7,999 ರೂ.ಗೆ ಇಂದು ಬಿಡುಗಡೆಯಾದ 'ರೆಡ್‌ಮಿ 7' ಒಂದು ಅದ್ಬುತ ಫೋನ್!!

|

ಭಾರತದಲ್ಲಿಂದು ಶಿಯೋಮಿ ಮೊಬೈಲ್ ಹಬ್ಬವೇ ಏರ್ಪಟ್ಟಿತ್ತು ಎನ್ನುವ ಮಟ್ಟಿಗೆ ಶಿಯೋಮಿಯ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳು ಇಂದು ಲಾಂಚ್ ಆಗಿವೆ. ದೇಶದ ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಭುತ್ವ ಸಾಧಿಸಿರುವ ಶಿಯೋಮಿ, ಇಂದು ಕೇವಲ 10 ಸಾವಿರ ರೂ.ಗಳಲ್ಲಿ 32MP ಸೆಲ್ಫೀ ಕ್ಯಾಮೆರಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಗಮನಸೆಳೆದಿದೆ.

ಆದರೆ, ಶಿಯೋಮಿ ಕಂಪೆನಿ ತನ್ನ ಸೆಲ್ಫೀ ಎಕ್ಸ್‌ಪರ್ಟ್ 'ರೆಡ್‌ಮಿ ವೈ3' ಪೋನ್ನು ಇಂದು ಲಾಂಚ್ ಮಾಡಿರುವುದು ಅಷ್ಟೇನು ವಿಶೇಷವಾಗಿರಲಿಲ್ಲ. ಏಕೆಂದರೆ, ಶಿಯೋಮಿ ತನ್ನ 'ರೆಡ್‌ಮಿ ವೈ3' ಪೋನ್ ಜೊತೆಗೆ 'ರೆಡ್‌ಮಿ 7' ಸ್ಮಾರ್ಟ್‌ಫೋನನ್ನೂ ಕೂಡ ಬಿಡುಗಡೆ ಮಾಡಿದೆ. ಅದು ಕೂಡ ಕೇವಲ 7,999 ರೂ.ಗಳಿಗೆ 'ರೆಡ್‌ಮಿ 7' ಪೋನ್ ಬಿಡುಗಡೆಯಾಗಿರುವುದು ಇನ್ನೂ ಆಶ್ಚರ್ಯವಾಗಿದೆ.

7,999 ರೂ.ಗೆ ಇಂದು ಬಿಡುಗಡೆಯಾದ 'ರೆಡ್‌ಮಿ 7' ಒಂದು ಅದ್ಬುತ ಫೋನ್!!

ರೆಡ್‌ಮಿ ಗೋ ನಂತರ ಶಿಯೋಮಿ ಕಂಪೆನಿ ಬಿಡುಗಡೆ ಮಾಡಿದ ಎರಡನೇ ಕಡಿಮೆ ಬಜೆಟ್ ಪೋನ್ ಇದಾಗಿದ್ದು, 6.26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ, 4,000 mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 632 ಪ್ರೊಸೆಸರ್ ಹೊಂದಿರುವುದು ಫೋನಿನ ವಿಶೇಷತೆಯಾಗಿದೆ. ಹಾಗಾದರೆ, 7,999 ರೂ. ಬೆಲೆಯ 'ರೆಡ್‌ಮಿ 7' ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ 7' ವಿನ್ಯಾಸ

'ರೆಡ್‌ಮಿ 7' ವಿನ್ಯಾಸ

ಶಿಯೋಮಿ ಕಂಪೆನಿಯ ಎಲ್ಲಾ ಬಜೆಟ್ ಫೋನ್‌ಗಳ ವಿನ್ಯಾಸವನ್ನೇ ಹೊಂದಿರುವ 'ರೆಡ್‌ಮಿ 7' ಸ್ಮಾರ್ಟ್‌ಫೋನಿನ ವಿಶೇಷತೆ ಎಂದರೆ ನೋಚ್ ಎಂದು ಹೇಳಬಹುದು. 26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಜೊತೆಗೆ ನೋಚ್ ವಿನ್ಯಾಸವನ್ನು ಹೊಂದಿರುವ ಏಕೈಕ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

'ರೆಡ್‌ಮಿ 7' ಡಿಸ್‌ಪ್ಲೇ

'ರೆಡ್‌ಮಿ 7' ಡಿಸ್‌ಪ್ಲೇ

ಮೊದಲೇ ಹೇಳಿದಂತೆ ಶಿಯೋಮಿ 'ರೆಡ್‌ಮಿ 7' ಸ್ಮಾರ್ಟ್‌ಫೋನಿನಲ್ಲಿ 6.26-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಅಳವಡಿಲಾಗಿದೆ. ಮಲ್ಟಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿರುವಂತಿರುವ ಡಿಸ್‌ಪ್ಲೇಯು 86.83% ನಷ್ಟು ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿರುವುದು ವಿಶೇಷವಾದರೆ, 19: 9 ಆಕಾರ ಅನುಪಾತದ ಫೋನ್ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿತವಾಗಿದೆ.

