬೆಳವಣಿಗೆಯನ್ನು ಗಮನಿಸಿ ಹೇಳುವುದಾದರೆ ಆಶ್ಚರ್ಯವಾಗುತ್ತಿದೆ. ಐಆರ್ ಬ್ಲಾಸ್ಟರ್ ಈ ಕಂಪೆನಿಯ ಒಂದು ಪ್ರಮುಖ ವೈಶಿಷ್ಟ್ಯವಾಗಿತ್ತು. ಇದಿಷ್ಟೇ ಅಲ್ಲ, ಇನ್ನು ಮುಂದಿನ ಹ್ಯಾಂಡ್ ಸೆಟ್ ಗಳಲ್ಲೂ ಕೂಡ ಕಂಪೆನಿ ಈ ವೈಶಿಷ್ಟ್ಯವನ್ನು ಸೇರಿಸದೇ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.
ಕಳೆದ ತಿಂಗಳಷ್ಟೇ ಇದೆರಡು ಹ್ಯಾಂಡ್ ಸೆಟ್ ಗಳನ್ನು ಚೀನಾದಲ್ಲಿ ಬಿಡುಗಡೆಗೊಳಿಸಲಾಗಿದೆ. ರೆಡ್ಮಿ 6 ಬೇಸ್ ಮಾಡೆಲ್ ನ ಬೆಲೆ CNY 799 ಮತ್ತು ರೆಡ್ಮಿ 6 ಎ ಬೇಸ್ ಮಾಡೆಲ್ ನ ಬೆಲೆ CNY 599 ಆಗಿದೆ. ಸದ್ಯಕ್ಕೆ ಭಾರತದಲ್ಲಿ ಲಭ್ಯತೆಯ ಬಗ್ಗೆ ಮತ್ತು ಮಾರಾಟದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊರಬಿದ್ದಿಲ್ಲ.
ಶಿಯೋಮಿ ರೆಡ್ಮಿ 6 ವಿಶೇಷತೆಗಳು:
ಶಿಯೋಮಿ ರೆಡ್ಮಿ 6 5.45-ಇಂಚಿನ HD+ ಡಿಸ್ಪ್ಲೇ 720x1440 ಪಿಕ್ಸಲ್ ರೆಸಲ್ಯೂಷನ್ ಜೊತೆಗೆ 18:9ಅನುಪಾತ ಹೊಂದಿದೆ. 3,000mAH ಬ್ಯಾಟರಿ, ಮತ್ತು MediaTek Helio P22 ಪ್ರೊಸೆಸರ್ ನಿಂದ ರನ್ ಆಗುತ್ತದೆ ಮತ್ತು ಎರಡು ರೀತಿಯ ಸ್ಟೋರೇಜ್ ಆಯ್ಕೆ ಗಳಿದೆ. 3ಜಿಬಿ+32ಜಿಬಿ ಮತ್ತು 4ಜಿಬಿ+64ಜಿಬಿ. ಇದು ಡುಯಲ್ ಹಿಂಭಾಗ ಕ್ಯಾಮರಾ ಹೊಂದಿದ್ದು ಅದು 12ಎಂಪಿ ಪ್ರೈಮರಿ ಸೆನ್ಸರ್ ಮತ್ತು 5ಎಂಪಿ ಸೆಕೆಂಡರಿ ಸೆನ್ಸರ್ ನ್ನು ಒಳಗೊಂಡಿದೆ.. ಮುಂಭಾಗದ ಕ್ಯಾಮರಾವು 5ಎಂಪಿ ಸೆಲ್ಫೀ ಕ್ಯಾಮರಾ ಅವಕಾಶ ಹೊಂದಿದೆ.

ಶಿಯೋಮಿ ರೆಡ್ಮಿ 6ಎ ವಿಶೇಷತೆಗಳು:
ಶಿಯೋಮಿ ರೆಡ್ಮಿ 6ಎ ಅದೇ ರೀತಿಯ ಡಿಸ್ಪ್ಲೇ ಹೊಂದಿದ್ದು, ಮುಂಭಾಗದ ಕ್ಯಾಮರಾ ಮತ್ತು ಬ್ಯಾಟರಿ ವಿಶೇಷತೆಗಳು ಕೂಡ ರೆಡ್ಮಿ 6 ನಂತೆಯೇ ಇದೆ MediaTek Helio A22 processor ನಿಂದ ರನ್ ಆಗುತ್ತದೆ ಮತ್ತು 13MP ಸೆನ್ಸರ್ ನ್ನು ಹಿಂಭಾಗದ ಕ್ಯಾಮರಾ ಹೊಂದಿದೆ. ಬೇಸ್ ಮಾಡೆಲ್ ನಲ್ಲಿ 2ಜಿಬಿ RAM+16ಜಿಬಿ ಸ್ಟೋರೇಜ್ ಇದೆ.
ಎರಡೂ ಡಿವೈಸ್ ಗಳೂ ಕೂಡ Android 8.1 Oreo out-of-the-box with a layer of MIUI 9ನಿಂದ ರನ್ ಆಗುತ್ತದೆ . ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಎರಡೂ ಫೋನ್ ನಲ್ಲೂ ಕೂಡ 4G VoLTE, ಬ್ಲೂಟೂತ್ 4.2, ವೈ-ಫೈ 802.11 b/g/n, GPS/ A-GPS, ಮತ್ತು Micro-USB ಇದೆ.


Click it and Unblock the Notifications