ಶಿಯೋಮಿ ರೆಡ್ಮಿ 6ಎ,ರೆಡ್ಮಿ 6, ರೆಡ್ಮಿ 6 ಪ್ರೋ – ಯಾವುದು ಬೆಸ್ಟ್ ಫೋನ್?
ಶಿಯೋಮಿ ಮೂರು ಸರಣಿ ಫೋನ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಅದುವೇ ರೆಡ್ಮಿ 6 ಸರಣಿ ಫೋನ್ ಗಳಾಗಿದೆ. ರೆಡ್ಮಿ 6ಎ, ರೆಡ್ಮಿ 6, ರೆಡ್ಮಿ 6 ಪ್ರೋ ಗಳು ಮಾರುಕಟ್ಟೆಯ ಜಾಗವನ್ನು ಪಡೆದಿದ್ದು ಇದರ ಜೊತೆಗೆ ಕಳೆದ ವರ್ಷ ಬಿಡುಗಡೆಗೊಂಡಿರುವ ರೆಡ್ಮಿ 5, ರೆಡ್ಮಿ ನೋಟ್ 5 ಮತ್ತು ರೆಡ್ಮಿ ನೋಟ್ 5 ಪ್ರೋ ಕೂಡ ಭಾರೀ ಸದ್ದು ಮಾಡುತ್ತಿದೆ. ಒಂದು ರೀತಿಯಲ್ಲಿ ಗ್ರಾಹಕರಿಗೆ ಹೆಚ್ಚು ಆಯ್ಕೆಗಳನ್ನು ರೆಡ್ಮಿ ಸಂಸ್ಥೆ ನೀಡುತ್ತಿದೆ ಎಂದು ಹೇಳಬಹುದು. ಇದರ ಜೊತೆಗೆ ಮಿಡ್ ರೇಂಜ್ ನಲ್ಲಿ ಶಿಯೋಮಿ ಸಂಸ್ಥೆಯ ಹಲವು ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.

ಈ ಮೂರು ಹೊಸ ಫೋನ್ ಗಳ ಬೆಲೆಯು Rs 5,999 ರಿಂದ ಆರಂಭವಾಗಿ Rs 12,999 ದ ವರೆಗೆ ಇದೆ.
ರೆಡ್ಮಿ 6ಎ ಎಂಟ್ರಿ ಲೆವೆಲ್ ಗ್ರಾಹಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡಿರುವ ಫೋನ್ ಆಗಿದೆ ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಕ್ಯಾಮರಾವಿರುವ ಫೋನ್ ಒಂದು ಬೇಕು ಎಂದು ಇಚ್ಛಿಸುವ ಗ್ರಾಹಕರು ಖಂಡಿತ ರೆಡ್ಮಿ 6 ನ್ನು ಖರೀದಿಸಬಹುದು. ಯಾಕೆಂದರೆ ಕೈಗೆಟುಕುವ ಬೆಲೆಯಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದೆ.
ಫರ್ಫಾಮೆನ್ಸ್ ನ್ನು ಗಮನದಲ್ಲಿಟ್ಟುಕೊಂಡು ಫೋನ್ ಖರೀದಿಸುವ ಗ್ರಾಹಕರು ರೆಡ್ಮಿ 6 ಪ್ರೋ ನ್ನು ಖರೀದಿಸುವುದು ಸೂಕ್ತವಾದುದ್ದು. ನಾವಿಲ್ಲಿ ಈ ಮೂರು ಫೋನ್ ಗಳ ವ್ಯತ್ಯಾಸವನ್ನು ಸೂಕ್ಷ್ಮವಾಗಿ ವಿವರಿಸುತ್ತೇವೆ ಮತ್ತು ನಿಮಗೆ ಯಾವುದು ನಿಮ್ಮ ಆಯ್ಕೆಗಳಿಗೆ ಅನುಕೂಲವಾಗಿದೆ ಎಂಬುದನ್ನು ನಿರ್ಧರಿಸಿಕೊಳ್ಳಲು ಸಹಾಯವಾಗುತ್ತದೆ.