'ರೆಡ್‌ಮಿ 7' ಪ್ರೊಸೆಸರ್

'ರೆಡ್‌ಮಿ 7' ಪ್ರೊಸೆಸರ್

'ರೆಡ್‌ಮಿ 7' ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ TM 632 ಪ್ರೊಸೆಸರ್ ಅನ್ನು ನೀಡಲಾಗಿದ್ದು, 632 ಕ್ರೊಯೋ 250 ಆಕ್ಟಾ-ಕೋರ್ ಸಿಪಿಯು ಆರ್ಕಿಟೆಕ್ಚರ್ನೊಂದಿಗೆ ಸುಸಜ್ಜಿತವಾದ ಕಾರ್ಯಕ್ಷ ನಿಡಲಿದೆ. ಈ ಪ್ರೊಸೆಸರ್ ಹೆಚ್ಚಿನ ಬ್ಯಾಟರಿ ದಕ್ಷತೆಯನ್ನು ನೀಡುವುದಲ್ಲದೇ, ಗೇಮಿಂಗ್ಗಾಗಿ ಕ್ವಾಲ್ಕಾಮ್ ® ಅಡ್ರಿನೊ TM 506 ಜಿಪಿಯು ಅತ್ಯುತ್ತಮ ಅನುಭವವನ್ನು ಸೃಷ್ಟಿಸುತ್ತದೆ.

'ರೆಡ್‌ಮಿ 7' RAM

'ರೆಡ್‌ಮಿ 7' RAM

2 ಜಿಬಿ + 16 ಜಿಬಿ / 3 ಜಿಬಿ + 32 ಜಿಬಿ ಮತ್ತು 3 ಜಿಬಿ + 64 ಜಿಬಿ ರೀತಿಯ ಮೂರು ಮಾದರಿಗಳಲ್ಲಿ ಬಿಡುಗಡೆಯಾಗಿರುವ 'ರೆಡ್‌ಮಿ 7' ಸ್ಮಾರ್ಟ್‌ಫೋನ್ 2 + 1 ಕಾರ್ಡ್ ಸ್ಲಾಟ್ ವಿನ್ಯಾಸವನ್ನು ಹೊಂದಿದೆ. 2 SIM ಕಾರ್ಡ್ ಸ್ಲಾಟ್‌ಗಳನ್ನು ಮತ್ತು 1 ಮೈಕ್ರೊ ಸ್ಲಾಟ್ ಅನ್ನು ಬಳಸಬಹುದಾಗಿದೆ. ಇನ್ನು 512GB ವರೆಗೆ ಮೈಕ್ರೊ SD ಸಂಗ್ರಹವನ್ನು ಈ ಸ್ಮಾರ್ಟ್‌ಫೋನ್ ಬೆಂಬಲಿಸುತ್ತದೆ.

'ರೆಡ್‌ಮಿ 7' ಕ್ಯಾಮೆರಾ!

'ರೆಡ್‌ಮಿ 7' ಕ್ಯಾಮೆರಾ!

ಶಿಯೋಮಿಯ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ 12MP + 2MP ಹಿಂದಿನ ಡಯಲ್ ಕ್ಯಾಮರಾ ಹಾಗೂ 8MP ಸೆಲ್ಫಿ ಕ್ಯಾಮರಾಗಳನ್ನು ಈ ಫೋನಿನಲ್ಲಿ ಕಾಣಬಹುದು. ಪ್ರಾಥಮಿಕ ಸಂವೇದಕದಿಂದ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್ ಅತ್ಯುತ್ತಮ ಡೆಪ್ತ್ ಚಿತ್ರಗಳನ್ನು ಚಿತ್ರಿಸಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ 'AI ಭಾವಚಿತ್ರ ಮೋಡ್' ಇರುವುದು ಸಹ ವಿಶೇಷವೇ.

'ರೆಡ್‌ಮಿ 7' ಬ್ಯಾಟರಿ

'ರೆಡ್‌ಮಿ 7' ಬ್ಯಾಟರಿ

'ರೆಡ್‌ಮಿ 7'ಫೋನ್ 4000mAh (ಟೈಪ್) ಹೆಚ್ಚು ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಎರಡು-ದಿನದ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. 5V2A ಚಾರ್ಜರ್ ಅನ್ನು ಒಳಗೊಂಡಿರುವ ಈ ಫೋನಿನಲ್ಲಿ ಇನ್ನುಳಿದಂತೆ ಫೇಸ್‌ ಅನ್‌ಲಾಕ್, ಡ್ಯುಯಲ್ ವೋಲ್ಟ್ ಸಪೋರ್ಟ್ ಮತ್ತು MPEG4 ವಿಡಿಯೋ ಸಪೋರ್ಟ್ ಆಯ್ಕೆ ಇರುವುದನ್ನು ನೋಡಬಹುದು.

'ರೆಡ್‌ಮಿ 7' ಬೆಲೆ

'ರೆಡ್‌ಮಿ 7' ಬೆಲೆ

'ರೆಡ್‌ಮಿ 7' ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 29 ರಿಂದ ಮಾರಾಟಕ್ಕೆ ಬರಲಿದ್ದು, ಕೆಂಪು, ನೀಲಿ ಮತ್ತು ಕಪ್ಪು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. 2 ಜಿಬಿ / 32 ಜಿಬಿ ರೂಪಾಂತರಕ್ಕಾಗಿ 7,999 ರೂ. ಹಾಗೂ 3 ಜಿಬಿ / 32 ಜಿಬಿ ರೂಪಾಂತರಕ್ಕಾಗಿ 8,999 ರೂ. ಬೆಲೆ ನಿಗದಿಯಾಗಿದೆ. ಈ ಎರಡೂ ರೂಪಾಂತರಗಳು ಸಹ ಎಲ್ಲಾ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Xiaomi Redmi 7 Launched in India; Goes on Sale From April 29 And Prices Start at Rs 7,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X