Just In
Don't Miss
- News
ಬೆಂಗಳೂರಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ
- Automobiles
ನೆಕ್ಸಾನ್ ಎಲೆಕ್ಟ್ರಿಕ್ ಬಿಡುಗಡೆಯ ನಂತರ ಅಲ್ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಗೆ ಭರ್ಜರಿ ಸಿದ್ದತೆ
- Movies
ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್
- Finance
ಜಿಎಸ್ಟಿ ದರ ಹೆಚ್ಚಳ ಕೇವಲ ಊಹಾಪೋಹ:ನಿರ್ಮಲಾ ಸೀತಾರಾಮನ್
- Sports
ಟೀಮ್ ಇಂಡಿಯಾಕ್ಕೆ ಶೀಘ್ರ ಮರಳಲಿದ್ದಾರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
- Education
PGCIL: 53 ಕ್ಷೇತ್ರ ಮೇಲ್ವಿಚಾರಕ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ...
- Lifestyle
ಶನಿವಾರದ ದಿನ ಭವಿಷ್ಯ 14-12-2019
ಕೇವಲ 7,999 ರೂ.ಗೆ ರಿಲೀಸ್ ಆಯ್ತು 'ರೆಡ್ಮಿ 8'!..ಖರೀದಿಸಲು ಕ್ಯೂ ಗ್ಯಾರಂಟಿ!
ದೇಶದ ನಂ.1 ಮೊಬೈಲ್ ಮಾರಾಟಗಾರ ಕಂಪೆನಿ ಶಿಯೋಮಿ ಹಬ್ಬದ ಉಡುಗೊರೆಯಾಗಿ ಮತ್ತೊಂದು ವಿನೂತನ 'ರೆಡ್ಮಿ 8' ಸ್ಮಾರ್ಟ್‌ಫೋನನ್ನು ಪರಿಚಯಿಸಿದೆ. ದೀಪಾವಳಿ ಹಬ್ಬದ ಅವಧಿಯಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಮಿ.ಕಾಂ ಮೂಲಕ 3.8 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಸುದ್ದಿಯಲ್ಲಿರುವ ಶಿಯೋಮಿ ಇದೇ ತಿಂಗಳಿನಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸಿದ್ದು, ಇಷ್ಟು ಮಾತ್ರವಲ್ಲದೇ ಕೇವಲ 7,999 ರೂ. ಗಳಿಗೆ ರೆಡ್ಮಿ 8 ಹೈ ಎಂಡ್ ಸ್ಮಾರ್ಟ್‌ಫೋನನ್ನು ಮಾರಾಟ ಮಾಡುವುದಾಗಿ ಹೇಳಿ ಆಶ್ಚರ್ಯ ಮೂಡಿಸಿದೆ.

ಹೌದು, ಕಳೆದ ವಾರ ಕೇವಲ ವದಂತಿಯಾಗಿದ್ದ ರೆಡ್ಮಿ 8 ಸ್ಮಾರ್ಟ್‌ಫೋನನ್ನು ಇಂದು ಬಿಡುಗಡೆ ಮಾಡಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮರ್ಥ್ಯಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸೆನ್ಸರ್, 5000 ಎಮ್ಎಹೆಚ್ ಬ್ಯಾಟರಿ ಮತ್ತು ಫೇಸ್ ಅನ್ಲಾಕ್ ಸಾಮರ್ಥ್ಯಗಳೊಂದಿಗೆ ಇಂದು ರೆಡ್ಮಿ 8 ಸ್ಮಾರ್ಟ್‌ಫೋನ್ ದೇಶಕ್ಕೆ ಕಾಲಿಟ್ಟಿದೆ. ಇಂದು ಆರಂಭವಾಗಿರುವ ಈ ಫೋನನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬೇಸ್ ಮತ್ತು ಹೈ ಎಂಡ್ ಎರಡೂ ರೂಪಾಂತರಗಳನ್ನು ಒಂದೇ ಬೆಲೆಗೆ ಖರೀದಿಸಬಹುದಾಗಿದೆ.

3 ಜಿಬಿ RAM ಮತ್ತು 32 ಜಿಬಿ ಶೇಖರಣಾ ಮಾದರಿ ರೆಡ್ಮಿ 8 ಫೋನ್ ಬೆಲೆ ಬೆಲೆ ರೂ. 7,999 ರೂ.ಗಳಾಗಿದ್ದರೆ, 4 ಜಿಬಿ RAN ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೂಪಾಂತರವು ರೂ. 8,999 ರೂ. ಗಳಿಗೆ ಲಭ್ಯವಿದೆ. ಇನ್ನು ಹಬ್ಬದ ಆಫರ್ ಆಗಿ ಮೊದಲ ಐದು ಮಿಲಿಯನ್ ರೆಡ್‌ಮಿ 8 ಯೂನಿಟ್ ಸ್ಮಾರ್ಟ್‌ಫೋನ್‌ಗಳನ್ನು (ಹೈ-ಎಂಡ್ ರೂಪಾಂತರಕ್ಕೆ) 1,000 ರೂ. ರಿಯಾಯಿತಿಯಲ್ಲಿ ನೀಡಲು ಕಂಪೆನಿ ಮುಂದಾಗಿದ್ದು, 4 ಜಿಬಿ RAN ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೆಡ್ಮಿ 8 ಫೋನ್ ಅನ್ನು ಸಹ 7,999 ರೂ.ಗಳಿಗೆ ಖರೀದಿಸಬಹುದಾಗಿದೆ.

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿರುವ ನೂತನ ರೆಡ್‌ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾಗೆ ವಾಟರ್ ಡ್ರಾಪ್ ದರ್ಜೆಯ ಶೈಲಿಯಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸಾಧನವು ಇತರ ಕೆಲವು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಔರಾ ಮಿರರ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಇನ್ನು ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಶೇಖರಣಾ ಸ್ಥಳವನ್ನು ಹೆಚ್ಚಿಸಲು ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಕ್ಯಾಮೆರಾ ವಿಭಾಗದಲ್ಲಿ ರೆಡ್ಮಿ 8 ರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 12 ಎಂಪಿ ಪ್ರೈಮರಿ ಸೋನಿ ಐಎಂಎಕ್ಸ್ 363 ಸೆನ್ಸಾರ್ ಎಫ್ / 1.8 ಅಪರ್ಚರ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗಾಗಿ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಇದೆ. ಗೂಗಲ್ ಲೆನ್ಸ್ ಬೆಂಬಲ ಮತ್ತು ಎಐ ದೃಶ್ಯ ಪತ್ತೆ ಮುಂತಾದ ವೈಶಿಷ್ಟ್ಯಗಳಿವೆ. ಹಾಗೆಯೇ ಈ ಸಾಧನವು 8 ಎಂಪಿ ಎಐ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790