ಶಿಯೋಮಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಭಾರತಕ್ಕಿಂದು ಎಂಟ್ರಿ!!
ಗೂಗಲ್‌ನ ಮಹತ್ವಾಕಾಂಕ್ಷೆಯ ಕಡಿಮೆ ಬೆಲೆಯ ಆಂಡ್ರಾಯ್ಡ್ ಗೋ ಮಾದರಿಯ ಸ್ಮಾರ್ಟ್‌ಫೋನ್ ತಯಾರಿಕೆಗೆ ಇಳಿದಿರುವ ಶಿಯೋಮಿ ಇಂದು ಮೊಬೈಲ್ ಮಾರುಕಟ್ಟೆಯನ್ನು ಮತ್ತೊಮ್ಮೆ ಸೆಳೆಯಲು ಮುಂದಾಗಿದೆ. ಇತ್ತೀಚಿಗಷ್ಟೇ ಫಿಲಿಫೀನ್‌ನಲ್ಲಿ ಶಿಯೋಮಿ ಬಿಡುಗಡೆ ಮಾಡಿದ್ದ ಶಿಯೋಮಿ 'ರೆಡ್‌ಮಿ ಗೋ' ಸ್ಮಾರ್ಟ್‌ಫೋನ್ ಭಾರತದಲ್ಲಿಂದು(ಮಾರ್ಚ್ 19) ಬಿಡುಗಡೆಯಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಶಿಯೋಮಿ ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಶಿಯೋಮಿ ಪ್ರಕಟಿಸಿದಂತೆ, ಭಾರತದಲ್ಲಿ ಕಂಪೆನಿಯ ಮೊದಲ 'ಆಂಡ್ರಾಯ್ಡ್ ಗೋ' ಎಡಿಷನ್ ಸ್ಮಾರ್ಟ್‌ಫೋನ್ ಇದೀಗ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದ್ದು, ಫಿಲಿಫೈನ್‌ನಲ್ಲಿ 3,999 ಫಿಲಿಫೈನ್ ಪಿಸೊಗಳಿಗೆ ಬಿಡುಗಡೆಯಾದ ಈ ಸ್ಮಾರ್ಟ್‌ಪೋನ್ ಭಾರತದಲ್ಲಿ 3,499ರೂ.ಗೆ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಈಗಾಗಲೇ ಕೆಲ ಮಾಧ್ಯಮಗಳು 3,499ರೂ.ಬೆಲೆಯನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಿವೆ.

5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 425ಪ್ರೊಸೆಸರ್, 3000mAh ಬ್ಯಾಟರಿಯಂತಹ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಶಿಯೋಮಿ ಫೋನ್‌ಗಳಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗಾದರೆ. ಭಾರತದಲ್ಲಿ ಇದೀಗ ಲಾಂಚ್ ಆಗುತ್ತಿರುವ ಶಿಯೋಮಿಯ 'ರೆಡ್‌ಮಿ ಗೋ' ಸ್ಮಾರ್ಟ್‌ಫೋನ್ ಹೇಗಿದೆ?, ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ರೆಡ್‌ಮಿ ಗೋ?
ಶಿಯೋಮಿಯ ಮೊದಲ ಆಂಡ್ರಾಯ್ಡ್ ಗೋ ಮಾದರಿಯ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಬೇಸಿಕ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿದೆ. ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ನಿರೀಕ್ಷೆಯಂತೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯು ಇಲ್ಲ. ಇನ್ನು ಹಿಂಬಾಗದಲ್ಲಿ ಒಂದು ಕ್ಯಾಮೆರಾ ಹೊಂದಿರುವ ಪೋನ್ ಉತ್ತಮ ಬಾಡಿ ವಿನ್ಯಾಸವನ್ನು ಹೊಂದಿದೆ.

ರೆಡ್‌ಮಿ ಗೋ ಡಿಸ್‌ಪ್ಲೇ!
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 16:9 ಆಕಾರ ಅನುಪಾತದಲ್ಲಿ ಬಂದಿರುವ ಡಿಸ್‌ಪ್ಲೇ 1280 x 720 ಪಿಕ್ಸೆಲ್‌ಗಳ ಸಾಮರ್ಥ್ಯದ್ದಾಗಿದೆ. 380 ನಿಟ್ಸ್ ಬ್ರೈಟ್‌ನೆಸ್, 72 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್ ಮತ್ತು 1000: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿರುವ ಬಜೆಟ್ ಫೋನ್‌ಗಳ ಮಧ್ಯಮ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್ ಮತ್ತು RAM!
ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 1.4GHz ಕ್ವಾಲ್ಕಾಮ್ ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಅನ್ನು ಹೊಂದಿದೆ.ಅಡ್ರಿನೊ 308 ಜಿಪಿಯು ಜೊತೆಗೂಡಿ ಬಂದಿರುವುದು ಸ್ವಲ್ಪ ವಿಶೇಷತೆ ಎನ್ನಬಹುದು. ಇನ್ನು 1GB RAM ಮತ್ತು 8GB ಆಂತರಿಕ ಸಂಗ್ರಹದೊಂದಿಗೆ ಬಿಡುಗಡೆಯಾಗಿರುವ ಫೋನ್ ಮೆಮೊರಿಯನ್ನು SD ಕಾರ್ಡ್ ಮೂಲಕ 128GB ವಿಸ್ತರಿಸುವ ಆಯ್ಕೆ ಇದೆ.

ಕ್ಯಾಮೆರಾ ಹೇಗಿದೆ?
ಎಫ್ / 2.0 ಅಪರ್ಚರ್, ಎಲ್ಇಡಿ ಫ್ಲ್ಯಾಶ್ ಮತ್ತು 1.12 ಎಮ್ಎಮ್ಪಿ ಪಿಕ್ಸೆಲ್ ಗಾತ್ರದೊಂದಿಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಹಾಗೂ ಮುಂದೆ ಎಫ್ / 2.2 ಅಪರ್ಚರ್ ಮತ್ತು 1.12 ಎಮ್ಎಮ್ ಪಿಕ್ಸೆಲ್ ಗಾತ್ರದ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳನ್ನು ನೀಡಲಾಗಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗುವ ಕ್ಯಾಮೆರಾಗಳ ವಿಶೇಷತೆಗಳು ಇದರಲ್ಲಿವೆ ಎನ್ನಬಹುದು.

ಇತರೆ ಫೀಚರ್ಸ್?
4G VoLTE, ಬ್ಲೂಟೂತ್ 4.1, ವೈಫೈ 802.11 ಬೌ / ಗ್ರಾಂ / ಎನ್, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ 2.0 ಬೆಂಬಲ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಂಡ್ರಾಯ್ಡ್ 8.1 (ಓರಿಯೊ ಗೋ ಆವೃತ್ತಿ) ಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ.


Click it and Unblock the Notifications