ರೆಡ್ಮಿ 6ಎ, ರೆಡ್ಮಿ 6, ರೆಡ್ಮಿ 6 ಪ್ರೋ ಡಿಸೈನ್ ಮತ್ತು ಡಿಸ್ಪ್ಲೇ
ರೆಡ್ಮಿ 6ಎ ಮತ್ತು 6 ಎರಡೂ ಕೂಡ ಹೆಚ್ಚು ಕಡಿಮೆ ಒಂದೇ ರೀತಿಯ ಡಿಸೈನ್ ನ್ನು ಹೊಂದಿದೆ. ಎರಡೂ ಫೋನ್ ಗಳಲ್ಲೂ ಕೂಡ 18:9 ಡಿಸ್ಪ್ಲೇ ಇದ್ದು ನ್ಯಾರೋ ಬೆಜೆಲ್ ಮೇಲ್ಬಾಗ ಮತ್ತು ಕೆಳಭಾಗಗಳೆರಡಲ್ಲೂ ಇದೆ. ಎರಡೂ ಫೋನ್ ಗಳೂ ಕೂಡ 5.45- ಇಂಚಿನ ಡಿಸ್ಪ್ಲೇ ಜೊತೆಗೆ HD+ ರೆಸಲ್ಯೂಷನ್ ನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಪ್ಲಾಸ್ಟಿಕ್ ಜೊತೆಗೆ ಮೆಟಿಕ್ ನಂತಹ ಟೆಕ್ಚರ್ ಮೇಲ್ಮೈಯನ್ನು ಹೊಂದಿದೆ. ಆದರೆ ಇದರಲ್ಲಿ ಸಣ್ಣ ಮಟ್ಟದ ವ್ಯತ್ಯಾಸವನ್ನು ಎರಡು ಫೋನ್ ಗಳ ನಡುವೆ ಗಮನಿಸಲು ಸಾಧ್ಯವಿದೆ.
ರೆಡ್ಮಿ 6ಎ ನಲ್ಲಿ ಒಂದೇ ಕ್ಯಾಮರಾವಿದ್ದು ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಅದೇ ರೆಡ್ಮಿ 6 ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಅಳವಡಿಸಲಾಗಿದೆ. ಉತ್ತಮ ಗ್ರಿಪ್ ಗಾಗಿ ಎರಡೂ ಫೋನ್ ಗಳಲ್ಲೂ ಕೂಡ ಕರ್ವ್ಡ್ ಕಾರ್ನರ್ ಗಳಿದ್ದು ಆರ್ಕ್ ಡಿಸೈನ್ ನ್ನು ಹೊಂದಿದೆ.
ಈ ಎರಡೂ ಫೋನ್ ಗಳಿಗಿಂತ ರೆಡ್ಮಿ 6 ಪ್ರೋ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ. ಇದು ಭಾರತದಲ್ಲಿ ಲಭ್ಯವಾಗುವ ಮೊದಲ ನಾಚ್ ಡಿಸ್ಪ್ಲೇ ಹೊಂದಿರು ಶಿಯೋಮಿ ಫೋನ್ ಆಗಿದೆ. ಅಂದರೆ ಈ ಫೋನ್ ಸಣ್ಣ ಬೆಝಲ್ ನ್ನು ಹೊಂದಿದೆ. ರೆಡ್ಮಿ 6 ಪ್ರೋ ದೊಡ್ಡದಾಗ 5.84- ಇಂಚಿನ ಡಿಸ್ಪ್ಲೇ ಹೊಂದಿದೆ. ಪ್ರೋ ಮಾಡೆಲ್ ನ ರೆಸಲ್ಯೂಷನ್ FHD+ ಜೊತೆಗೆ ದೊಡ್ಡ ಅನುಪಾತ ಅಂದರೆ 19:9ವನ್ನು ಹೊಂದಿದೆ. ಹಿಂಭಾಗದಲ್ಲಿ ವರ್ಟಿಕಲ್ ಆಗಿರುವ ಡುಯಲ್ ಕ್ಯಾಮರಾ ಸೆಟ್ ಅಪ್ ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಅಳವಡಿಸಲಾಗಿದೆ.

