ಶಿಯೋಮಿ ರೆಡ್ ಮಿ 6 ಬಿಗ್ ಫೀಚರ್ಸ್...ಇದಕ್ಕಿಂತ ಉತ್ತಮ ಬಜೆಟ್ ಸ್ಮಾರ್ಟ್ ಪೋನ್ ಬೇರೆ ಇಲ್ಲ..!
ಜೂನ್ 12 ರಂದು ಶಿಯೋಮಿ ತನ್ನ ರೆಡ್ಮಿ 6 ಮತ್ತು ರೆಡ್ಮಿ 6ಎ ಸ್ಮಾರ್ಟ್ ಪೋನ್ ಗಳನ್ನು ಚೀನಾದಲ್ಲಿ ಬಿಡುಗಡೆಗೊಳಿಸಿದೆ. ರೆಡ್ಮಿ 6 ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ , ಫುಲ್ ಸ್ಕ್ರೀನ್ ಡಿಸೈನ್, ಮತ್ತು ಆಕ್ಟಾ-ಕೋರ್-ಮೀಡಿಯಾ ಟೆಕ್ ಹೆಲಿಯೋ ಪಿ22 ಪ್ರೊಸೆಸರ್ ನ್ನು ಒಳಗೊಂಡಿದ್ದು ಉತ್ತಮ ವೈಶಿಷ್ಟ್ಯ ಹೊಂದಿದೆ.ಭಾರತದಲ್ಲೂ ಮೀಡಿಯಾ ಟೆಕ್ ಪ್ರೊಸೆಸರ್ ನ್ನು ಒಳಗೊಂಡ ಸ್ಮಾರ್ಟ್ ಫೋನ್ ಬಿಡುಗಡೆಗೊಳ್ಳಬಹುದೆಂಬ ವರದಿ ಇತ್ತೀಚೆಗಷ್ಟೇ ಹಬ್ಬಿತ್ತು.


ಶಿಯೋಮಿ ರೆಡ್ಮಿ 6 ವೈಶಿಷ್ಟ್ಯಗಳು
ಶಿಯೋಮಿ ರೆಡ್ಮಿ 6 ಒಂದು ಕಡಿಮೆ ಬಜೆಟ್ ನ ಸ್ಮಾರ್ಟ್ ಫೋನ್ ಆಗಿದ್ದರೂ ಕೂಡ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಅಕ್ಟೋಬರ್ 2017 ರಲ್ಲಿ ಬಿಡುಗಡೆಯಾದ ರೆಡ್ಮಿ 5 ಗಿಂತ ಉತ್ತಮವಾದದ್ದು ಎಂದು ಹೇಳಲು ಯಾವೆಲ್ಲ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂಬ ಬಗೆಗಿನ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ.

ಡುಯಲ್ ಕ್ಯಾಮರಾ ಜೊತೆಗೆ ಎಐ ಸಾಮರ್ಥ್ಯಗಳು
ಚಿತ್ರಗಳನ್ನು ಕ್ಕಿಕ್ಕಿಸಿಕೊಳ್ಳುವುದಕ್ಕಾಗಿ, ರೆಡ್ಮಿ 6 ಡ್ಯುಯಲ್-ಕ್ಯಾಮರಾ ಸೆಟಪ್ ಅನ್ನು 12MP + 5MP ಸಂವೇದಕ ಸಂಯೋಜನೆ ಮತ್ತು AI ಸಾಮರ್ಥ್ಯಗಳೊಂದಿಗೆ ಬಳಸುತ್ತದೆ. ಡುಯಲ್ ಕ್ಯಾಮರಾ ಸೆಟ್ ಅಪ್ ಚಿತ್ರದ ಕ್ವಾಲಿಟಿಯನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲೂ ಉತ್ತಮ ಫೋಟೋ ಬರುವಂತೆ ಮಾಡುತ್ತದೆ. ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದಾಗಿ ಕಂಪೆನಿಯು ಎಐ ಮೋಡ್ ನ್ನು ಅಳವಡಿಸಿದೆ.

ಸೆಲ್ಫೀ ಕ್ಯಾಮರಾ ಜೊತೆಗೆ ಎಐ ಪ್ರೊಟ್ರೈಟ್ ಮೋಡ್
ಸೆಲ್ಫೀ ಕ್ಯಾಮರಾವು 5ಎಂಪಿ ಸಾಮರ್ಥ್ಯವಿದ್ದು ಎಐ ಪ್ರೊಟ್ರೈಟ್ ಮೋಡ್ ನ್ನು ಹೊಂದಿದೆ. ಈ ವೈಶಿಷ್ಟ್ಯವು ನಿಮಗೆ ಸೆಲ್ಫೀಯನ್ನು ಬೋಕೇಷ್ ಎಫೆಕ್ಟ್ ನಲ್ಲಿ ಮತ್ತು ಬ್ಲರ್ರಿಂಗ್ ಬ್ಯಾಕ್ ಗ್ರೌಂಡ್ ನಲ್ಲಿ ತೆಗೆಯಲು ಅವಕಾಶ ನೀಡುತ್ತದೆ ಮತ್ತು ಎಲ್ಲಾ ಫೋಕಸ್ ನ್ನು ನಿಮ್ಮ ಮೇಲೆ ಇಟ್ಟುಕೊಳ್ಳಬಹುದಾಗಿದೆ.

ಫೇಸ್ ಅನ್ ಲಾಕ್
ಸೆಲ್ಫೀ ಕ್ಯಾಮರಾವು ಸಾಫ್ಟವೇರ್ ನ್ನು ಒಳಗೊಂಡ ಫೇಸ್ ಅನ್ ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಇದು ಐಫೋನ್ ಎಕ್ಸ್ ನಂತೆ ಫೇಸ್ ಐಡಿಯ ಮುಖಾಂತರ ಅಷ್ಟು ನಿಖರವಾಗಿಲ್ಲದೇ ಇರಬಹುದು, ಆದರೆ ಇದು ಹಾರ್ಡ್ ವೇರ್ ನಲ್ಲಿ ಸಂಯೋಜಿಸಲ್ಪಟ್ಟಿದೆ. ಆದರೆ ರೆಡ್ಮಿ 6 ನಲ್ಲಿ ಫೇಸ್ ಅನ್ ಲಾಕ್ ಸಿಸ್ಟಮ್ ನ್ನು ಗಮನಿಸಲು ಬಹಳ ಚೆನ್ನಾಗಿಯೇ ಇರುತ್ತದೆ.

ಮೀಡಿಯಾ ಟೆಕ್ ಹೆಲಿಯೋ ಪಿ22
ಶಿಯೋಮಿ ರೆಡ್ಮಿ 6 ಆಕ್ಟಾ-ಕೋರ್- ಮೀಡಿಯಾ ಟೆಕ್ ಪಿ 22 (MT6762) ಪ್ರೊಸೆಸರ್ ನ್ನು ಹೊಂದಿದ್ದು 2GHz ಸಾಮರ್ಥ್ಯ ಹೊಂದಿದೆ.. ಈ ಪ್ರೊಸೆಸರ್ ಶೇಕಡಾ 48 ರಷ್ಟು ಕಡಿಮೆ ಶಕ್ತಿಯನ್ನು ಅಂದರೆ ಇತರೆ ಚಿಪ್ ಸೆಟ್ ಗಳಾದ 28ಎನ್ ಎಂ ಪ್ರೊಸೆಸ್ ನ್ನು ಗಿಂತ ಕಡಿಮೆ ಶಕ್ತಿಯನ್ನು ಬಳಕೆ ಮಾಡುತ್ತದೆ,


Click it and Unblock the Notifications