ರೆಡ್ಮಿ 6ಎ, ರೆಡ್ಮಿ 6, ರೆಡ್ಮೆ 6 ಪ್ರೋ ವೈಶಿಷ್ಟ್ಯತೆಗಳು :
ಮೀಡಿಯಾ ಟೆಕ್ ಚಿಪ್ ಸೆಟ್ ನ್ನು ಹೊಂದಿರುವ ಮತ್ತು ಅದನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ ಶಿಯೋಮಿ ಫೋನ್ ಗಳೇ ರೆಡ್ಮಿ 6ಎ ಮತ್ತು ರೆಡ್ಮಿ 6 ಗಳು. ಒಂದು quad-core Helio A22 ಪ್ರೊಸೆಸರ್ ನ್ನು ಹೊಂದಿದೆ ಮತ್ತೊಂದು octa-core Helio P22 ಚಿಪ್ ಸೆಟ್ ಹೊಂದಿದೆ.ಎರಡೂ ಕೂಡ 12nm ಪ್ರೊಸೆಸ್ ಸಾಮರ್ಥ್ಯವನ್ನು ಒಳಗೊಂಡಿದೆ. ಆದರೆ ರೆಡ್ಮಿ 6 ಪ್ರೋ ಹೆಚ್ಚು ಪವರ್ ಫುಲ್ ಆಗಿರುವ octa-core Snapdragon 625 ಚಿಪ್ ಸೆಟ್ ನ್ನು ಹೊಂದಿದೆ.
ಎಲ್ಲಾ ಮೂರೂ ಫೋನ್ ಗಳೂ ಕೂಡ ಎರಡು ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ. ಅದರಲ್ಲಿರುವ ಪ್ರಮುಖ ವ್ಯತ್ಯಾಸವೇನೆಂದರೆ ರೆಡ್ಮಿ 6ಎ ಹೆಚ್ಚು ಅಂದರೆ 2GB RAM ಇದೆ. ಇನ್ನು ರೆಡ್ಮಿ 6 3GB RAM , ರೆಡ್ಮಿ 6 ಪ್ರೋ 3GB ಮತ್ತು 4GB ಮೆಮೊರಿ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ನಿಮಗೆ ಎಷ್ಟು ಮೆಮೊರಿಯುಳ್ಳ ಫೋನಿನ ಅಗತ್ಯವಿದೆ ಎಂಬುದನ್ನು ನೀವು ನಿರ್ಧರಿಸಬೇಕಿದೆ.

ಕ್ಯಾಮರಾ ವೈಶಿಷ್ಟ್ಯೆತೆಗಳು ಹೀಗಿದೆ:
ಮೂರು ಫೋನ್ ಗಳಲ್ಲಿ ಕ್ಯಾಮರಾ ವೈಶಿಷ್ಟ್ಯತೆಗಳು ವಿಭಿನ್ನವಾಗಿದೆ.ರೆಡ್ಮಿ 6ಎ ಬೇಸಿಕ್ ಎಂಟ್ರಿ ಲೆವೆಲ್ ಕ್ಯಾಮರಾಗಳನ್ನು ಒಳಗೊಂಡಿದೆ. ಇದರಲ್ಲಿ ಸಿಂಗಲ್ 13- ಮೆಗಾಪಿಕ್ಸಲ್ ನ ಕ್ಯಾಮರಾವು ಹಿಂಭಾಗದಲ್ಲಿದೆ ಮತ್ತು 5 ಮೆಗಾಪಿಕ್ಸಲ್ ನ ಕ್ಯಾಮರಾವು ಸೆಲ್ಫೀ ತೆಗೆಯಲು ಅನುಕೂಲ ಮಾಡಿಕೊಡುತ್ತದೆ. ಸೆಲ್ಫೀ ಕ್ಯಾಮರಾವು AI ಪೋಟ್ರೈಟ್ ಮತ್ತು ಬ್ಯೂಟಿಫೈ ಮೋಡ್ ಗಳಿಗೆ ಬೆಂಬಲ ನೀಡುತ್ತದೆ.
ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಕ್ಯಾಮರಾವುಳ್ಳ ಫೋನ್ ಎಂದರೆ ಅದು ರೆಡ್ಮಿ 6. ಈ ಫೋನ್ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು ಪ್ರೈಮರಿ ಸೆನ್ಸರ್ 12 ಮೆಗಾಪಿಕ್ಸಲ್ ಮತ್ತು ಸೆಕೆಂಡರಿ ಸೆನ್ಸರ್ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ ಜೊತೆಗೆ ಡೆಪ್ತ್ ಸೈಜ್ ಗಾಗಿ 1.25- ಮೈಕ್ರಾನ್ ಪಿಕ್ಸಲ್ ಸೈಜ್ ನ್ನು ಒಳಗೊಂಡಿದೆ. ಸೆಲ್ಫೀ ಕ್ಯಾಮರಾವು 5 ಮೆಗಾಪಿಕ್ಸಲ್ ಸಾಮರ್ಥ್ಯದಾಗಿದ್ದು ಎಐ ಪೋರ್ಟ್ರೈಟ್ ಮೋಡ್ ಗೆ ಬೆಂಬಲ ನೀಡುತ್ತದೆ.
ರೆಡ್ಮಿ 6 ಪ್ರೋ ನಲ್ಲಿ ರೆಡ್ಮಿ ನೋಟ್ 5 ಪ್ರೋ ನಲ್ಲಿರುವಂತಹ ಕ್ಯಾಮರಾ ಸೆಟ್ ಅಪ್ ಇದೆ.ಅಂದರೆ 12 ಮೆಗಾಪಿಕ್ಸಲ್ ನ ಸೋನಿ IMX 486 ಪ್ರೈಮರಿ ಸೆನ್ಸರ್ ಜೊತೆಗೆ 1.25-micron ಪಿಕ್ಸಲ್ ಮತ್ತು ಸೆಕೆಂಡರಿ ಕ್ಯಾಮರಾವು 5 ಮೆಗಾಪಿಕ್ಸಲ್ ನ ಸ್ಯಾಮ್ ಸಂಗ್ ಸೆನ್ಸರ್ ನ್ನು ಹೊಂದಿದೆ.
ಇನ್ನು ಬ್ಯಾಟರಿ ಲೈಫ್ ಬಗ್ಗೆ ಹೇಳುವುದಾದರೆ ರೆಡ್ಮಿ 6ಎ, ರೆಡ್ಮಿ 6 ಒಂದು ದಿನ ಪೂರ್ತಿ ಕೆಲಸ ನಿರ್ವಹಿಸುವಂತಹ 3,000mAh ಕೆಪಾಸಿಟಿ ಇರುವ ಬ್ಯಾಟರಿಯನ್ನು ಆಫರ್ ಮಾಡುತ್ತದೆ. ಇನ್ನು ಪ್ರೋ ಮಾಡೆಲ್ ನಲ್ಲಿ ಸ್ವಲ್ಪ ದೊಡ್ಡದಾದ ಅಂದರೆ 4,000mAh ಬ್ಯಾಟರಿ ಕೆಪಾಸಿಟಿ ಇದೆ. ಸಾಫ್ಟ್ ವೇರ್ ಗಳ ಬಗ್ಗೆ ಪ್ರಸ್ತಾಪಿಸುವುದಾದರೆ ಈ ಡಿವೈಸ್ ಗಳಲ್ಲಿ ಆಂಡ್ರಾಯ್ಡ್ 8.1 ಓರಿಯೋ ಜೊತೆಗೆ MIUI 9.6 out-of-the-box ಇದೆ.

ಹಾಗಾದರೆ ನೀವು ಯಾವುದನ್ನು ಖರೀದಿಸುವುದು ಸೂಕ್ತ?
ಒಂದು ವೇಳೆ ನೀವು 10,000 ರುಪಾಯಿ ಒಳಗಿನ ಫೋನ್ ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಾಗಿದ್ದಲ್ಲಿ ರೆಡ್ಮಿ 6ಎ ಮತ್ತು ರೆಡ್ಮಿ 6 ಬೆಸ್ಟ್ ಆಯ್ಕೆಗಳಾಗುತ್ತದೆ. ಕೆಲವು ಸಾಮಾನ್ಯ ಕೆಲಸಗಳನ್ನು ಮಾತ್ರ ನೀವು ಮೊಬೈಲ್ ನಲ್ಲಿ ಮಾಡುವ ಗ್ರಾಹಕರಾಗಿದ್ದಲ್ಲಿ ಖಂಡಿತ ಈ ಫೋನ್ ಗಳು ನಿಮಗೆ ಸಾಕಾಗುತ್ತದೆ. ರೆಡ್ಮಿ 6 ನಲ್ಲೂ ಕೈ ಗೆಟುಕುವ ಬೆಲೆಯಲ್ಲೇ ಉತ್ತಮ ಕ್ಯಾಮರಾ ಕೂಡ ಲಭ್ಯವಿದೆ. ನೀವು ಫೋಟೋ ತೆಗೆದುಕೊಳ್ಳುವುದು ಕೇವಲ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವ ಉದ್ದೇಶದಿಂದಷ್ಟೇ ಆಗಿದ್ದಲ್ಲಿ ಖಂಡಿತ ರೆಡ್ಮಿ 6 ಫೋನ್ ಸಾಕಾಗುತ್ತದೆ.
ಈ ಎರಡೂ ಫೋನ್ ಗಳಿಗೆ ಹೋಲಿಸಿದರೆ ರೆಡ್ಮಿ 6 ಪ್ರೋ ಸ್ವಲ್ಪ ದೊಡ್ಡದಾಗುತ್ತದೆ. ತುಂಬಾ ಅಧ್ಬುತ ಫರ್ಫಾಮೆನ್ಸ್ ನ್ನು ನಿರೀಕ್ಷಿಸುವ ಗ್ರಾಹಕರು ನೀವಾಗಿದ್ದು ಅತೀ ಹೆಚ್ಚು ಪಾವತಿ ಮಾಡಲು ಇಚ್ಛೆ ಇಲ್ಲದವರಾಗಿದ್ದಲ್ಲಿ ರೆಡ್ಮಿ ನೋಟ್ 5 ಪ್ರೋ ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮಗೆ Rs 10,999 ಗೆ ಉತ್ತಮ ಕ್ಯಾಮರಾವನ್ನು ಕೂಡ ಇದು ಒಳಗೊಂಡಿರುತ್ತದೆ. ಈ ಫೋನ್ ಮೆಟಾಲಿಕ್ ಬಿಲ್ಡ್ ಆಗಿ ಬರುತ್ತದೆ. ಆದರೆ ಒಂದು ವೇಳೆ ನೀವು ರೆಡ್ಮಿ 6 ನ ಟಾಪ್ ಎಂಡ್ ಮಾಡೆಲ್ ಖರೀದಿಸುವುದಾದರೆ Rs 9,499 ಗೆ ಲಭ್ಯವಾಗುತದೆ. ಆದರೆ ಸ್ವಲ್ಪ ಹೆಚ್ಚು ಪಾವತಿಸಿ ಅಂದರೆ Rs 10,999 ರೆಡ್ಮಿ 6 ಪ್ರೋ ಖರೀದಿಸುವುದು ಸೂಕ್ತ. ಯಾಕೆಂದರೆ ಇದರಲ್ಲಿ ನಾಚ್ ನಂತರ 1080p ನ ಡಿಸ್ಪ್ಲೇ ಇದೆ . ಇಷ್ಟು ಹೇಳಿದ ಮೇಲೆ ಆಯ್ಕೆ ನಿಮ್ಮದು.


Click it and Unblock the Notifications








